ಕೊರೊನಾ 3ನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ; ದಸರಾ, ದೀಪಾವಳಿ ಹಬ್ಬದ ನಂತರ ಕಾದಿದೆ ಅಪಾಯ!
ಕೊರೊನಾ ಮೂರನೇ ಅಲೆ ಇನ್ನೂ ಬಂದಿಲ್ಲ. ಎರಡನೇ ಅಲೆ ಮುಗಿಯುವ ಲಕ್ಷಣ ಕಂಡು ಬರುತ್ತಿದೆ. ಸೆಪ್ಟೆಂಬರ್ ಕೊನೆ ವಾರ, ಇಲ್ಲವೇ ಅಕ್ಟೋಬರ್ನಲ್ಲಿ ಮೂರನೇ ಅಲೆ ಬಗ್ಗೆ ತಜ್ಞರು ಅಂದಾಜಿಸಲಾಗಿದೆ.
ಬೆಂಗಳೂರು: ಅಕ್ಟೋಬರ್, ನವೆಂಬರ್ ಹೊತ್ತಿಗೆ ಕೊರೊನಾ (Coronavirus) ಮೂರನೇ ಅಲೆ ಶುರುವಾಗುತ್ತದೆ ಅಂತ ತಜ್ಞರು ಈ ಹಿಂದೆ ಹೇಳಿದ್ದರು. ಸದ್ಯ ಕೊರೊನಾ ಮೂರನೇ ಅಲೆ ಬಗ್ಗೆ ಸುಳಿವಿಲ್ಲ. ಹಾಗಂತ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಎದುರಾಗಲಿದೆ. ಹಬ್ಬದ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸುವುದು ಕಷ್ಟಸಾಧ್ಯ. ಹಬ್ಬಕ್ಕೆ ಜನರು ಒಂದೆಡೆ ಸೇರುತ್ತಾರೆ. ಶಾಪಿಂಗ್ನಲ್ಲಿ ಎಲ್ಲರೂ ಒಂದೆಡೆ ಸೇರುತ್ತಾರೆ. ಇದರಿಂದ ರಾಜ್ಯದಲ್ಲಿ ಕಡಿಮೆಯಾಗಿರುವ ಕೊರೊನಾ ಕೇಸ್ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದೊಂದು ತಿಂಗಳು ಸಾಕಷ್ಟು ಎಚ್ಚರಿಕೆ ವಹಿಸೋದು ಅನಿವಾರ್ಯ ಅಂತ ಫನಾ ಅಧ್ಯಕ್ಷ ಡಾ.ಪ್ರಸನ್ನ ಸಲಹೆ ನೀಡಿದ್ದಾರೆ.
ಕೊರೊನಾ ಮೂರನೇ ಅಲೆ ಇನ್ನೂ ಬಂದಿಲ್ಲ. ಎರಡನೇ ಅಲೆ ಮುಗಿಯುವ ಲಕ್ಷಣ ಕಂಡು ಬರುತ್ತಿದೆ. ಸೆಪ್ಟೆಂಬರ್ ಕೊನೆ ವಾರ, ಇಲ್ಲವೇ ಅಕ್ಟೋಬರ್ನಲ್ಲಿ ಮೂರನೇ ಅಲೆ ಬಗ್ಗೆ ತಜ್ಞರು ಅಂದಾಜಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೊರೊನಾ ಕೇಸ್ ಇಳಿಮುಖ ಕಂಡಿತ್ತು. ಆದರೆ ದಸರಾ ಹಬ್ಬವಿರುವ ಈ ತಿಂಗಳು ನಿರ್ಲಕ್ಷ್ಯ ಮಾಡಿದರೆ ಕೊರೊನಾ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿರುತ್ತದೆ ಅಂತ ಡಾ.ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ಅಲೆ ಬರೋದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ಅಕ್ಟೋಬರ್ ಕೊನೆ ಇಲ್ಲವೇ ನವೆಂಬರ್ ತಿಂಗಳಿನಲ್ಲಿ 3ನೇ ಅಲೆ ಕೊರೊನಾ ಬರಬಹುದು. ಡಿಸೆಂಬರ್ನಲ್ಲಿ ಮೊದಲ ಲಸಿಕೆ ಸಂಪೂರ್ಣಗೊಳ್ಳಬೇಕು. ಹೀಗಾದರೆ ಕೊರೊನಾ ಕೇಸ್ ನಿಯಂತ್ರಣಕ್ಕೆ ತರಬಹುದು. ರಾಜ್ಯದಲ್ಲಿ ಲಸಿಕೆ ವೇಗ ಹೆಚ್ಚಿರುವುದು ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಅಂತ ಫನಾ ಅಧ್ಯಕ್ಷ ಡಾ.ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
‘ನಾನು ಕರ್ನಾಟಕ ಬಿಟ್ಟು ಹೋಗಲ್ಲ; ಇಲ್ಲಿನ ಜನರಿಗೆ ನನ್ನ ಕೃತಜ್ಞತೆ’: ನಟಿ ವಿಜಯಲಕ್ಷ್ಮೀ
Published On - 11:41 am, Tue, 12 October 21