AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್

ಬಾಲಿವುಡ್ ನಟ ನಾನಾ ಪಾಟೇಕರ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅವರು ಕೇಳಿದಷ್ಟು ಸಂಬಳ ನೀಡಲು ನಿರ್ಮಾಪಕರು ರೆಡಿ ಇದ್ದಾರೆ. ‘ಎಸ್​ಎಸ್​ಎಂಬಿ 29’ ಸಿನಿಮಾದಲ್ಲಿ ನಾನಾ ಪಾಟೇಕರ್ ಅವರಿಂದ ಒಂದು ಪಾತ್ರ ಮಾಡಿಸಬೇಕು ಎಂಬುದು ನಿರ್ದೇಶಕ ರಾಜಮೌಳಿ ಅವರ ಉದ್ದೇಶ ಆಗಿತ್ತು. ಆದರೆ ನಾನಾ ಪಾಟೇಕರ್ ಅವರು ಆ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ.

20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್
Ss Rajamouli, Nana Patekar
ಮದನ್​ ಕುಮಾರ್​
|

Updated on: Jun 05, 2025 | 7:38 PM

Share

ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳ ಮೂಲಕ ಅವರು ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಮೌಳಿ ನಿರ್ದೇಶಿಸುವ ಸಿನಿಮಾಗಳಲ್ಲಿ ಪ್ರತಿ ಪಾತ್ರ ಕೂಡ ಹೈಲೈಟ್ ಆಗುತ್ತದೆ. ಹಾಗಾಗಿ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ಹಾತೊರೆಯುತ್ತಾರೆ. ಆದರೆ ಬಾಲಿವುಡ್​ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ರಾಜಮೌಳಿ ನೀಡಿದ ಅವಕಾಶವನ್ನು ತಿರಸ್ಕರಿಸಿದ್ದಾರೆ! ‘ಎಸ್​ಎಸ್​ಎಂಬಿ 29’ (SSMB 29) ಸಿನಿಮಾದಲ್ಲಿ ನಟಿಸಲು ನಾನಾ ಪಾಟೇಕರ್ ಅವರು ನೋ ಎಂದಿದ್ದಾರೆ.

‘ಎಸ್​ಎಸ್​ಎಂಬಿ 29’ ಚಿತ್ರದಲ್ಲಿ ಮಹೇಶ್ ಬಾಬು ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ಎಂಬ ಕಾರಣಕ್ಕೆ ಹೈಪ್ ಹೆಚ್ಚಾಗಿದೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡದವರು ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಹಲವು ಬಗೆಯ ಗಾಸಿಪ್ ಕೇಳಿಬರುತ್ತಿವೆ.

ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ನಟಿಸಲು ನಾನಾ ಪಾಟೇಕರ್ ಅವರಿಗೆ ಆಫರ್ ನೀಡಲಾಯಿತು. ಕಥೆ ಹೇಳಲು ರಾಜಮೌಳಿ ಅವರು ಪುಣೆಗೆ ತೆರಳಿದರು. ನಾನಾ ಪಾಟೇಕರ್ ಅವರ ಫಾರ್ಮ್​ಹೌಸ್​ನಲ್ಲಿ ಒಂದು ಸುತ್ತಿನ ಮಾತುಕಥೆ ಕೂಡ ನಡೆಯಿತು. ಆದರೆ ನಾನಾ ಪಾಟೇಕರ್ ಅವರಿಗೆ ಆ ಪಾತ್ರ ಇಷ್ಟ ಆಗಲಿಲ್ಲವಂತೆ. ಹಾಗಾಗಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ.

ಇದನ್ನೂ ಓದಿ
Image
ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?
Image
ರಾಜಮೌಳಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಹಳೆ ಗೆಳೆಯ, ಕಾರಣ?
Image
ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ
Image
ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹೆಸರು ಫಿಕ್ಸ್

ಅಚ್ಚರಿ ಏನೆಂದರೆ, ‘ಎಸ್​ಎಸ್​ಎಂಬಿ 29’ ಸಿನಿಮಾದಲ್ಲಿ ನಟಿಸಲು ನಾನಾ ಪಾಟೇಕರ್ ಅವರಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಕೊಡಲು ಕೂಡ ನಿರ್ಮಾಪಕರು ಸಿದ್ಧರಿದ್ದರು. ಆದರೂ ಕೂಡ ನಾನಾ ಪಾಟೇಕರ್ ಅವರು ಈ ಆಫರ್ ತಿರಸ್ಕರಿಸಿದರು ಎನ್ನಲಾಗಿದೆ. ಹಾಗಾದರೆ ನಾನಾ ಪಾಟೇಕರ್ ತಿರಸ್ಕರಿಸಿದ ಆ ಪಾತ್ರವನ್ನು ಬೇರೆ ಯಾವ ಕಲಾವಿದರು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ರಾಜಮೌಳಿ ಜೊತೆ ಸಿನಿಮಾ ಮಾಡುವಾಗಲೇ ಮತ್ತೊಂದು ಚಿತ್ರದ ಬಗ್ಗೆ ಆಲೋಚಿಸಿದ ಮಹೇಶ್ ಬಾಬು

ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ಎಸ್​ಎಸ್​ಎಂಬಿ 29’ ಎಂದು ಕರೆಯಲಾಗುತ್ತಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಎರಡನೇ ಹಂತದ ಶೂಟಿಂಗ್​ ಜೂನ್ 9ರಿಂದ ಹೈದರಾಬಾದ್​ನಲ್ಲಿ ಶುರು ಆಗಲಿದೆ. ಪ್ರಿಯಾಂಕಾ ಚೋಪ್ರಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.