ಬೆಂಗಳೂರು ಡಿಸಿ ಕಚೇರಿಗೆ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳು, ಸಿಬ್ಬಂದಿಗೆ ಕ್ಲಾಸ್
ಕಂದಾಯ ಸಚಿವ ಕೃಷ್ಣಬೈರೇಗೌಡ ಇಂದು ಬೆಂಗಳೂರು ನಗರ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದು, ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ, ಹಾಜರಾತಿ ಲೋಪಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳ ನಿರ್ಲಕ್ಷ್ಯದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು, ಜೂನ್ 19: ಬೆಂಗಳೂರು ನಗರ ತಹಶೀಲ್ದಾರ್ ಕಚೇರಿ ಭೇಟಿ ಬೆನ್ನಲ್ಲೇ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಹಾಗೂ ನಗರ ಜಿಲ್ಲಾ ಕಚೇರಿಗೆ ಇಂದು ದಿಢೀರ್ ಭೇಟಿ (surprise visit) ಮಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ದಾಖಲೆಗಳನ್ನು ಪರಿಶೀಲನೆ ಮಾಡಿದರು. ಸಾರ್ವಜನಿಕರಿಂದ ಸಾಲುಸಾಲು ದೂರು ಹಿನ್ನೆಲೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು, ಸಿಬ್ಬಂದಿಗೆ ಕ್ಲಾಸ್
ದಿಢೀರ್ ಭೇಟಿ ಕುರಿತು ಸಚಿವ ಕೃಷ್ಣಬೈರೇಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರೆಕಾರ್ಡ್ ಸೆಕ್ಷನ್, ತಹಶೀಲ್ದಾರ್ ಸೆಕ್ಷನ್ಗೆ ಸಚಿವರು ಭೇಟಿ ನೀಡಿ ಅಧಿಕಾರಿಗಳು, ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಹಂಚಿಕೊಂಡ ವಿಡಿಯೋ
ಇನ್ನು ಸಚಿವರು ಕಚೇರಿಗೆ ಭೇಟಿ ನೀಡಿದ್ದರೂ ಎ.ಸಿ ಅಪೂರ್ವ ಬಿದರಿ ಕಚೇರಿಗೆ ಬಂದಿರಲಿಲ್ಲ. ಎ.ಸಿ ಎಲ್ಲಿ ಹೋಗಿದ್ದಾರೆ ಅಂತ ತಹಶಿಲ್ದಾರ್ಗೆ ಸಚಿವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನೌಕರರ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದ್ದು, ಯಾಕೆ ಸಹಿ ಮಾಡಿಲ್ಲವೆಂದರು. ಹಲವು ಲೋಪಗಳು ಪತ್ತೆ ಮಾಡಿದರು.
ಇದನ್ನೂ ಓದಿ: Mysuru Dasara: 11 ದಿನಗಳ ದಸರಾ ಆಚರಣೆ ಅಪಶಕುನವಾ? ಡಾ. ಶೆಲ್ವ ಪಿಳೈ ಅಯ್ಯಂಗಾರ್ ವಿವರಣೆ ಇಲ್ಲಿದೆ
ಕೆಲ ಅಧಿಕಾರಿಗಳು ನಾಳೆ ಹಾಜರಾತಿಯನ್ನು ಇಂದೇ ಹಾಕುರುವುದನ್ನು ಸಚಿವರು ಪತ್ತೆ ಮಾಡಿದರು. ಇನ್ನು ಯಾರೆಲ್ಲಾ ಫೀಲ್ಡ್ಗೆ ಹೋಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದನ್ನು ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಭೂಕಬಳಿಕೆ ಆರೋಪ: ಹೆಚ್ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ಈ ವೇಳೆ ಕೆಲ ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ ಕೃಷ್ಣಬೈರೇಗೌಡ, ಏಕೆ ಐದು ತಿಂಗಳಿಂದ ಸಮಸ್ಯೆ ಬಗೆಹರಿಸಿಲ್ಲ. ಆದೇಶವಾದರು ಏಕೆ ಕ್ರಮಕೈಗೊಂಡಿಲ್ಲ. ಈ ರೀತಿ ಇನ್ನೂ ಎಷ್ಟು ಜನರ ಸಮಸ್ಯೆಗಳು ಬಾಕಿ ಇವೆ. ಸಮಸ್ಯೆ ಬಗೆ ಹರಿಸಲು ಎಷ್ಟು ರೇಟ್ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







