ಆರ್ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೂಡ ಅಪ್ಪಟ ಆರ್ಸಿಬಿ ಫ್ಯಾನ್. ಆರ್ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಅವರು ಕೂಡ ಹೋಗಿದ್ದರು. ಅಷ್ಟುಹೊತ್ತಿಗಾಗಲೇ ಕಾಲ್ತುಳಿತ ಉಂಟಾಗಿತ್ತು. ಆ ಘಟನೆ ಹೇಗಿತ್ತು ಎಂಬುದನ್ನು ಚಂದನ್ ಶೆಟ್ಟಿ ಅವರು ವಿವರಿಸಿದ್ದಾರೆ. ಟಿವಿ9 ಕನ್ನಡ ಜೊತೆ ಅವರು ಮಾತನಾಡಿದ್ದಾರೆ.
ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೂಡ ಅಪ್ಪಟ ಆರ್ಸಿಬಿ (RCB) ಅಭಿಮಾನಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಂದನ್ ಶೆಟ್ಟಿ (Chandan Shetty) ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಹೋಗಿದ್ದರು. ಅಷ್ಟುಹೊತ್ತಿಗಾಗಲೇ ಕಾಲ್ತುಳಿತ ಉಂಟಾಗಿತ್ತು. ಆ ಘಟನೆ ಹೇಗಿತ್ತು ಎಂಬುದನ್ನು ಚಂದನ್ ಶೆಟ್ಟಿ ವಿವರಿಸಿದ್ದಾರೆ. ಟಿವಿ9 ಕನ್ನಡ ಜತೆ ಅವರು ಮಾತನಾಡಿದ್ದಾರೆ. ‘ಖುಷಿಯಿಂದ ಹೋದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ 3 ತನಕ ಹೋಗಲು ಸಾಧ್ಯವಾಗಲೇ ಇಲ್ಲ. ನಾನು ಬಂದಿದ್ದನ್ನು ನೋಡಿ ಜನರಿಗೆ ಖುಷಿ ಆಯಿತು. ಅಲ್ಲಿ ಜನರ ಗುಂಪು ಸೇರಿತು. ಆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು. ನಾನು ಕೂಡ ಒಂದು ಲಾಠಿ ಏಟು ತಿಂದೆ’ ಎಂದಿದ್ದಾರೆ ಚಂದನ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.