ರಾಮ್ ಚರಣ್ ಪ್ರಯಾಣದ ಸಂಗಾತಿ ಉಪಾಸನಾ ಮಾತ್ರ ಅಲ್ಲ…
Ram Charan-Upasana Konidel: ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟರ ಪತ್ನಿಯರಲ್ಲೇ ಅತ್ಯಂತ ಶ್ರೀಮಂತ ಮತ್ತು ಬುದ್ಧಿವಂತೆ ಎಂದರೆ ಅದು ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲ. ಸ್ವತಃ ಉದ್ಯಮಿಯಾಗಿರುವ ಉಪಾಸನಾ ಕೊನಿಡೆಲ, ತಮ್ಮ ಅತ್ತೆ ಅಂದರೆ ರಾಮ್ ಚರಣ್ ಅವರ ತಾಯಿಯನ್ನೂ ಸಹ ಉದ್ಯಮಿಯನ್ನಾಗಿದ್ದಾರೆ. ಅಂದಹಾಗೆ ಇದಕ್ಕೂ ರಾಮ್ ಚರಣ್ ಬ್ಯಾಗಿನಲ್ಲಿಯೂ ಎಲೆಕ್ಟ್ರಿಕ್ ಕುಕ್ಕರ್ಗೂ ಸಂಬಂಧವೇನು?

ದಕ್ಷಿಣದ ಸ್ಟಾರ್ ನಟರ ಪತ್ನಿಯರಲ್ಲಿ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಬುದ್ಧಿವಂತರೆಂದರೆ ಅದು ಉಪಾಸನಾ ಕೊನಿಡೆಲ (Upasana Konidela). ಅಪೋಲೊ ಹಾಸ್ಪಿಟಲ್ ಚೈನ್ನ ಮಾಲೀಕತ್ವ ಹೊಂದಿರುವ ಕುಟುಂಬಕ್ಕೆ ಸೇರಿದ ಉಪಾಸನಾ ಕೊನೆಡೆಲ ಸ್ವತಃ ಬಹಳ ಒಳ್ಳೆಯ ಉದ್ಯಮಿಯೂ ಹೌದು. ಇದರ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ತಾವು ಸೊಸೆಯಾಗಿ ಸೇರಿದ ಚಿರಂಜೀವಿ (Chiranjeevi) ಮನೆಯಲ್ಲಿಯೂ ಅವರು ತಮ್ಮ ಬ್ಯುಸಿನೆಸ್ ಮೈಂಡ್ ಪ್ರಯೋಗಿಸಿದ್ದು ಚಿರಂಜೀವಿ ಪತ್ನಿ ಸುರೇಖ ಅವರನ್ನು ಉದ್ಯಮಿಯನ್ನಾಗಿ ಮಾಡಿದ್ದಾರೆ. ಅದು ಹೇಗೆ? ನೀವೇ ತಿಳಿಯಿರಿ…
ರಾಮ್ ಚರಣ್ ಈಗ ಗ್ಲೋಬಲ್ ಸ್ಟಾರ್. ಸಿನಿಮಾ ಚಿತ್ರೀಕರಣ, ಪ್ರಚಾರ, ಬ್ಯುಸಿನೆಸ್, ಪ್ರವಾಸ ಇನ್ನೂ ಕೆಲವು ಕಾರಣಗಳಿಗೆ ಪದೇ ಪದೇ ಪ್ರಯಾಣ ಮಾಡುತ್ತಲೇ ಇರುತ್ತಾರೆ. ರಾಮ್ ಚರಣ್ ಸಾಮಾನ್ಯವಾಗಿ ಎಲ್ಲಿಗೇ ಹೋದರು, ವಿಶೇಷವಾಗಿ ವಿದೇಶಕ್ಕೆ ಹೋಗುವ ಸಮಯದಲ್ಲಿ ಪತ್ನಿ ಉಪಾಸನಾ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಉಪಾಸನಾಗೆ ಇದು ತುಸು ತಲೆ ನೋವಂತೆ, ಏಕೆಂದರೆ ರಾಮ್ ಚರಣ್ ಎಲ್ಲೇ ಹೋಗಲಿ ಒಂದು ಕುಕ್ಕರ್ ತೆಗೆದುಕೊಂಡು ಉಪಾಸನಾ ಅವರ ಜೊತೆಗೆ ಹೋಗುತ್ತಾರಂತೆ.
ರಾಮ್ ಚರಣ್, ಗ್ಲೋಬಲ್ ಸ್ಟಾರ್ ಆಗಿರಬಹುದು ಆದರೆ ಪಕ್ಕಾ ಭಾರತೀಯ, ರಾಮ್ ಚರಣ್ಗೆ ಭಾರತೀಯ ಊಟ ವಿಶೇಷವಾಗಿ ತೆಲುಗು ಊಟ ಇರಲೇ ಬೇಕಂತೆ. ದಿನದಲ್ಲಿ ಒಮ್ಮೆಯಾದರೂ ತೆಲುಗು ಊಟ ಮಾಡಲಿಲ್ಲವೆಂದರೆ ಅವರಿಗೆ ಆಗುವುದೇ ಇಲ್ಲವಂತೆ. ಆದರೆ ರಾಮ್ ಚರಣ್ ಹೋದಲ್ಲೆಲ್ಲ ಮನೆ ಊಟದಂಥಹಾ ಊಟ ಸಿಗುವುದಿಲ್ಲವಾದ್ದರಿಂದ ಉಪಾಸನಾ ಅವರು ಕುಕ್ಕರ್ ಒಂದನ್ನು ಜೊತೆಗೆ ಹೊತ್ತೊಯ್ಯುತ್ತಾರಂತೆ.
ಇದನ್ನೂ ಓದಿ:ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ ಆಸ್ತಿ ಮೌಲ್ಯ ಎಷ್ಟು ಸಾವಿರ ಕೋಟಿ?
ರಾಮ್ ಚರಣ್ ಅವರ ತಾಯಿ ಸುರೇಖಾ ಅವರು ತೆಲುಗು ಆಹಾರ ಸಂಸ್ಕೃತಿಯ ಪಲ್ಯ, ಸಾಂಬಾರ್, ರಸಂಗಳ ಮಿಶ್ರಣವನ್ನು ಮಾಡಿದ್ದು, ಅವುಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರಂತೆ. ಹೋದ ಕಡೆ ಆ ಎಲೆಕ್ಟ್ರಿಕ್ ಕುಕ್ಕರ್ ಅನ್ನು ಜೋಡಿಸಿ ಅನ್ನ ಮಾಡಿಕೊಂಡು, ರೆಡಿ ಮಿಕ್ಸ್ ಹಾಕಿಕೊಂಡು ಊಟ ಮಾಡುತ್ತಾರಂತೆ ರಾಮ್ ಚರಣ್. ದೇಸಿ ಊಟ ಇಲ್ಲದೇ ಹೋದರೆ ರಾಮ್ ಚರಣ್ಗೆ ಆಗುವುದೇ ಇಲ್ಲವಂತೆ.
ಅಂದಹಾಗೆ ರಾಮ್ ಚರಣ್ ತಾಯಿ, ಚಿರಂಜೀವಿ ಪತ್ನಿ ಸುರೇಖಾ ಹಾಗೂ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ಸೇರಿ ಪ್ರಾರಂಭ ಮಾಡಿರುವ ಸಂಸ್ಥೆ ‘ಅತ್ತಮ್ಮಾಸ್ ಕಿಚನ್’. ಸುರೇಖಾ ಹಾಗೂ ಚಿರಂಜೀವಿ ಅವರ ತಾಯಿ ಅಂಜನಾ ದೇವಿ ಅವರು ಸೇರಿಕೊಂಡು ಕೆಲವು ರೆಸಿಪಿಗಳನ್ನು ತಯಾರಿಸಿದ್ದು ಅವುಗಳನ್ನು ರೆಡಿ ಟು ಈಟ್ ರೀತಿಯಲ್ಲಿ ಸಿದ್ಧಪಡಿಸಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಈ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವುದು ಉಪಾಸನಾ ಕೋನಿಡೆಲ. ಅತ್ತಮಾಸ್ ಕಿಚನ್ನಲ್ಲಿ ರಸಂ, ಉಪ್ಮಾ, ಪುಲಿಹೋರ, ಸಾಂಬಾರ್, ಹಲವು ರೀತಿಯ ಪಚ್ಚಡಿಗಳನ್ನು ಸುರೇಖ ಅವರು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Sun, 13 April 25