AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಿ ಬೈಕ್ ಮೇಲೆ ಸುದೀಪ್; ಅಪರೂಪದ ಫೋಟೋ ಇಲ್ಲಿದೆ

Ambareesh And Kichcha Sudeep: ಅಂಬರೀಶ್ ಮತ್ತು ಸುದೀಪ್ ಅವರ ನಿಕಟ ಬಾಂಧವ್ಯವನ್ನು ತೋರಿಸುವ ಅಪರೂಪದ ಫೋಟೋ ವೈರಲ್ ಆಗಿದೆ. ಸುದೀಪ್ ಅವರು ಅಂಬರೀಶ್ ಅವರನ್ನು ತುಂಬಾನೇ ಗೌರವಿಸುತ್ತಿದ್ದರು.ಅಂಬರೀಶ್ ಅವರ ನಿಧನದ ಬಳಿಕವೂ ಸುದೀಪ್ ಅವರ ಬೆಂಬಲ ಸುಮಲತಾ ಅವರಿಗೆ ಇದೆ.

ಅಂಬಿ ಬೈಕ್ ಮೇಲೆ ಸುದೀಪ್; ಅಪರೂಪದ ಫೋಟೋ ಇಲ್ಲಿದೆ
ಅಂಬರೀಷ್-ಸುದೀಪ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 18, 2025 | 7:45 AM

Share

ರೆಬೆಲ್ ಸ್ಟಾರ್ ಅಂಬರೀಷ್ (Ambareesh) ಅವರು ಸ್ಟಾರ್ ಹೀರೋ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇತ್ತು. ಅವರು ನಮ್ಮನ್ನು ಬಿಟ್ಟು ಹೋದರೂ ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಎಲ್ಲರೂ ಫಾಲೋ ಮಾಡುತ್ತಿದ್ದಾರೆ. ಅದರಲ್ಲೂ ಈಗಿನ ಸ್ಟಾರ್ ಹೀರೋ ಎನಿಸಿಕೊಂಡ ಯಶ್, ಸುದೀಪ್ ಹಾಗೂ ದರ್ಶನ್​ಗೆ ಅಂಬರೀಷ್ ಅವರು ಗಾಡ್ ಫಾದರ್ ಆಗಿದ್ದರು. ಈಗ ಒಂದು ಅಪರೂಪದ ಫೋಟೋ ವೈರಲ್ ಆಗಿದೆ.

ಅಂಬರೀಷ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಅಂಬರೀಷ್ ಅವರು ಬೈಕ್ ಏರಿ ರೈಡ್ ಮಾಡಿದರೆ, ಸುದೀಪ್ ಅವರು ಹಿಂಭಾಗದಲ್ಲಿ ಕುಳಿತ ಫೋಟೋ ಇದಾಗಿದೆ. ಇದನ್ನು ಅಭಿಮಾನಿಗಳ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಳೆಯ ಘಟನೆ ನೆನಪು ಮಾಡಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ
Image
ಮುಚ್ಚುಮರೆ ಇಲ್ಲ; ಒಂದೇ ಕಾರಲ್ಲಿ ರಶ್ಮಿಕಾ-ವಿಜಯ್ ಜಾಲಿ ರೈಡ್
Image
ಕೇವಲ 25 ಲಕ್ಷ ರೂ. ಗಳಿಸಿದ ‘ಥಗ್ ಲೈಫ್; ಕರ್ನಾಟಕದಲ್ಲಿ ರಿಲೀಸ್ ಆದರೆ ನಷ್ಟ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ
Image
ರವಿಚಂದ್ರನ್​ಗೆ ನೋವಾಗದಂತೆ ಸಿನಿಮಾ ಚೆನ್ನಾಗಿಲ್ಲ ಎಂದಿದ್ದ ತಂದೆ ವೀರಸ್ವಾಮಿ

ಸುದೀಪ್ ಅವರು ಅಂಬರೀಷ್ ಮೇಲೆ ಅಪಾರ ಪ್ರಿತಿ ಹಾಗೂ ಗೌರವವನ್ನು ಹೊಂದಿದ್ದರು. ಅಂಬರೀಷ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಷ್ ಅವರ ಯವ್ವನದ ಪಾತ್ರವನ್ನು ಸುದೀಪ್ ಅವರೇ ನಿರ್ವಹಿಸಿದ್ದರು. ಅಂಬರೀಷ್ ಎಂದರೆ ಅಷ್ಟು ಪ್ರೀತಿ ಸುದೀಪ್​ಗೆ. ಈ ಪ್ರೀತಿ ಈಗಲೂ ಹಾಗೆಯೇ ಇದೆ.

ಅಂಬರೀಷ್ ಅವರು ನಿಧನ ಹೊಂದಿದಾಗ ಸುದೀಪ್ ಅವರೇ ಸ್ವತಃ ತೆರಳಿ ಅಗತ್ಯ ಕೆಲವನ್ನು ಮಾಡಿದ್ದರು. ಇಡೀ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದರು. ನಿಧನದ ಬಳಿಕ ಮಣ್ಣು ಮಾಡುವವರೆಗೂ ಅವರು ಜೊತೆಗೆ ಇದ್ದರು. ಈಗ ಸುಮಲತಾ ಜೊತೆ ಸುದೀಪ್ ಯಾವಾಗಲೂ ಇದ್ದಾರೆ ಎನ್ನಬಹುದು.

ಇದನ್ನೂ ಓದಿ: ಅಖಿಲ್ ಅಕ್ಕಿನೇನಿ ಆರತಕ್ಷತೆಯಲ್ಲಿ ಮಿಂಚಿದ ಯಶ್-ಸುದೀಪ್; ರಾಕಿಭಾಯ್ ಹೊಸ ಲುಕ್ ರಿವೀಲ್

ಸುದೀಪ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೆ, ‘ಮ್ಯಾಕ್ಸ್’ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಂಡರು. ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು. ಇದಾದ ಬಳಿಕ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಅನೂಪ್ ಭಂಡಾರಿ ಅವರು ಇದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನವನ್ನು ನೋಡಲು ಕೂಡ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!