ಬೆಂಗಳೂರು ಮಳೆಗೆ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ: ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್

|

Updated on: Nov 08, 2023 | 8:00 AM

ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ಇದರ ನಡುವೆ ಆಕಾಶದಲ್ಲಿ ಮೂಡಿದ ಬಣ್ಣ ಬಣ್ಣದ ಚಿತ್ತಾರ ಕಂಡು ಬೆಂಗಳೂರಿಗರು ಫುಲ್ ಖುಷ್ ಆಗಿದ್ದಾರೆ. ಆಕಾಶದಲ್ಲಿ ಮೂಡಿದ ಮಳೆಬಿಲ್ಲನ್ನು ಕಣ್ತುಂಬಿಕೊಂಡ ಜನ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಕಪ್ಷನ್​ಗಳನ್ನು ಬರೆದು ಕಾಮನಬಿಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ಮಳೆಗೆ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ: ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್
ಮಳೆಬಿಲ್ಲು
Follow us on

ಬೆಂಗಳೂರು, ನ.08: ಸೋಮವಾರ ಸಂಜೆ ಶುರುವಾದ ಮಳೆ ರಾತ್ರಿಯಿಡಿ ಸುರಿದು ನಾನಾ ಅವಾಂತರ ಸೃಷ್ಟಿ ಮಾಡಿತ್ತು (Bengaluru Rains). ರಸ್ತೆಗಳೆಲ್ಲಾ ಜಲಾವೃತವಾದ್ರೆ, ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿತ್ತು. ಅಂಗಡಿ-ಆಸ್ಪತ್ರೆಗಳಿಗೂ ಜಲದಿಗ್ಬಂಧನವಾಗಿತ್ತು.‌ ಮನೆ ಮುಂದೆ ನಿಲ್ಲಿಸಿದ ಕಾರು-ಬೈಕ್​ಗಳು ಮುಳುಗಿ ಹೋಗಿದ್ವು. ಮಳೆಯಿಂದ ಎದುರಾದ ಅವಘಡಗಳು ಒಂದು ಕಡೆಯಾದ್ರೆ ಮತ್ತೊಂದೆಡೆ ಹವಾಮಾನ ಬದಲಾವಣೆಯಿಂದ ಪರಿಸರಕ್ಕೆ ಉತ್ತೇಜನ ಸಿಕ್ಕಂತಾಗಿದೆ (Nature Magic). ತಂಗಾಳಿ, ಮಂಜು, ಆಕಾಶದಲ್ಲಿ ಬಣ್ಣದ ರಂಗು ಜನರಿಗೆ ಮುದನೀಡುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಕಂಡು ಬಂದ ಕಾಮನಬಿಲ್ಲಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್(ಟ್ವಿಟರ್​)ನಲ್ಲಿ ಬೆಂಗಳೂರಿನಲ್ಲಿ ಕಂಡು ಬಂದ ಮಳೆಬಿಲ್ಲಿನ ಸುಂದರ, ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಳಗ್ಗೆ ಕಂಡು ಬಂದ ಈ ಕಾಮನಬಿಲ್ಲು ಬೆಳಗಿನ ರಂಗನ್ನು ಪಸರಿಸಿದ. ಶುಭ ದಿನ ಎಂಬ ಬರೆದು ಪೋಸ್ಟ್ ಮಾಡಿದ್ದಾರೆ. ಮತ್ತೋರ್ವರು, ಇದು ಆಕಾಶದಲ್ಲಿ ಮೂಡಿದ ಸುಂದರ ಚಿತ್ರ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉತ್ತರ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಈ ಸುಂದರವಾದ ಮಳೆಬಿಲ್ಲು ಮೂಡಿತ್ತು ಎಂದು ಹಲವು ಮಂದಿ ನಾನಾ ರೀತಿಯಲ್ಲಿ ಕ್ಯಾಪ್ಷನ್ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಇಂದು 6:15 ಕ್ಕೆ ಎರಡು ಪೂರ್ಣ ಮಳೆಬಿಲ್ಲು ಕಂಡು ಬಂತು, ನಾನು ಇದೇ ಮೊದಲ ಬಾರಿಗೆ ಪಶ್ಚಿಮ ದಿಕ್ಕಿನಿಂದ ಕಾಮನಬಿಲ್ಲನ್ನು ನೋಡುತ್ತಿದ್ದೇನೆ ! ಈಗ ತಾನೇ ಸೂರ್ಯನ ಉದಯವಾಗಿದೆ, ಕಪ್ಪು ಮೋಡಗಳ ಅಡಿಯಲ್ಲಿ ಕಿರಿದಾದ ಅಂತರದಿಂದ ಬೆಳಕಿನ ಕಿರಣಗಳು ಹೊರ ಹೊಮ್ಮುತ್ತಿವೆ ಎಂದು ಎಕ್ಸ್​ ಬಳಕೆದಾರರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯಾದ್ಯಂತ 4 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ‌ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯದ 6 ಜಿಲ್ಲೆಗಳಿಗೆ ಎರಡು ದಿನ ಯಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ