ಯಶ್ ಲುಕ್ನಲ್ಲಿ ಬಂದ ತುಕಾಲಿ ಸಂತೋಷ್; ನಗುವಿನ ಹೊಳೆ
ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲ ಕಡೆ ಫೇಮಸ್. ಅವರ ಲುಕ್ನ ಅನೇಕರು ಕಾಪಿ ಮಾಡಿದ ಉದಾಹರಣೆ ಇದೆ. ಈಗ ಯಶ್ ಅವರ ಲುಕ್ನ ತುಕಾಲಿ ಸಂತೋಷ್ ಕಾಪಿ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸಖತ್ ಫನ್ ಆಗಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ತುಕಾಲಿ ಸಂತೋಷ್ (Tukali Santosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ಅವರು ಈಗ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಅವರು ‘ಕ್ವಾಟ್ಲೆ ಕಿಚನ್’ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ನಲ್ಲಿ ಬಂದಿದ್ದಾರೆ. ಇತರ ಸ್ಪರ್ಧಿಗಳು ಕೊಡೋ ಕಾಟಕ್ಕೆ ಅವರು ಬಳಲಿ ಬೆಂಡಾಗಿ ಹೋಗಿದ್ದಾರೆ. ಕೊನೆಗೆ ನಾನು ‘ರಾಕಿಂಗ್ ಸ್ಟಾರ್ ಯಶ್ ಅಲ್ವೇ ಅಲ್ಲ’ ಎಂದು ಅಲವತ್ತುಕೊಂಡಿದ್ದಾರೆ. ಆ ಸಂದರ್ಭದ ಪ್ರೋಮೋ ವೈರಲ್ ಆಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.