ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ
SS Rajamouli: ನಿರ್ದೇಶಕ ಎಸ್ಎಸ್ ರಾಜಮೌಳಿ ಅದ್ಭುತ ನಿರ್ದೇಶಕ, ಅವರ ಸಿನಿಮಾಗಳಲ್ಲಿ ನಟಿಸಲು ದೊಡ್ಡ ದೊಡ್ಡ ನಟರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಸ್ವತಃ ರಾಜಮೌಳಿ ಆಗೊಮ್ಮೆ ಈಗೊಮ್ಮೆ ತಮ್ಮದೇ ಸಿನಿಮಾಗಳಲ್ಲಿ ನಟಿಸುವುದು ಸಹ ಉಂಟು. ಇದೀಗ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ರಾಜಮೌಳಿ, ರೇಡಿಯೋ ಜಾಕಿ ಯುವತಿಯೊಟ್ಟಿಗೆ ಸಖತ್ ಫ್ಲರ್ಟ್ ಮಾಡುತ್ತಿದ್ದಾರೆ.

ಎಸ್ಎಸ್ ರಾಜಮೌಳಿ ಎಷ್ಟು ಅದ್ಭುತವಾದ ಸಿನಿಮಾ ನಿರ್ದೇಶಕರೋ ಅಷ್ಟೆ ಅದ್ಭುತ ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ನಟ. ತಮ್ಮ ಪತ್ನಿಯನ್ನು ಕುಟುಂಬವನ್ನು ಅತಿಯಾಗಿ ಪ್ರೀತಿಸುವ ರಾಜಮೌಳಿ, ಸಿನಿಮಾ ಸೆಟ್ನಲ್ಲಾಗಲಿ, ಸಿನಿಮಾಗಳ ಹೊರತಾಗಲಿ ಸದಾ ಕುಟುಂಬದೊಟ್ಟಿಗೆ ಇರುತ್ತಾರೆ. ಅವರ ಸಿನಿಮಾ ಸೆಟ್ನಲ್ಲಿ ಬಹುತೇಕ ಎಲ್ಲ ಪ್ರಮುಖ ವಿಭಾಗಗಳಲ್ಲಿ ಅವರ ಕುಟುಂಬದವರೇ ಇರುತ್ತಾರೆ. ಆದರೆ ಇದೀಗ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ನಿರೂಪಕಿ ಒಬ್ಬರ ಹಿಂದೆ ಬಿದ್ದಿದ್ದಾರೆ. ಆ ಚೆಲುವೆ ಸಹ ತಡ ಮಾಡದೆ ರಾಜಮೌಳಿಗೆ ಪ್ರೊಪೋಸ್ ಮಾಡಿದ್ದಾರೆ. ಮುಂದೇನಾಯ್ತು?
ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ರಾಜಮೌಳಿ, ಚೆಲುವೆಯೊಬ್ಬಾಕೆಯ ಜೊತೆ ಬ್ಲೈಂಡ್ ಡೇಟ್ಗೆ ಹೋಗಿದ್ದಾರೆ. ಆ ರೇಡಿಯೋ ಜಾಕಿಗೆ ಹಲವು ವಾರಗಳ ಕಾಲ ಮೆಸೇಜ್ ಮಾಡಿ ಚಾಟ್ ಮಾಡಿ ಆಕೆಯನ್ನು ಕಾಫಿ ಶಾಪ್ಗೆ ಕರೆದಿದ್ದಾರೆ. ಆದರೆ ಆ ಚೆಲುವೆಗೆ ತಾನು ಭೇಟಿ ಆಗುತ್ತಿರುವುದು ನಿರ್ದೇಶಕ ರಾಜಮೌಳಿಯನ್ನು ಎಂಬುದು ಗೊತ್ತಿಲ್ಲ.
View this post on Instagram
ಯುವತಿ, ರಾಜಮೌಳಿಯನ್ನು ನೋಡಿದ ಕೂಡಲೇ ಕನಸು ಕಾಣಲು ಆರಂಭಿಸುತ್ತಾಳೆ, ಆ ಕನಸಿನ ದೃಶ್ಯಗಳಲ್ಲಿ ರಾಜಮೌಳಿ ಸಹ ಹೀರೋಗಳ ರೀತಿ ರೊಮ್ಯಾಂಟಿಕ್ ಮೂಡ್ನಲ್ಲಿ ಆಕ್ಟ್ ಮಾಡಿದ್ದಾರೆ. ವಾಸ್ತವಕ್ಕೆ ಬಂದರೆ, ಕಾಫಿ ಶಾಪ್ನಲ್ಲಿ ಕುಳಿತ ಆ ಚೆಲುವೆ ಒಂದೇ ಬಾರಿಗೆ ರಾಜಮೌಳಿಗೆ ಪ್ರೊಪೋಸ್ ಮಾಡಿ ಬಿಡುತ್ತಾರೆ. ಇದರಿಂದ ರಾಜಮೌಳಿ ಸಹ ಶಾಕ್ ಆಗುತ್ತಾರೆ. ಇದೇನು ರಾಜಮೌಳಿ ಯಾವುದಾದರೂ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರಾ? ಆ ಸಿನಿಮಾದ ದೃಶ್ಯಗಳಾ ಇವು? ಎಂಬ ಅನುಮಾನ ಬರುತ್ತದೆ.
ಇದನ್ನೂ ಓದಿ:SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ
ಆದರೆ ಈಗ ವೈರಲ್ ಆಗಿರುವ ದೃಶ್ಯಗಳು ಸಿನಿಮಾದ ದೃಶ್ಯಗಳಲ್ಲ ಬದಲಿಗೆ ಸಿನಿಮಾದ ಪ್ರೊಮೋಷನ್ನ ದೃಶ್ಯಗಳು. ರಾಜಮೌಳಿ ನಿರ್ದೇಶಿಸಿ 2006 ರಲ್ಲಿ ಬಿಡುಗಡೆ ಆಗಿದ್ದ ‘ವಿಕ್ರಮಾರ್ಕುಡು’ ಸಿನಿಮಾದ ಪ್ರಚಾರಕ್ಕಾಗಿ ಆಗ ಟಿವಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು. ಆಗ ರೇಡಿಯೋ ಜಾಕಿ, ಟಿವಿ ನಿರೂಪಕಿ ಆಗಿದ್ದ ಈಗ ನಟಿಯಾಗಿರುವ ರಶ್ಮಿ ಜೊತೆಗೆ ರಾಜಮೌಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ.
ಈಗಿನಂತೆ, ರಿಯಾಲಿಟಿ ಶೋಗಳಿಗೆ ಹೋಗಿ ಸಿನಿಮಾ ಅನ್ನು ಪ್ರಚಾರ ಮಾಡುವ ಪದ್ಧತಿ ಆಗ ಇರಲಿಲ್ಲ. ಸಿನಿಮಾ ಪ್ರಚಾರಕ್ಕಾಗಿ ಬರುವವರಿಗಾಗಿ ವಿಶೇಷ ಶೋ ಅನ್ನು ಟಿವಿಗಳವರು ಮಾಡುತ್ತಿದ್ದರು. ಫನ್ ರೀತಿಯ ಶೋ ಅದಾಗಿರುತ್ತಿತ್ತು. ಅಂಥಹುದೇ ಒಂದು ಕಾರ್ಯಕ್ರಮದಲ್ಲಿ ಅಥವಾ ಕಿರು ಎಪಿಸೋಡ್ನಲ್ಲಿ ರಾಜಮೌಳಿ ನಟಿಸಿದ್ದರು. ಅದೀಗ ವೈರಲ್ ಆಗುತ್ತಿದ್ದು, ರಾಜಮೌಳಿಯ ನಟನಾ ಪ್ರತಿಭೆಯನ್ನು, ಪ್ಲರ್ಟ್ ಮಾಡುವ ಪ್ರತಿಭೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ