ಬೆಂಗಳೂರಿನ ದಕ್ಷಿಣ ತಾಲೂಕು ಕಚೇರಿ ವರ್ಲ್ಡ್ ಫೇಮಸ್ ಆಗಿದೆ ಅಂತ ಗೇಲಿ ಮಾಡಿದ ಸಚಿವ ಕೃಷ್ಣ ಭೈರೇಗೌಡ
ಇದೇ ಕಚೇರಿಯಲ್ಲಿ ಅಸಿಸ್ಟಂಟ್ ಕಮೀಶನರ್ ಕೂಡ ಇರುತ್ತಾರೆ, ಸಚಿವರು ಕಚೇರಿಗೂ ಬಂದರೂ ಮೇಡಂ ನಾಪತ್ತೆ. ಇನ್ನು ಆವರು ಜನಸಾಮಾನ್ಯರ ಕೈಗೆ ಹೇಗೆ ಸಿಕ್ಕಾರು ಎಂದು ಸಚಿವ ಭೈರೇಗೌಡ ಪ್ರಶ್ನಿಸುತ್ತಾರೆ. ಅವರನ್ನು ಭೇಟಿ ಮಾಡೋದು ಹೇಗೆ ಅಂತ ಕೇಳಿದರೆ ಪಾಂಡುರಂಗ, ಮೊದಲ ಸಚಿವರೊಂದಿಗೆ ಮಾತಾಡಿದ್ದ ಅಶ್ವಿನಿ ಎನ್ನುವವರನ್ನು ಕರೆಸುತ್ತಾರೆ. ಅವರು ಪುನಃ ಬಂದು ಏನೇನೋ ಸಮಜಾಯಿಷಿಗಳನ್ನು ನೀಡುತ್ತಾರೆ.
ಬೆಂಗಳೂರು, ಜೂನ್ 19: ಬೆಂಗಳೂರು ದಕ್ಷಿಣ ತಾಲೂಕು ಆಫೀಸಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿದ್ದ ಅಧಿಕಾರಿಗಳಿಗೆ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿದರೆ ಕಕ್ಕಾಬಿಕ್ಕಿ! ಸಚಿವರ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಕೊಂಚ ಧಢೂತಿ ಎನಿಸುವ ವ್ಯಕ್ತಿಯೊಬ್ಬರು ಈ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರೂ ಮತ್ತು ಆಡಳಿತಾಧಿಕಾರಿಯಾಗಿದ್ದರರೂ ಕಚೇರಿಯ ಆಗುಹೋಗುಗಳ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಪಾಂಡುರಂಗ ಹೆಸರಿನ ಅಧಿಕಾರಿಯು ಮೊದಲು ಪಕ್ಕದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ, ಈಗ ಇಲ್ಲಿಗೆ ವರ್ಗವಾಗಿ ಬಂದಿದ್ದಾರೆ. ನೀವೆಲ್ಲ ಸೇರಿ ಕಚೇರಿಯನ್ನು ವಿಶ್ವಪ್ರಸಿದ್ಧ ಮಾಡಿದ್ದೀರಿ ಎಂದು ಸಚಿವ ಕೃಷ್ಣ ಭೈರೇಗೌಡ ಕುಹಕವಾಡುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ: ಹೊಸ ಬಾಂಬ್ ಸಿಡಿಸಿದ ಸಚಿವ ಕೃಷ್ಣ ಬೈರೇಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ