ಮಳೆ ಬಂದರೆ ಬೆಂಗಳೂರು ಜನರಿಗೆ ಸ್ವಿಮ್ಮಿಂಗ್ ಪೂಲ್ ಭಾಗ್ಯ

| Updated By: sandhya thejappa

Updated on: Oct 12, 2021 | 12:23 PM

ನೀರು ತೆಗೆಯುವ ಸಾಹಸಕ್ಕೆ ಕೈ ಹಾಕಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಂಡರ್ಪಾಸ್ ನಿರ್ಮಾಣ ಮಾಡಿದಾಗಿನಿಂದಲೂ ಇದೇ ಸಮಸ್ಯೆ ಎದುರಾಗಿದೆ.

ಮಳೆ ಬಂದರೆ ಬೆಂಗಳೂರು ಜನರಿಗೆ ಸ್ವಿಮ್ಮಿಂಗ್ ಪೂಲ್ ಭಾಗ್ಯ
ಸ್ವಿಮ್ಮಿಂಗ್ ಪೂಲ್​ನಂತಾಗಿರುವ ಅಂಡರ್​ಪಾಸ್
Follow us on

ಬೆಂಗಳೂರು: ಮಳೆ ಬಂದರೆ ಸಾಕು ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ತಲೆ ನೋವಂದು ಶುರುವಾಗುತ್ತದೆ. ಮಳೆ ಬಂದಾಗ ನಗರದ ಅಂಡರ್ಪಾಸ್ಗಳು ಗುಂಡಿಯಂತಾಗುತ್ತವೆ. ಸದ್ಯ ಸಹಕಾರನಗರ – ಕೊಡಿಗೆಹಳ್ಳಿ ಅಂಡರ್ಪಾಸ್ ಈಗ ಸ್ವಿಮ್ಮಿಂಗ್ ಪೂಲ್ ಆಗಿದೆ. 4 ಅಡಿಯಷ್ಟು ನೀರು ಅಂಡರ್ಪಾಸ್ನಲ್ಲೇ ನಿಂತಿದೆ. ನೀರು ತೆಗೆಯುವ ಸಾಹಸಕ್ಕೆ ಕೈ ಹಾಕಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಂಡರ್ಪಾಸ್ ನಿರ್ಮಾಣ ಮಾಡಿದಾಗಿನಿಂದಲೂ ಇದೇ ಸಮಸ್ಯೆ ಎದುರಾಗಿದೆ. ಶಾಸಕರು, ಸಂಸದರು, ಬಿಬಿಎಂಪಿ ಅಧಿಕಾರಿಗಳಂತು ಇಲ್ಲಿಗೆ ಬರೋದೆ ಇಲ್ಲ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕುಸಿದ ತಡೆಗೋಡೆ
ಭಾರಿ ಮಳೆಯಿಂದಾಗಿ ಬೆಂಗಳೂರಿನ ಕದಿರೇನಪಾಳ್ಯದಲ್ಲಿ ಕಾಂಪೌಂಡ್ ಕುಸಿದಿದೆ. ನಿನ್ನೆ (ಅ.11) ಅರ್ಧ ಕಾಂಪೌಂಡ್ ಗೋಡೆ ಕುಸಿದು ಬಿದ್ದಿತ್ತು. ನಿನ್ನೆ ಎಂಇಜಿ ಮಿಲಿಟರಿ ತಡೆಗೋಡೆ ಕುಸಿದು 10 ವಾಹನಗಳು ಜಖಂ ಆಗಿದ್ದವು. ನಿನ್ನೆ ಕುಸಿದ ತಡೆಗೋಡೆಯ ಮತ್ತರ್ಧ ಗೋಡೆ ಇಂದು ಕುಸಿದಿದೆ. ತಡೆಗೋಡೆ ಕುಸಿದು ಬಿಬಿಎಂಪಿ ನೀರಿನ ಟ್ಯಾಂಕ್, ಕುಡಿಯುವ ನೀರಿನ ಘಟಕಕ್ಕೆ ಹಾನಿಯಾಗಿದೆ. ತಡೆಗೋಡೆ ಒಡೆದು ಹೋದರು ಮಿಲಿಟರಿ ಅಧಿಕಾರಿಗಳು
ಕ್ಯಾರೆ ಅನ್ನುತ್ತಿಲ್ಲ.

ವ್ಯಕ್ತಿ ಬಲಿ
ಮಳೆ ಅವಾಂತರಕ್ಕೆ ಬೆಂಗಳೂರನಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ವಿದ್ಯುತ್ ಪ್ರವಹಿಸಿ ವೆಂಕಟೇಶ್(56) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಾರಿ ಮಳೆ ಹಿನ್ನೆಲೆ ನೀರು ಮನೆಗೆ ನುಗ್ಗಿತ್ತು. ಮನೆಯಲ್ಲಿದ್ದ ನೀರನ್ನು ವೆಂಕಟೇಶ್ ಹೊರಹಾಕುತ್ತಿದ್ದರು. ಈ ವೇಳೆ ವೆಂಕಟೇಶ್ ಸ್ವಿಚ್ ಬೋರ್ಡ್ ಮುಟ್ಟಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ

ಕೊರೊನಾ 3ನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ; ದಸರಾ, ದೀಪಾವಳಿ ಹಬ್ಬದ ನಂತರ ಕಾದಿದೆ ಅಪಾಯ!

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಜಲಾವೃತ; ವಿಡಿಯೋ ನೋಡಿ