ನಾಳೆಯಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆ ಆರಂಭ

| Updated By: ಗಂಗಾಧರ​ ಬ. ಸಾಬೋಜಿ

Updated on: May 20, 2022 | 10:25 AM

ರಾಜ್ಯದ್ಯಾಂತ ಮಳೆ ಹಿನ್ನಲೆ ಎಲ್ಲ ಡಿಸಿಗಳಿಂದ ಪರೀಕ್ಷಾ ಕೇಂದ್ರಗಳ ಸುರಕ್ಷಿತೆಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಎಲ್ಲ ಡಿಸಿಗಳ ಜೊತೆ ಸಿಇಟಿ ಎಕ್ಸಾಂ ಸುರಕ್ಷತೆ ಹಾಗೂ ಮಳೆ ಸಮಸ್ಯೆಗಳ ಬಗ್ಗೆ ಮತ್ತು ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ನಾಳೆಯಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆ ಆರಂಭ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ 15,000 ಹುದ್ದೆಗಳ ನೇಮಕಾತಿಗೆ ನಾಳೆಯಿಂದ ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. 435 ಸಿಇಟಿ ಪರೀಕ್ಷೆ ಕೇಂದ್ರಗಳಲ್ಲಿ, 1,00683 ಅಭ್ಯರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ರಾಜ್ಯದ್ಯಾಂತ ಮಳೆ ಹಿನ್ನಲೆ ಎಲ್ಲ ಡಿಸಿಗಳಿಂದ ಪರೀಕ್ಷಾ ಕೇಂದ್ರಗಳ ಸುರಕ್ಷಿತೆಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಎಲ್ಲ ಡಿಸಿಗಳ ಜೊತೆ ಸಿಇಟಿ ಎಕ್ಸಾಂ ಸುರಕ್ಷತೆ ಹಾಗೂ ಮಳೆ ಸಮಸ್ಯೆಗಳ ಬಗ್ಗೆ ಮತ್ತು ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ. ಮೊಬೈಲ್, ವಾಚ್, ಎಲೆಕ್ಟ್ರಾನಿಕ್ ಡಿವೈಸ್​ಗೆ ಅವಕಾಶವಿಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 20 ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಅವಕಾಶವಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿಕೊಳ್ಳಲಾಗಿದೆ. ಯಾವುದೇ ಡ್ರಸ್ ಕೋಡ್ ನಿಗದಿ ಮಾಡಿಲ್ಲ.

ಇದನ್ನೂ ಓದಿ: Olympia Theatre: ಇತಿಹಾಸದ ಪುಟ ಸೇರಿದ ಒಲಂಪಿಯಾ ಚಿತ್ರಮಂದಿರ; ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಉಳಿದಿರೋದು 10 ಮಾತ್ರ!

ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಕೆಲವಡೆ ಮೆಟಲ್ ಡಿಟೆಕ್ಟರ್ ಅಳವಡಿಸಿಕೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನೆ ಅದೇ ಕೇಂದ್ರಕ್ಕೆ ಪರೀಕ್ಷಾ ಅಧಿಕಾರಿಗಳಾಗಿ ಬಳಸಿಕೊಳ್ಳೊದಿಲ್ಲ. ಪರೀಕ್ಷಾ ಕೇಂದ್ರದ ನೂರು ಮೀಟರ್ ಸುತ್ತಾ 144 ಸೆಕ್ಷನ್ ಇರಲಿದೆ. ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಗೃಹ ಇಲಾಖೆಯ ಜೊತೆ ಕೂಡ ಚರ್ಚೆ ಮಾಡಲಾಗಿದೆ ಎಂದು ಹಿಂದೆ ಸುದ್ದಿಗೊಷ್ಠಿಯಲ್ಲಿ ಸಚಿವ ಬಿ.ಸಿ.ನಾಗೇಶ್ ಹೇಳಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.