Rapido Auto: ಇನ್ನೂ ಮುಂದೆ ಆಟೋಗಳಲ್ಲಿಯು ಸೀಟ್​​ ಬೆಲ್ಟ್, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ಎಂದ ರ‍್ಯಾಪಿಡೋ

ಬೆಂಗಳೂರಿನಂತಹ ಅಧಿಕ ಜನದಟ್ಟನೆ, ವಾಹನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರಾಪಿಡೋ ತಿಳಿಸಿದೆ.

Rapido Auto: ಇನ್ನೂ ಮುಂದೆ ಆಟೋಗಳಲ್ಲಿಯು ಸೀಟ್​​ ಬೆಲ್ಟ್, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ಎಂದ ರ‍್ಯಾಪಿಡೋ
ಆಟೋಗಳಲ್ಲಿ ಸೀಟ್​​ ಬೆಲ್ಟ್
Image Credit source: Autocar Professional

Updated on: Apr 22, 2023 | 10:46 AM

ಮುಖ್ಯಾಂಶಗಳು

  • ಆಟೋ-ಟೆಕ್ ಅಗ್ರಿಗೇಟರ್ ಆಗಿರುವ ರಾಪಿಡೋ #RapidoSafetyFirst ಎಂಬ ರಾಷ್ಟ್ರವ್ಯಾಪಿ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ.
  • ಬೆಂಗಳೂರಿನಂತಹ ಅಧಿಕ ಜನದಟ್ಟನೆ, ವಾಹನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರ‍್ಯಾಪಿಡೋ ತಿಳಿಸಿದೆ.
  • 4 ಹಂತಗಳಲ್ಲಿ ಚಾಲಕರ ಹಿನ್ನೆಲೆ , ನಿಯಮಿತ ವಾಹನ ತಪಾಸಣೆ ಮುಂತಾದವುಗಳನ್ನು ಪರಿಶೀಲಿಸಿ    ಆಯ್ಕೆ ಮಾಡಲಾಗುವುದು.

ಅಪಘಾತಗಳನ್ನು ಆದಷ್ಟು ಕಡಿಮೆ ಮಾಡಿ, ಅತ್ಯಮೂಲ್ಯವಾದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಟೋ-ಟೆಕ್ ಅಗ್ರಿಗೇಟರ್ ಆಗಿರುವ ರ‍್ಯಾಪಿಡೋ  #RapidoSafetyFirst ಎಂಬ ರಾಷ್ಟ್ರವ್ಯಾಪಿ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಬೆಂಗಳೂರಿನ ಆಟೋ ರಿಕ್ಷಾಗಳಿಗೆ ಸೀಟ್​​ ಬೆಲ್ಟ್​​​ಗಳನ್ನು ಅಳವಡಿಸುವುದಾಗಿ ಹೇಳಿಕೊಂಡಿದೆ.

ಬೆಂಗಳೂರಿನಂತಹ ಅಧಿಕ ಜನದಟ್ಟನೆ, ವಾಹನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರ‍್ಯಾಪಿಡೋ ತಿಳಿಸಿದೆ. ಇದಲ್ಲದೇ ಇಂತಹ ಸುರಕ್ಷತಾ ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯ. ಅಂದರೆ ಆಟೋಗಳಲ್ಲಿ ನೀಡಿರುವ ಸೀಟ್​​ ಬೆಲ್ಟ್​​​ಗಳನ್ನು ಧರಿಸಿ ನಮ್ಮ ಅಭಿಯಾನಕ್ಕೆ ಬೆಂಬಲ ನೀಡಿ ಎಂದು ರ‍್ಯಾಪಿಡೋ ಸಂಸ್ಥೆ ಮನವಿ ಮಾಡಿದೆ.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸಂಭ್ರಮದ ರಂಜಾನ್, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್, ಬಿಗಿ ಪೊಲೀಸ್ ಬಂದೋಬಸ್ತ್

ಸುರಕ್ಷತಾ ಮುಂದುವರಿದ ಭಾಗವಾಗಿ ರಾಪಿಡೋ ತನ್ನ ಚಾಲಕರನ್ನು ಆಯ್ಕೆ ಮಾಡುವಾಗಲೂ ಪ್ರಯಾಣಿಕರಿಗೆ ಸುರಕ್ಷತೆಯನ್ನು ಮುಂದಿಟ್ಟುಕೊಂಡು 4 ಹಂತಗಳಲ್ಲಿ ಚಾಲಕರ ಹಿನ್ನೆಲೆ , ನಿಯಮಿತ ವಾಹನ ತಪಾಸಣೆ ಮುಂತಾದವುಗಳನ್ನು ಪರಿಶೀಲಿಸಿ    ಆಯ್ಕೆ ಮಾಡಲಾಗುವುದು. ಜೊತೆಗೆ ಮಹಿಳಾ ಪ್ರಯಾಣಿಕರ ವಿಳಾಸಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:46 am, Sat, 22 April 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us