AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ

SS Rajamouli: ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಸೆಟ್ ನಿರ್ಮಿಸುತ್ತಿದ್ದಾರೆ. ಇದು ಬಾಹುಬಲಿ ಸರಣಿಯ ಸೆಟ್‌ಗಳಿಗಿಂತಲೂ ದೊಡ್ಡದಾಗಿದೆ. ವಾರಣಾಸಿಯನ್ನು ಹೈದರಾಬಾದ್‌ನಲ್ಲಿಯೇ ರಚಿಸಲಾಗುತ್ತಿದೆ. ಈ ಸೆಟ್‌ನ ಬಜೆಟ್ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ದುಬಾರಿ ಸೆಟ್ ಎನಿಸಿಕೊಂಡಿದೆ.

ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on:Jun 19, 2025 | 6:58 AM

Share

ನಿರ್ದೇಶಕ ರಾಜಮೌಳಿ (Rajamouli) ಅವರು ಸಿನಿಮಾ ಮಾಡುತ್ತಾರೆ ಎಂದರೆ ಅದರ ಬಜೆಟ್ ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ. ಇದಕ್ಕೆ ಕಾರಣ ಕಲಾವಿದರಿಂದ ಅವರು ಪಡೆಯೋ ದೀರ್ಘ ಕಾಲ್​ಶೀಟ್, ಅದ್ದೂರಿ ಸೆಟ್ ಹಾಗೂ ರಾಜಿ ಆಗದ ವಿಎಫ್​​ಎಕ್ಸ್. ಈ ಎಲ್ಲಾ ಕಾರಣದಿಂದ ಸಿನಿಮಾ ದುಬಾರಿ ಆಗುತ್ತದೆ. ಅದೇ ರೀತಿ ಕಲೆಕ್ಷನ್ ಕೂಡ ಜೋರೇ ಇರುತ್ತದೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾಗಾಗಿ ಚಿತ್ರರಂಗದ ಇತಿಹಾಸದಲ್ಲೇ ದುಬಾರಿ ಸೆಟ್ ಒಂದನ್ನು ನಿರ್ಮಾಣ ಮಾಡಲು ರಾಜಮೌಳಿ ರೆಡಿ ಆಗಿದ್ದಾರೆ. ಈ ಸೆಟ್​ನ ಬಜೆಟ್ ಬರೋಬ್ಬರಿ 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ರಾಜಮೌಳಿ ಅವರ ಆಲೋಚನೆಗಳು ಯಾವ ರೀತಿ ಇರುತ್ತವೆ ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಈ ಮೊದಲು ‘ಬಾಹುಬಲಿ’ ಸರಣಿಗೆ ಅವರು ಹಾಕಿದ ಸೆಟ್ ಅದ್ದೂರಿಯಾಗಿತ್ತು. ರಾಮೋಜಿ ಫಿಲ್ಮ್ ಸಿಟಿಯಲ್ಲೇ ಇದನ್ನು ನಿರ್ಮಾಣ ಮಾಡಲಾಗಿತ್ತು. ವಿಶೇಷ ಎಂದರೆ ಈ ಸೆಟ್​ಗಳನ್ನು ಅಲ್ಲಿಯವರು ನಾಶ ಮಾಡಿಲ್ಲ. ಬದಲಿಗೆ ಪ್ರೇಕ್ಷಣೀಯ ಸ್ಥಳವನ್ನಾಗಿ ಹಾಗೆಯೇ ಇಟ್ಟಿದ್ದಾರೆ. ಈಗ ಇದೇ ಸಿನಿಮಾ ನಗರಿಯಲ್ಲಿ ಮತ್ತೊಂದು ಅದ್ದೂರಿ ಸೆಟ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈ ಸೆಟ್​ಗಳು ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಲೇ ಎಗ್ಸೈಟ್ ಆಗಿದ್ದಾರೆ.

ವಾರಣಸಿಯಲ್ಲಿ ಸಿನಿಮಾದ ಶೂಟ್ ಮಾಡಬೇಕಿದೆ. ಆದರೆ, ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಅಲ್ಲಿ ಚಿತ್ರೀಕರಣ ಮಾಡೋದು ನಿಜಕ್ಕೂ ಚಾಲೆಂಜ್. ಅಲ್ಲದೆ, ಕೆಲವೊಮ್ಮೆ ತಮಗೆ ಇಷ್ಟಬಂದಂತೆ ಟೇಕ್​ನ ತೆಗೆದುಕೊಳ್ಳಲು ಸಾಧ್ಯವಾಗದೆಯೂ ಇರಬಹುದು. ಈ ಎಲ್ಲಾ ಕಾರಣದಿಂದ ರಾಜಮೌಳಿ ಅವರು ವಾರಣಸಿಯನ್ನು ಹೈದರಾಬಾದ್​ನಲ್ಲೇ ಸೃಷ್ಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಅಂಬಿ ಬೈಕ್ ಮೇಲೆ ಸುದೀಪ್; ಅಪರೂಪದ ಫೋಟೋ ಇಲ್ಲಿದೆ
Image
ಮುಚ್ಚುಮರೆ ಇಲ್ಲ; ಒಂದೇ ಕಾರಲ್ಲಿ ರಶ್ಮಿಕಾ-ವಿಜಯ್ ಜಾಲಿ ರೈಡ್
Image
ಕೇವಲ 25 ಲಕ್ಷ ರೂ. ಗಳಿಸಿದ ‘ಥಗ್ ಲೈಫ್; ಕರ್ನಾಟಕದಲ್ಲಿ ರಿಲೀಸ್ ಆದರೆ ನಷ್ಟ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ಶೂಟಿಂಗ್​ನ ನೈಜ ಪ್ರದೇಶದಲ್ಲಿ ಮಾಡುವುದು ಒಂದು ದೊಡ್ಡ ಚಾಲೆಂಜ್ ಆಗಿ ಪರಿಣಮಿಸುತ್ತದೆ. ಜನರು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜಮೌಳಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೊದಲು 10-20 ಕೋಟಿ ರೂಪಾಯಿಯಲ್ಲಿ ಸೆಟ್ ನಿರ್ಮಾಣ ಆದ ಬಗ್ಗೆ ನೀವು ಕೇಳಿರಬಹುದು. ಆದರೆ, ಇದೇ ಮೊದಲ ಬಾರಿಗೆ ಬರೋಬ್ಬರಿ 50 ಕೋಟಿ ರೂಪಾಯಿಯಲ್ಲಿ ಸೆಟ್ ನಿರ್ಮಾಣ ಆಗುತ್ತಿದೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: 20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್

ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ದೇವದಾಸ್’ ಸಿನಿಮಾದ ಸೆಟ್​​ಗಳು ಸಾಕಷ್ಟು ಗಮನ ಸೆಳೆದಿದ್ದವು. ಈ ಚಿತ್ರದ ಒಟ್ಟಾರೆ ಬಜೆಟ್ 50 ಕೋಟಿ ರೂಪಾಯಿ ಆಗಿತ್ತು. ಆದರೆ, ರಾಜಮೌಳಿ ಒಂದೇ ಸೆಟ್​ಗೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಸಿನಿಮಾದ ಬಜೆಟ್ 1000 ಕೋಟಿ ರೂಪಾಯಿ ಎನ್ನಲಾಗಿದೆ.  ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Thu, 19 June 25

Follow Us
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ