‘ಛಾವಾ’ ಸಿನಿಮಾಕ್ಕೆ ಮೊದಲ ಆಯ್ಕೆ ತೆಲುಗಿನ ಈ ಸ್ಟಾರ್ ನಟ?
Chhava Movie: ಛತ್ರಪತಿ ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜರ ಕತೆಯನ್ನು ‘ಛಾವಾ’ ಸಿನಿಮಾ ಮೂಲಕ ತೆರೆಗೆ ತರಲಾಗಿದೆ. ಸಿನಿಮಾದಲ್ಲಿ ಸಾಂಬಾಜಿ ಮಹಾರಾಜರ ಪಾತ್ರದಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ನಟಿಸಿದ್ದಾರೆ. ಆದರೆ ಈ ಪಾತ್ರಕ್ಕೆ ಇದಕ್ಕೆ ಮೊದಲು ತೆಲುಗಿನ ಸ್ಟಾರ್ ನಟರೊಬ್ಬರನ್ನು ಕೇಳಲಾಗಿತ್ತು ಎನ್ನಲಾಗುತ್ತಿದೆ. ಯಾರದು? ಸುದ್ದಿ ನಿಜವೇ?

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ‘ಛಾವಾ’ ಚರ್ಚೆ ಜೋರಾಗಿದೆ. ಸ್ವತಃ ಪ್ರಧಾನಿ ಮೋದಿ ‘ಛಾವಾ’ ಸಿನಿಮಾದ ಬಗ್ಗೆ ಗುಣಗಾನ ಮಾಡಿದ್ದಾರೆ. ಸಿನಿಮಾ ನೋಡಿದವರು ಭೇಷ್ ಭೇಷ್ ಎನ್ನುತ್ತಿದ್ದಾರೆ. ‘ಛಾವಾ’ ಸಿನಿಮಾ ವಾರದಿಂದ ವಾರಕ್ಕೆ, ದಿನದಿಂದ ದಿನಕ್ಕೆ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಕೆಲವೇ ವಾರಗಳಲ್ಲಿ ಈ ಸಿನಿಮಾ ಗಳಿಕೆಯಲ್ಲಿ ಕೆಲ ದೊಡ್ಡ ದಾಖಲೆಗಳನ್ನೇ ಮುರಿದು ಹಾಕುವ ಮುನ್ಸೂಚನೆ ನೀಡಿದೆ. ‘ಛಾವಾ’ ನೋಡಿದವರೆಲ್ಲ ನಾಯಕ ವಿಕ್ಕಿ ಕೌಶಲ್ರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಆದರೆ ಈ ಸಿನಿಮಾದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಆಗಿದ್ದಿದ್ದು ವಿಕ್ಕಿ ಕೌಶಲ್ ಅಲ್ಲ ಬದಲಿಗೆ ತೆಲುಗಿನ ಸ್ಟಾರ್ ನಟ ಎನ್ನಲಾಗುತ್ತಿದೆ.
‘ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್, ಛತ್ರಪತಿ ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜರ ಪಾತ್ರದಲ್ಲಿ ನಟಿಸಿದ್ದಾರೆ. ಸಾಂಬಾಜಿ ಮಹಾರಾಜರು,ಮೊಘಲರ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಸಿನಿಮಾ ಮಾಡಲಾಗಿದೆ. ಆದರೆ ಈ ಪಾತ್ರಕ್ಕೆ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರನ್ನು ಮೊದಲು ಆಯ್ಕೆ ಮಾಡಲಾಗಿತ್ತು, ಆದರೆ ಮಹೇಶ್ ಬಾಬು ಅವರು ಆ ಪಾತ್ರವನ್ನು ನಿರಾಕರಿಸಿದರು ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ.
ಆದರೆ ಸತ್ಯ ಅದಲ್ಲ, ಮಹೇಶ್ ಬಾಬು, ‘ಛಾವಾ’ ಸಿನಿಮಾದ ನಾಯಕ ಪಾತ್ರಕ್ಕೆ ಆಯ್ಕೆ ಆಗಿಯೇ ಇರಲಿಲ್ಲ. ‘ಛಾವಾ’ ಸಿನಿಮಾದ ನಿರ್ದೇಶಕ ಲಕ್ಷ್ಮಣ್ ಉಠೇಕರ್ ಅವರೇ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿರುವಂತೆ, ‘ಛಾವಾ’ ಸಿನಿಮಾದ ನಾಯಕ ಸಂಬಾಜಿ ಪಾತ್ರಕ್ಕೆ ವಿಕ್ಕಿ ಕೌಶಲ್ ಹೊರತಾಗಿ ಇನ್ಯಾರನ್ನೂ ಕನ್ಸಿಡರ್ ಮಾಡಲಾಗಿರಲಿಲ್ಲವಂತೆ. ನನ್ನ ಕನಸಿನಲ್ಲಿಯೂ ಸಹ ನಾನು ವಿಕ್ಕಿ ಕೌಶಲ್ ಹೊರತಾಗಿ ಇನ್ನೊಬ್ಬ ನಟನನ್ನು ಆ ಪಾತ್ರದಲ್ಲಿ ಊಹೆ ಮಾಡಿಕೊಂಡಿರಲಿಲ್ಲ. ಚಿತ್ರಕತೆ ಬರೆಯುವಾಗಿನಿಂದ ಹಿಡಿದು ಸಿನಿಮಾ ಪೂರ್ಣವಾಗುವವರೆಗೆ ವಿಕ್ಕಿ ಕೌಶಲ್ ಮಾತ್ರವೇ ನನ್ನ ಮನಸ್ಸಲ್ಲಿ ಇದ್ದರು’ ಎಂದಿದ್ದಾರೆ.
ಇದನ್ನೂ ಓದಿ:ಛತ್ರಪತಿ ಸಂಭಾಜಿ ಜೀವನಾಧರಿತ ಛಾವಾ ಸಿನಿಮಾಗೆ ಪ್ರಧಾನಿ ಮೋದಿಯಿಂದಲೂ ಭಾರೀ ಮೆಚ್ಚುಗೆ
ಮಹೇಶ್ ಬಾಬು ಈ ವರೆಗೆ ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಸಿನಿಮಾಗಳಲ್ಲಿ ನಟಿಸಿಲ್ಲ. ಆ ಜಾನರ್ ಅವರಿಗೆ ಸೂಟ್ ಸಹ ಆಗುವುದಿಲ್ಲ. ಇದೀಗ ಮಹೇಶ್ ಬಾಬು, ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ವಿಕ್ಕಿ ಕೌಶಲ್ ಈ ಹಿಂದೆ ನಿರ್ದೇಶಕ ಲಕ್ಷ್ಮಣ್ ಉಠೇಕರ್ ಅವರೊಟ್ಟಿಗೆ ‘ಜರ ಹಟ್ಕೇ, ಜರ ಬಚ್ಕೆ’ ಸಿನಿಮಾದಲ್ಲಿ ನಟಿಸಿದ್ದರು. ಆಗಲೇ ವಿಕ್ಮಿ ಕೌಶಲ್ ಅವರ ನಟನಾ ಪ್ರತಿಭೆಗೆ ಮಾರು ಹೋಗಿದ್ದ ಲಕ್ಷ್ಮಣ್, ‘ಛಾವಾ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ಅವರೇ ಸರಿ ಎಂದು ಈ ಹಿಂದೆಯೇ ನಿರ್ಧಾರ ಮಾಡಿ ಆಗಿತ್ತು. ಹಾಗಾಗಿ ಅವರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ