Mysuru Dasara: ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ವರ್ಷದ ಮೈಸೂರು ದಸರಾ ಆಚರಣೆ 11 ದಿನ ನಡೆಯಲಿದೆ. ಸಾಮಾನ್ಯವಾಗಿ 10 ದಿನಗಳ ಆಚರಣೆಯಾಗುವ ದಸರಾ ಈ ಬಾರಿ ಪಂಚಮಿ ತಿಥಿಯ ಎರಡು ದಿನಗಳಿಂದಾಗಿ 11 ದಿನಗಳವರೆಗೆ ನಡೆಯಲಿದೆ. ಇದು ಜನರಲ್ಲಿ ಕುತೂಹಲ ಮತ್ತು ಗೊಂದಲವನ್ನು ಉಂಟುಮಾಡಿದೆ. ವಿಡಿಯೋ ನೋಡಿ.
ಮೈಸೂರು, ಜೂನ್ 19: ವಿಶ್ವ ವಿಖ್ಯಾತ ಮೈಸೂರು ದಸರಾ (Dasara) ಆಚರಣೆ ಈ ಬಾರಿ 11 ದಿನ ನಡೆಯಲಿದೆ. ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆ. ಆದರೆ ಮಧ್ಯೆದಲ್ಲಿ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 22ಕ್ಕೆ ದಸರಾ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 2ಕ್ಕೆ ವಿಜಯದಶಮಿ ಆಚರಿಸಲಾಗುವುದು. ಈ ಬಗ್ಗೆ ಟಿವಿ9ಗೆ ಡಾ ಶೆಲ್ವ ಪಿಳೈ ಅಯ್ಯಂಗಾರ್ ಹೇಳಿಕೆ ನೀಡಿದ್ದು, 1 ದಿನ ಅಧಿಕ ಆರಾಧನೆ ಪೂಜೆ ಹಿನ್ನೆಲೆ ಎಲ್ಲವೂ ಒಳಿತಾಗಲಿದೆ. ಅವಘಡಗಳು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಹೆಚ್ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ

