ರಾಯಚೂರಿನಿಂದ ಗದ್ವಾಲ್ಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಮೂವರ ಬಂಧನ
ಪೊಲೀಸರು ತಪಾಸಣೆಗೆಂದು ಬಂದಾಗ ಅಕ್ಕಿ ಸಾಗಿಸುತ್ತಿದ್ದ ಖದೀಮರು ಅಮಾಯಕರಂತೆ ನಟಿಸಿದ್ದಾರೆ. ವಾಹನದ ಚಾಲಕ ಮತ್ತು ಅವನ ಪಕ್ಕದಲ್ಲಿ ಕೂತಿರುವವ ವಾಹನದಲ್ಲಿ ಬೇರೇನೋ ಇದೆ ನಂಬಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪೊಲೀಸರು ಚೆಕ್ ಮಾಡಿದಾಗ 41 ಅಕ್ಕಿಮೂಟೆಗಳು ಪತ್ತೆಯಾಗಿವೆ. ಗದ್ವಾಲ್ ಪಟ್ಟಣವು ರಾಯಚೂರಿನಿಂದ ಸುಮಾರು 40 ಕಿಮೀ ದೂರವಿದ್ದು ಅದು ತೆಲಂಗಾಣ ರಾಜ್ಯಕ್ಕೆ ಸೇರಿದೆ.
ರಾಯಚೂರು, ಜೂನ್ 19: ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಖದೀಮರು ಕಾಳಸಂತೆಯಲ್ಲಿ (black-market) ಅಕ್ರಮವಾಗಿ ಮಾರಾಟ ಮಾಡೋದು ಹೊಸತೇನೂ ಅಲ್ಲ. ರಾಜ್ಯದ ಎಲ್ಲ ಭಾಗಗಳಲ್ಲಿ ಇದು ನಡೆಯುತ್ತದೆ. ರಾಯಚೂರಲ್ಲಿ ಇಂದು ಮಂತ್ರಾಲಯ ಮಾರ್ಗವಾಗಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಮೂವರನ್ನು ನಗರದ ನೇತಾಜಿನಗರ ಪೊಲೀಸರು ದಾಳಿ ನಡೆಸಿ ಹಿಡಿದಿದ್ದಾರೆ. ಅರೋಪಿಗಳನ್ನು ತೆಲಂಗಾಣ ಗದ್ವಾಲ್ ಮೂಲದ ರಾಜೇಶ್, ರಮೇಶ್ ಮತ್ತು ಶಿವರಾಜ್ ಎಂದು ಗುರುತಿಸಲಾಗಿದೆ. ಅವರು ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಅಕ್ಕಿ ಮೂಟೆಗಳು ಪತ್ತೆಯಾಗಿವೆ.
ಇದನ್ನೂ ಓದಿ: ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
