ರಾಜಮೌಳಿ ಜೊತೆ ಸಿನಿಮಾ ಮಾಡುವಾಗಲೇ ಮತ್ತೊಂದು ಚಿತ್ರದ ಬಗ್ಗೆ ಆಲೋಚಿಸಿದ ಮಹೇಶ್ ಬಾಬು
ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ಅವರ SSMB29 ಚಿತ್ರದಲ್ಲಿ ತೊಡಗಿದ್ದಾರೆ. ಆದರೆ, ಅವರು ರಾಮ್ ಚರಣ್ ಅವರ ನಿರ್ದೇಶಕರಾದ ಬುಚಿ ಬಾಬು ಜೊತೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ಬುಚಿ ಬಾಬು ಅವರು 'ಪೆದ್ದಿ' ಚಿತ್ರದ ನಂತರ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಮಹೇಶ್ ಬಾಬು ಈಗಾಗಲೇ ಕಥೆ ಕೇಳಿದ್ದು ಅವರಿಗೆ ಇಷ್ಟವಾಗಿದೆ ಎಂದು ವರದಿಗಳಿವೆ.

ಸದ್ಯ ಮಹೇಶ್ ಬಾಬು (Mahesh Babu) ಅವರು ‘SSMB29’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಇರೋದು ಗೊತ್ತೇ ಇದೆ. ಇತ್ತೀಚೆಗೆ ರಾಜಮೌಳಿ ಅವರು ಬೇಸಿಗೆ ರಜೆಯನ್ನು ಪಡೆದುಕೊಂಡಿದ್ದರು. ಈ ಬ್ರೇಕ್ನಲ್ಲಿ ಮಕ್ಕಳ ಜೊತೆ ಅವರು ಸುತ್ತಾಟ ನಡೆಸಿ ಬಂದಿದ್ದರು. ಈಗ ಮಹೇಶ್ ಬಾಬು ಮುಂದಿನ ಚಿತ್ರದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಅವರು ರಾಮ್ ಚರಣ್ ನಿರ್ದೇಶಕನ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಈ ವಿಚಾರ ಫ್ಯಾನ್ಸ್ಗೆ ಥ್ರಿಲ್ ಕೊಟ್ಟಿದೆ.
ಸಾಮಾನ್ಯವಾಗಿ ರಾಜಮೌಳಿ ಜೊತೆ ಸಿನಿಮಾ ಮಾಡುವಾಗ ಹೀರೋಗಳ ಗಮನ ಅಲ್ಲಿ ಮಾತ್ರ ಇರುತ್ತದೆ. ಬೇರೆ ಸಿನಿಮಾಗಳ ಬಗ್ಗೆ ಯೋಚಿಸೋಕೆ ಅಲ್ಲಿ ಸಮಯವೂ ಇರುವುದಿಲ್ಲ. ಇದು ರಾಜಮೌಳಿ ಅವರ ಷರತ್ತು ಕೂಡ ಹೌದು. ರಾಜಮೌಳಿ ಅವರ ಜೊತೆ ಸಿನಿಮಾ ಒಪ್ಪಿಕೊಂಡ ಬಳಿಕ ಬೇರೆ ಸಿನಿಮಾಗಳ ಬಗ್ಗೆ ಆಲೋಚಿಸುವಂತೆ ಇಲ್ಲ. ಆದರೆ, ಮಹೇಶ್ ಬಾಬು ಅವರು ಈ ವಿಚಾರವನ್ನು ತುಂಬಾನೇ ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಈಗಾಗಲೇ ಅವರು ಮತ್ತೊಂದು ಸಿನಿಮಾ ಬಗ್ಗೆ ಆಲೋಚಿಸಿ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ:ರಾಮ್ ಚರಣ್ ಪ್ರಯಾಣದ ಸಂಗಾತಿ ಉಪಾಸನಾ ಮಾತ್ರ ಅಲ್ಲ…
ರಾಮ್ ಚರಣ್ ಅವರು ಸದ್ಯ ಬುಚಿ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಗೊತ್ತೇ ಇದೆ. ಈ ಚಿತ್ರಕ್ಕೆ ‘ಪೆದ್ದಿ’ ಎನ್ನುವ ಟೈಟಲ್ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈಗ ಅವರು ಮುಂದಿನ ಚಿತ್ರವನ್ನು ಮಹೇಶ್ ಬಾಬು ಜೊತೆ ಮಾಡಲಿದ್ದಾರೆ ಎಂದು ಹೇಳಿ ವರದಿ ಆಗಿದೆ. ಇಬ್ಬರೂ ಒಂದು ಹಂತದ ಮಾತುಕತೆ ನಡೆಸಿಕೂಡ ಆಗಿದೆಯಂತೆ.
ಸದ್ಯ ಮಹೇಶ್ ಬಾಬು ಅವರು ಗಮನ ರಾಜಮೌಳಿ ಜೊತೆಗಿನ ಸಿನಿಮಾದ ಮೇಲೆ ಇದೆ. ಆದರೆ, ಮುಂಬರುವ ಎರಡು ವರ್ಷ ಅವರು ಇದರಲ್ಲೇ ಬ್ಯುಸಿ ಆಗಲಿದ್ದಾರೆ. ಆ ಬಳಿಕವೇ ಬುಚಿ ಬಾಬು ಜೊತೆಗಿನ ಸಿನಿಮಾ ಸೆಟ್ಟೇರಲಿದೆ. ಸದ್ಯ ಮಹೇಶ್ ಬಾಬು ಅವರು ಬುಚಿ ಬಾಬು ಅವರಿಂದ ಕಥೆ ಕೇಳಿದ್ದಾರಂತೆ. ಇದು ಮಹೇಶ್ ಬಾಬುಗೆ ಇಷ್ಟ ಆಗಿದೆ.
ಬುಚಿ ಬಾಬು ಅವರು ಇನ್ನೂ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿಲ್ಲ. ‘ಪೆದ್ದಿ’ ಮುಗಿದ ಬಳಿಕ ಅವರು ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ‘ಪೆದ್ದಿ’ ಸಿನಿಮಾದ ಭವಿಷ್ಯ ಏನಾಗುತ್ತದೆ ಎಂಬುದರ ಮೇಲೂ ಈ ಸಿನಿಮಾ ಸೆಟ್ಟೇರುತ್ತದೆಯೋ ಅಥವಾ ಇಲ್ಲವೋ ಎಂಬುದು ನಿರ್ಧಾರ ಆಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



