- Kannada News Photo gallery Naga Chaitanya Sobhita Dhulipala visit spend time with cancer affected children
ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ನಾಗ ಚೈತನ್ಯ-ಶೋಭಿತಾ
Naga Chaitanya-Sobhita Dhulipala: ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ವಿವಾಹವಾದರು. ಇದೀಗ ಈ ಜೋಡಿ ಕೆಲ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೆ ಈ ನವ ದಂಪತಿ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಮಯ ಕಳೆದರು. ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದರು.
Updated on: Feb 22, 2025 | 10:57 AM

ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇವರ ವಿವಾಹ ಹಲವು ಬೇರೆ ಬೇರೆ ಕಾರಣಗಳಿಗಾಗಿ ಭಾರಿ ಸುದ್ದಿಯಾಗಿತ್ತು. ಇದೀಗ ಈ ಜೋಡಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಹೈದರಾಬಾದ್ನಲ್ಲಿರುವ ಸೇಂಟ್ ಜೂಡ್ ಇಂಡಿಯಾ ಚಿಲ್ಡ್ರನ್ ಸೆಂಟರ್ಗೆ ಭೇಟಿ ನೀಡಿದ್ದ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ, ಅಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ದಿನ ಕಳೆದರು.

ಕ್ಯಾನ್ಸರ್ ಪೀಡಿತ ಮಕ್ಕಳೊಡನೆ ಬೆರೆತ ಈ ದಂಪತಿಗಳು ಅವರೊಡನೆ ಆಟವಾಡಿದ್ದಾರೆ. ನಾಗ ಚೈತನ್ಯ ಅಂತೂ ಡ್ಯಾನ್ಸ್ ಮಾಡಿ ಮಕ್ಕಳನ್ನು ರಂಜಿಸಿದ್ದಾರೆ. ಹಾಡುಗಳನ್ನು ಹಾಡಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಆಟ ಆಡಿ ಸಂಭ್ರಮಿಸಿದ್ದಾರೆ.

ಕ್ಯಾನ್ಸರ್ ಸೆಂಟರ್ನ ಮಕ್ಕಳು ಸಹ ತಮ್ಮ ಪ್ರತಿಭೆಯನ್ನು ನಾಗ ಚೈತನ್ಯ ಮತ್ತು ಶೋಭಿತಾಗೆ ತೋರಿಸಿದ್ದಾರೆ. ನವ ದಂಪತಿ ಎದುರು ಡ್ಯಾನ್ಸ್ ಮಾಡಿದ್ದಾರೆ, ಹಾಡುಗಳನ್ನು ಹಾಡಿದ್ದಾರೆ. ಆಶುಭಾಷಣಗಳನ್ನು ಮಾಡಿದ್ದಾರೆ.

ಕ್ಯಾನ್ಸರ್ ಕೇಂದ್ರದ ಸಿಬ್ಬಂದಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಕ್ಯಾನ್ಸರ್ ಪೀಡಿತ ಮಕ್ಕಳ ಕಷ್ಟಗಳ ಬಗ್ಗೆ ಮಾಹಿತಿ ನೀಡಿದರು. ಅವರ ಆರೈಕೆಯ ಬಗ್ಗೆ ಮಾಹಿತಿ ನೀಡಿದರು.

ಕ್ಯಾನ್ಸರ್ ಸೆಂಟರ್ನ ಸಿಬ್ಬಂದಿಯೊಂದಿಗೂ ಮಾತುಕತೆ ನಡೆಸಿದ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ. ಸೆಂಟರ್ನ ಮಕ್ಕಳ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ, ಕ್ಯಾನ್ಸರ್ ಸೆಂಟರ್ಗೆ ಹಣಕಾಸು ದೇಣಿಗೆಯನ್ನು ಸಹ ನಿಡಿದ್ದಾರೆ. ದಂಪತಿಯ ವಿಶಾಲ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.



















