AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ, ಕ್ಯಾಬ್ ಬಳಸುವ ಗ್ರಾಹಕರಿಗೆ ಒಳ್ಳೆ ಸುದ್ದಿ; ಟ್ರಿಪ್ ಪೂರ್ಣಗೊಳ್ಳುವ ಮುನ್ನ ಟಿಪ್ ಕೋರುವಂತಿಲ್ಲ ಎಂದ ಸರ್ಕಾರ

ರೈಡ್ ಸ್ವೀಕರಿಸುವ ಮುನ್ನ ಅಥವಾ ಪ್ರಯಾಣ ಪೂರ್ಣಗೊಳ್ಳುವ ಮೊದಲು ಆ್ಯಪ್‌ಗಳಲ್ಲಿ ಪ್ರಕಟವಾಗುವ ‘ಟಿಪ್’ ನೀಡುವ ಎಲ್ಲಾ ಆಯ್ಕೆಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ಅಗ್ರಿಗೇಟರ್‌ಗಳಿಗೆ (ಆನ್‌ಲೈನ್ ಟ್ಯಾಕ್ಸಿ ಬುಕಿಂಗ್ ಆ್ಯಪ್‌ಗಳು) ನಿರ್ದೇಶನ ನೀಡಿದೆ. ಇದರಿಂದಾಗಿ ಆಟೋ, ಟ್ಯಾಕ್ಸಿ, ಕ್ಯಾಬ್, ಬೈಕ್ ರೈಡ್ ಬುಕ್ ಮಾಡುವ ಗ್ರಾಹಕರಿಗೆ ಇನ್ನೂ ಸ್ವಲ್ಪ ನಿರಾಳವಾಗಿದೆ. ಆನ್​ಲೈನ್ ಕ್ಯಾಬ್ ಬುಕಿಂಗ್ ಆ್ಯಪ್​ಗಳು ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗದರ್ಶಿ ಸೂತ್ರಗಳು, 2025’ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.

ಆಟೋ, ಕ್ಯಾಬ್ ಬಳಸುವ ಗ್ರಾಹಕರಿಗೆ ಒಳ್ಳೆ ಸುದ್ದಿ; ಟ್ರಿಪ್ ಪೂರ್ಣಗೊಳ್ಳುವ ಮುನ್ನ ಟಿಪ್ ಕೋರುವಂತಿಲ್ಲ ಎಂದ ಸರ್ಕಾರ
Cab BookingImage Credit source: Getty Image
ಸುಷ್ಮಾ ಚಕ್ರೆ
|

Updated on: Aug 12, 2026 | 10:28 PM

Share

ನವದೆಹಲಿ, ಆಗಸ್ಟ್ 12: ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆನ್‌ಲೈನ್ ಟ್ಯಾಕ್ಸಿ ಹಾಗೂ ಆಟೋ ಬುಕಿಂಗ್ ಆ್ಯಪ್‌ಗಳನ್ನು (Online Booking App) ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈಡ್ ಬುಕ್ ಮಾಡುವಾಗಲೇ ಚಾಲಕರಿಗೆ ‘ಅಡ್ವಾನ್ಸ್ ಟಿಪ್’ ನೀಡುವಂತೆ ಕೋರುವ ಫೀಚರ್ ಅನ್ನು ತಕ್ಷಣವೇ ಬಂದ್ ಮಾಡುವಂತೆ ಗ್ರಾಹಕರ ಹಿತರಕ್ಷಣೆ ಪ್ರಾಧಿಕಾರವು (CCPA) ಈ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಆ್ಯಪ್‌ಗಳಲ್ಲಿ ರೈಡ್ ಬುಕ್ ಮಾಡುವಾಗ, ಚಾಲಕರು ಬೇಗನೆ ರೈಡ್ ಸ್ವೀಕರಿಸಲಿ ಎಂಬ ಕಾರಣಕ್ಕೆ 20ರಿಂದ 100 ರೂ.ವರೆಗೆ ಮುಂಗಡವಾಗಿ ಟಿಪ್ಸ್ ನೀಡುವ ಆಯ್ಕೆಯನ್ನು ಆ್ಯಪ್‌ಗಳು ನೀಡುತ್ತಿದ್ದವು. ಟಿಪ್ ನೀಡದಿದ್ದರೆ ಚಾಲಕರು ಬುಕಿಂಗ್ ಕ್ಯಾನ್ಸಲ್ ಮಾಡುವುದು ಅಥವಾ ರೈಡ್ ಸ್ವೀಕರಿಸದೇ ಇರುವುದು ಹೆಚ್ಚಾಗಿತ್ತು. ಇದಕ್ಕೆಲ್ಲ ಸರ್ಕಾರ ಕಡಿವಾಣ ಹಾಕಿದೆ.

ಗ್ರಾಹಕರ ಹಕ್ಕುಗಳ ಉಲ್ಲಂಘನೆ:

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಇದನ್ನು ‘ಅನುಚಿತ ವ್ಯಾಪಾರ ಪ್ರಕ್ರಿಯೆ’ ಮತ್ತು ‘ಡಾರ್ಕ್ ಪ್ಯಾಟರ್ನ್’ ಎಂದು ಬಣ್ಣಿಸಿದೆ. ಸೇವೆಯ ಗುಣಮಟ್ಟವನ್ನು ನೋಡಿ ಸವಾರಿ ಮುಗಿದ ನಂತರ ಗ್ರಾಹಕರು ಸ್ವಇಚ್ಛೆಯಿಂದ ಟಿಪ್ಸ್ ನೀಡುವುದು ನಿಯಮ. ಆದರೆ, ಬುಕಿಂಗ್ ಆರಂಭದಲ್ಲೇ ಟಿಪ್ಸ್ ಕೇಳುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆ್ಯಪ್​​ ಮೂಲಕ ಕಸ ಸಂಗ್ರಹಣೆ ವಾಹನಗಳ ಮೇಲೆ ನಿಗಾಕ್ಕೆ ಮುಂದಾದ ಜಿಬಿಎ: ಕಾರ್ಯನಿರ್ವಹಣೆ ಹೇಗೆ?

ಕೆಲವು ರೈಡ್ ಅಗ್ರಿಗೇಟರ್ ಆ್ಯಪ್‌ಗಳು ಗ್ರಾಹಕರಿಗೆ ರೈಡ್ ಕಾಯ್ದಿರಿಸುವಾಗಲೇ “ಅಡ್ವಾನ್ಸ್ ಟಿಪ್”ನಂತಹ ಆಯ್ಕೆಗಳನ್ನು ಪ್ರದರ್ಶಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

ಆ್ಯಪ್ ಆಪರೇಟರ್‌ಗಳಿಗೆ ಖಡಕ್ ಎಚ್ಚರಿಕೆ:

ಕೇಂದ್ರ ನಗರಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಎಲ್ಲ ಪ್ರಮುಖ ಆ್ಯಪ್ ಆಪರೇಟರ್‌ಗಳಿಗೆ ತಮ್ಮ ಆಲ್ಗಾರಿದಮ್ ಮತ್ತು ಆ್ಯಪ್ ವಿನ್ಯಾಸದಲ್ಲಿ ಬದಲಾವಣೆ ಮಾಡಲು ಸೂಚಿಸಿದೆ. ಬುಕಿಂಗ್ ಸಮಯದಲ್ಲಿ ‘ಅಡ್ವಾನ್ಸ್ ಟಿಪ್’ ಸೇರಿಸುವ ಆಯ್ಕೆಯನ್ನು ತೆರವುಗೊಳಿಸಬೇಕು, ಸವಾರಿ ಪೂರ್ಣಗೊಂಡ ನಂತರವೇ ಈ ಆಯ್ಕೆ ಇರಬೇಕು ಎಂದು ಹೇಳಿದೆ.

ಇದನ್ನೂ ಓದಿ: ಏರ್‌ಪೋರ್ಟ್ ಪ್ರಯಾಣಿಕರೇ ಎಚ್ಚರ: ಬೆಂಗಳೂರಿನಲ್ಲಿ ರೈಡರ್‌ಗಳ ವಂಚಿಸಲು ನಕಲಿ ಕ್ಯಾಬ್ ಆ್ಯಪ್ ಬಳಸ್ತಿದ್ದಾರೆ ಚಾಲಕರು!

ಗ್ರಾಹಕರಿಗೆ ಏನು ಲಾಭ?:

ಸರ್ಕಾರದ ಈ ನಿರ್ಧಾರದಿಂದಾಗಿ ಗ್ರಾಹಕರು ಅನಗತ್ಯ ಹೆಚ್ಚುವರಿ ಹಣ ಪಾವತಿಸುವುದರಿಂದ ಮುಕ್ತಿ ಪಡೆಯಲಿದ್ದಾರೆ. ಬುಕಿಂಗ್ ಕ್ಯಾನ್ಸಲೇಷನ್ ದರ ಕಡಿಮೆಯಾಗಲಿದ್ದು, ರೈಡ್ ಪಡೆಯಲು ಟಿಪ್ಸ್ ನೀಡುವುದು ಕಡ್ಡಾಯವಲ್ಲ ಎಂಬ ವಾತಾವರಣ ಸೃಷ್ಟಿಯಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us