ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಾಂಬರ್​ ಓಡಾಟದ ಮತ್ತೆರಡು ವಿಡಿಯೋ ರಿಲೀಸ್​ ಮಾಡಿದ ಎನ್​ಐಎ

ರಾಮೇಶ್ವರಂ ಕೆಫೆಯಲ್ಲಿ(Rameshwaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈಗಾಗಲೇ ಎನ್‌ಐಎ ಘೋಷಿಸಿತ್ತು. ಇದೀಗ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್​ನ ಓಡಾಟದ ಮತ್ತೆರಡು ವಿಡಿಯೋವನ್ನ ಎನ್​ಐಎ(NIA) ರಿಲೀಸ್​ ಮಾಡಿದೆ.

ಬೆಂಗಳೂರು, ಮಾ.08: ರಾಮೇಶ್ವರಂ ಕೆಫೆಯಲ್ಲಿ(Rameshwaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈಗಾಗಲೇ ಎನ್‌ಐಎ ಘೋಷಿಸಿತ್ತು. ಇದೀಗ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್​ನ ಓಡಾಟದ ಮತ್ತೆರಡು ವಿಡಿಯೋವನ್ನ ಎನ್​ಐಎ(NIA) ರಿಲೀಸ್​ ಮಾಡಿದ್ದು, ಆರೋಪಿ ಬಿಎಂಟಿಸಿ ಬಸ್​ನಲ್ಲಿ ಹತ್ತಿರುವ ಮತ್ತು ಬಸ್​ ನಿಲ್ದಾಣವೊಂದರಲ್ಲಿ ಓಡಾಡಿರುವ ವಿಡಿಯೋವನ್ನ ಬಿಡುಗಡೆ ಮಾಡಿದೆ.

ವಿಡಿಯೋ 1

 ಬಿಎಂಟಿಸಿ ಬಸ್​ನಲ್ಲಿ ಓಡಾಡಿದ ಬಾಂಬರ್​

 

ಬಿಎಂಟಿಸಿ ಬಸ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಆರೋಪಿ ಬಾಂಬರ್​ನ ಚಿತ್ರ ಸೆರೆಯಾಗಿದ್ದು, ಪೊಲೀಸರು ವಿಡಿಯೋವನ್ನು ವಿಶ್ಲೇಷಿಸುತ್ತಿದ್ದಾರೆ. ಆರೋಪಿಯು ಮಾಸ್ಕ್ ಇಲ್ಲದೆ ಬಸ್ಸಿನೊಳಗೆ ಕುಳಿತಿರುವುದು ಕೂಡ ಕಂಡುಬಂದಿದೆ.

ವಿಡಿಯೋ 2

ಬಳ್ಳಾರಿ ಬಸ್​ ನಿಲ್ದಾಣದಲ್ಲಿ ಓಡಾಡಿದ ಬಾಂಬರ್​

ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಬಳ್ಳಾರಿಯಲ್ಲಿ ಶಂಕಿತ ಬಾಂಬರ್​ಗಾಗಿ ಹುಡುಕಾಟ ನಡೆಸಿರುವ ಎನ್ಐಎ ಅಧಿಕಾರಿಗಳು

ಇನ್ನು ಗುರುವಾರ ಬೆಂಗಳೂರಿನ ರಾಮೇಶ್ವರಂ ಕೆಫೆ  ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತನ ಮಹತ್ವದ ಸುಳಿವು ಪತ್ತೆಯಾಗಿತ್ತು. ಶಂಕಿತ ತುಮಕೂರು ಮೂಲಕ ಬಳ್ಳಾರಿಗೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಲ್ಲಿಂದ ಬೀದರ್​​ನತ್ತ ಹೊರಟಿರುವುದಾಗಿ ಮಾಹಿತಿ ದೊರೆತಿತ್ತು. ಅದರಂತೆ ಇದೀಗ ಬಾಂಬರ್ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮಾರ್ಚ 1 ನೇ ತಾರೀಖು ರಾತ್ರಿ ಒಂಬತ್ತು ಗಂಟೆಗೆ ಬಸ್ ನಿಲ್ದಾಣದಲ್ಲಿ ಓಡಾಡಿರುವ ಬಾಂಬರ್,
ಮುಖಕ್ಕೆ ಮಾಸ್ಕ್ ಹಾಕಿ, ಲೈಟ್ ಬ್ಲೂ ಕಲರ್ ಟಿ ಶರ್ಟ, ಬ್ಲಾಕ್ ಪ್ಯಾಂಟ್ ಹಾಕಿಕೊಂಡು ಓಡಾಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Fri, 8 March 24

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us