ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೋಚಕ ಕರಾಟೆ ಕದನಗಳು; ಜಪಾನ್ ವಿಶ್ವ ಕರಾಟೆ ಸ್ಪರ್ಧೆ ಆರಂಭ

|

Updated on: Jan 26, 2024 | 3:20 PM

ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಬೆಂಗಳೂರು, ಜನವರಿ 26: 2200ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು, 2019ರ ಮಿಸ್ ಜಪಾನ್ (Japan) ನವೋಕೋ ಓಹಾರ ಗ್ರ್ಯಾಂಡ್ ಎಂಟ್ರಿ ಹಾಗೂ ನೂರಾರು ಪೋಷಕರ ಸಮಾಗಮ. ಸಾವಿರಾರು ಸ್ಪರ್ಧಾಳುಗಳ ಬಿಗ್​ಫೈಟ್. ಇದು ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾ (OSK Federation of India – India’s Largest Karate School) ಆರಂಭಿಸಿರುವ ಅಂತಾರಾಷ್ಟ್ರೀಯ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್​ಶಿಪ್​​ನ (International Karate and Kobudo Championship) ಮೊದಲ ದಿನದ ಹೈಲೈಟ್.

ಹೌದು, ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಅಲ್ಲದೇ, ಚಾಂಪಿಯನ್​ಶಿಪ್​​ಗೆ ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಲಾಯ್ತು. ಇದೇ ವೇಳೆ ಗಣ್ಯರ ಜೊತೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಏಷ್ಯಾ ಕರಾಟೆ ಫೆಡೆರೇಷನ್​ನ ಜಡ್ಜ್ ಆಗಿರೋ ಶಿಹಾನ್ ಸುರೇಶ್ ಕೆಣಿಚಿರಾ ಕೂಡ ವೇದಿಕೆ ಹಂಚಿಕೊಂಡಿದ್ರು.

ಇದಾದ ನಂತರ ಚಿಕ್ಕ ಮಕ್ಕಳ ಕುಮುಟೆ ಸ್ಪರ್ಧೆ ಆರಂಭವಾಯ್ತು. ಮಕ್ಕಳಿಂದ ಹಿಡಿದು ಒಟ್ಟು 6 ಕೋರ್ಟ್​​ಗಳಲ್ಲಿ ಕರಾಟೆ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಸ್ವತಃ ಜಪಾನ್ ಸ್ವಪ್ನ ಸುಂದರಿ ನವೋಕೊ ಓಹಾರ ಮೆಡಲ್ ಧರಿಸಿ, ಅಭಿನಂದಿಸಿದರು. ಒಟ್ಟಾರೆ, ರಿಪಬ್ಲಿಕ್ ಡೇ (Republic Day 2024) ಕರಾಟೆ ಚಾಂಪಿಯನ್​ಶಿಪ್​​ ಮೊದಲ ದಿನವೇ ಭಾರಿ ಯಶಸ್ಸು ಕಂಡಿದೆ. ಇನ್ನೂ ಎರಡು ದಿನ ಮತ್ತಷ್ಟು ರೋಚಕ ಕರಾಟೆ ಕದನಗಳು ನಡೆಯಲಿವೆ.

Published On - 3:17 pm, Fri, 26 January 24