ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
Toxic Movie: ಯಶ್ 'ಟಾಕ್ಸಿಕ್'ನ ಶೂಟಿಂಗ್ನ ಗರ್ಭಿಣಿ ನಟಿ ಕಿಯಾರಾ ಅಡ್ವಾಣಿ ಅವರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದಾರೆ ಎಂದು ವರದಿ ಆಗಿದೆ. ಇದು ಅವರ ಸಹಾಯ ಮನೋಭಾವ ಮತ್ತು ಉದಾರತೆಯನ್ನು ತೋರಿಸುತ್ತದೆ. ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ .

ನಟ ಯಶ್ (Yash) ಅವರು ‘ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ತಮ್ಮ ಗುಣವನ್ನು ಬದಲಿಸಿಕೊಂಡಿಲ್ಲ. ಅಭಿಮಾನಿಗಳು ಕಂಡಾಗ ಅವರು ಪ್ರೀತಿಯಿಂದ ಮಾತನಾಡುತ್ತಾರೆ. ಸಹಾಯ ಮನೋಭಾವನೆ ಕೂಡ ಅವರಲ್ಲಿ ಹಾಗೆಯೇ ಇದೆ. ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶಕಿ. ಈಗ ಯಶ್ ಅವರು ಕಿಯಾರಾ ಅಡ್ವಾಣಿಗಾಗಿ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಟಾಕ್ಸಿಕ್’ ಚಿತ್ರಕ್ಕೆ ಬೆಂಗಳೂರು, ಮುಂಬೈ, ಗೋವಾ ಸೇರಿದಂತೆ ವಿವಿಧ ಕಡೆಗಳಲ್ಲಿ ಶೂಟ್ ನಡೆದಿದೆ. ಈ ಮೊದಲು ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಬೇಕಿತ್ತು. ಅದಾಗಾಗಲೇ ನಟಿ ಕಿಯಾರಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಹೊರ ಬಂತು. ಈ ಕಾರಣಕ್ಕೆ ಚಿತ್ರದ ಶೂಟಿಂಗ್ ಲೊಕೇಶನ್ನ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದರು ಯಶ್.
‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ವೆಂಕಟ್ ನಾರಾಯಣ್ ಅವರು ಈ ಚಿತ್ರಕ್ಕೆ ನಿರ್ಮಾಪಕರು. ಯಶ್ ಕೂಡ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ಹೀಗಾಗಿ, ವೆಂಕಟ್ ಬಳಿ ಮನವಿ ಮಾಡಿ ಅವರು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶೂಟ್ನ ಮುಂಬೈಗೆ ಸ್ಥಳಾಂತರಿಸಿದ್ದಾರೆ.
ಪ್ರೇಗ್ನೆಂಟ್ ಆದ ಸಂದರ್ಭದಲ್ಲಿ ಓಡಾಟ ಮಾಡೋದು ಅಷ್ಟು ಸೂಕ್ತವಲ್ಲ. ಇದನ್ನು ಅರಿತ ಯಶ್ ಅವರು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡರು. ಕಿಯಾರಾ ಅವರು ಫೆಬ್ರವರಿಯಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ಅದಕ್ಕೂ ಮೊದಲೇ ಕಿಯಾರಾ ಭಾಗದ ಶೂಟ್ನ ತಂಡದವರು ಶೂಟ್ ಮುಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಯಶ್ ಅವರ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಯಶ್ ಮನಸ್ಸು ತುಂಬಾನೇ ದೊಡ್ಡದು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಯಶ್ ಅವರು ಇದೇ ಕಾರಣಕ್ಕೆ ಇಷ್ಟ ಆಗೋದು ಎಂದು ಬಾಯ್ತುಂಬ ಹೊಗಳಿದ್ದಾರೆ.
ಇದನ್ನೂ ಓದಿ: ಯಶ್ ಜೊತೆ ಇಲ್ಲ ಕ್ಲ್ಯಾಶ್; ‘ಟಾಕ್ಸಿಕ್’ಗೆ ಭಯಬಿದ್ದು ಹಿಂದೆ ಸರಿದ ಬನ್ಸಾಲಿ
‘ಟಾಕ್ಸಿಕ್’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಯಶ್, ಕಿಯಾರಾ ಅಡ್ವಾಣಿ, ನಯನತಾರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Thu, 19 June 25








