Rajiv Gandhi University: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Dec 01, 2022 | 3:09 PM

ಮೊದಲ ವರ್ಷದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಫೇಲ್ ಆಗುತ್ತಿದ್ದು ಭಾರಿ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಪಾಸ್ ಮಾಡಲು ಬ್ರೋಕರ್ ಮೂಲಕ ಲಕ್ಷ‌ ಲಕ್ಷ ಬೇಡಿಕೆಯ ಆರೋಪ ಕೇಳಿ ಬಂದಿದೆ.

Rajiv Gandhi University: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
Follow us on

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿವಿಯ( Bengaluru Rajiv Gandhi University) ಪ್ರತಿಭಾವಂತ ಮೆಡಿಕಲ್ ವಿದ್ಯಾರ್ಥಿಗಳಿಗೆ(Medical Students) ಭಾರೀ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ. ಜಯನಗರದಲ್ಲಿರುವ ಆರೋಗ್ಯ ವಿವಿ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿನ ಎಂಬಿಬಿಎಸ್ ವಿದ್ಯಾರ್ಥಿಗಳು ಒಂದೆರಡು ಅಂಕಗಳಲ್ಲಿ ಫೇಲ್ ಆಗ್ತಿದ್ದಾರಂತೆ. ಬರೋಬ್ಬರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಅಂಕದೊಳಗೆ ಫೇಲ್ ಆಗಿದ್ದಾರೆ. ಹೀಗಾಗಿ ಕಾಲೇಜು ಆಡಳಿತ ಮಂಡಲಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಫೇಲ್ ಆಗುತ್ತಿದ್ದು ಭಾರಿ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಪಾಸ್ ಮಾಡಲು ಬ್ರೋಕರ್ ಮೂಲಕ ಲಕ್ಷ‌ ಲಕ್ಷ ಬೇಡಿಕೆಯ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅನ್ಯಾಯಕ್ಕೊಳಗಾದ 144 ಎಂಬಿಬಿಎಸ್ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಒಂದು ಪತ್ರಿಕೆಗೆ ಇಬ್ಬರು ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಲಾಗಿದ್ದು ಇದರಲ್ಲಿ ಯಾರು ಹೆಚ್ಚು ಅಂಕ ನೀಡಿದ್ದಾರೋ ಅದನ್ನು ಪರಿಗಣಿಸುವಂತೆ ವಿವಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚಿಸಿದ್ರೂ ಇದನ್ನು ರಾಜೀವ್ ಗಾಂಧಿ ಆರೋಗ್ಯ ವಿವಿ ಪಾಲನೆ ಮಾಡುತ್ತಿಲ್ಲ. ಆದೇಶವಾದ 15 ದಿನದ ಬಳಿಕ ಇದೀಗ ಮುಂದಿನ ವರ್ಷದಿಂದ ಈ ನಿಯಮವನ್ನು ಜಾರಿಗೆ ತರುತ್ತೇವೆ ಎಂದು ವಿವಿ ಪರೀಕ್ಷಾ ವಿಭಾಗ ಕುಲಸಚಿವರು ಹೇಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಆಡಳಿತ ಮಂಡಲಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಆರೋಗ್ಯ ಸಚಿವರ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ; ನಿಗದಿಯಂತೆ ಅಂತಿಮ ವರ್ಷದ ಎಂಬಿಬಿಎಸ್​ ಪರೀಕ್ಷೆ ನಡೆಸಲು ವಿವಿ ತೀರ್ಮಾನ

ರಾಜೀವ್ ಗಾಂಧಿ ವಿವಿ ವ್ಯಾಪ್ತಿಯಲ್ಲಿ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಗಳ ಸಂಖ್ಯೆ 6,500. ರಾಜ್ಯದ 42 ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳ ಪೈಕಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಡಿಮೆ ಅಂಕದಲ್ಲಿ ಒಂದು ಪೇಪರ್​ನಲ್ಲಿ ಫೇಲ್ ಆಗಿದ್ದಾರೆ.

ಎಂಬಿಬಿಎಸ್ ಪರೀಕ್ಷೆ ಪ್ರಕ್ರಿಯೆ ಹೇಗೆ?

  • 3 ವಿಷಯಗಳಿಗೆ ತಲಾ 200 ಅಂಕ
  •  ಪ್ರತಿ ವಿಷಯವನ್ನು ಇಬ್ಬರು ಮೌಲ್ಯಮಾಪಕರಿಂದ ಮೌಲ್ಯಮಾಪನ
  • ಇದರಲ್ಲಿ ಇಬ್ಬರು ಮೌಲ್ಯಮಾಪಕರ ಮಧ್ಯೆದ ಅಂಕ ( 15 % ಅಂಕ ವ್ಯತ್ಯಾಸ ಮೀರುವಂತಿಲ್ಲ)
  • ಒಂದು ವೇಳೆ 15 % ಅಂಕ ವ್ಯತ್ಯಾಸ ಹೆಚ್ಚಾದರೆ ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ
  • ಇದೀಗ ಇಬ್ಬರು ಮೌಲ್ಯಮಾಪಕರಲ್ಲಿ ಯಾರು ಹೆಚ್ಚು ಅಂಕ ನೀಡಿದ್ದಾರೊ ಆ ಅಂಕ ಪರಿಗಣಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.