ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪುಂಡರ ಹಾವಳಿ ಹೆಚ್ಚಾಗಿದೆ. ರಸ್ತೆಗೆ ಬರುವ ಮಹಿಳೆಯರ ಜೊತೆ ಪುಡಿ ರೌಡಿಗಳು ಅಸಭ್ಯವಾಗಿ ವರ್ತಿಸುತ್ತಿದ್ದು, ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಅಸಭ್ಯ ವರ್ತನೆ (Rude Behavior) ಬಗ್ಗೆ ಪ್ರಶ್ನಿಸಿದರೆ ಅಂತವರ ಮೇಲೆ ಹಲ್ಲೆ ನಡೆಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಹಲಸೂರು ಮಾರುಕಟ್ಟೆಯಲ್ಲಿ ಇಬ್ಬರು ನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ದುಷ್ಕೃತ್ಯದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ವ್ಯಕ್ತಿ ಪೊಲೀಸ್ ಮಹಾನಿರ್ದೇಶಕರಿಗೆ ಟ್ವೀಟ್ ಮಾಡಿದ್ದಾರೆ.
ಮದ್ಯ ಸಾಗಾಟ ಮಾಡುತ್ತಿದ್ದವರು ಬಂಧನ:
ವಿಜಯಪುರ: ಮಹಾರಾಷ್ಟ್ರಕ್ಕೆ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದದಲ್ಲಿ ಅಬಕಾರಿ ಪೊಲೀಸರ ದಾಳಿ ವೇಳೆ ನಿಶಾಂತ್ ಕಾಂಬಳೆ ಹಾಗೂ ಯಲ್ಲಾಲಿಂಗ ಹೊನ್ನೂರ ಬಂಧನಕ್ಕೊಳಗಾಗಿದ್ದಾರೆ. ಬಂಧಿತರಿಂದ 10 ಬಾಕ್ಸ್ ಗೋವಾ ಮಧ್ಯ ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಟರಿಗಳನ್ನ ಕದಿಯುತ್ತಿದ್ದ ಆರೋಪಿಗಳ ಅರೆಸ್ಟ್:
ಬೆಲೆ ಬಾಳುವ ಬ್ಯಾಟರಿಗಳನ್ನ ಕದಿಯುತ್ತಿದ್ದ ಆರೋಪಿಗಳ ಅರೆಸ್ಟ್ ಆಗಿದ್ದಾರೆ. ಚಾಮರಾಜಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಚಾಮರಾಜಪೇಟೆ, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಯುಪಿಎಸ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 1 ಲಕ್ಷ ಮೌಲ್ಯದ 9 ಬ್ಯಾಟರಿಗಳು ಹಾಗೂ ಒಂದು ಆಟೋ ಜಪ್ತಿ ಮಾಡಿದ್ದಾರೆ.
ಮಾರಕಾಸ್ತ್ರ ಹಿಡಿದು ಓಡಾಡಿದ್ದ ವಿದೇಶಿ ಪ್ರಜೆ ಸೆರೆ:
ಮದ್ಯದ ಅಮಲಿನಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ್ದ ವಿದೇಶಿ ಪ್ರಜೆಯನ್ನು ಸೆರೆಹಿಡಿಯಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಿದೇಶಿ ಪ್ರಜೆ ಮಾರಕಾಸ್ತ್ರ ಹಿಡಿದು ಓಡಾಡಿದ್ದ. ಓಕಾವೋ ಲಿಯೋಸ್ ಬಂಧಿತ ವಿದೇಶಿ ಪ್ರಜೆ. ಈತ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಹೆದರಿಸಿದ್ದ. ವಶಕ್ಕೆ ಪಡೆಯಲು ಹೋದ ಎಎಸ್ಐ ಗೆ ಕೈಯಿಂದ ಹಲ್ಲೆ ನಡೆಸಿದ್ದ. ಶರಣಾಗುವಂತೆ ಹೇಳಿದ್ದರೂ ಮಾರಕಾಸ್ತ್ರ ಬೀಸುತ್ತಾ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದ.
ಇದನ್ನೂ ಓದಿ
Shivratri 2022: ಈ ದಿನ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ; ಶಿವರಾತ್ರಿ ವಿಶೇಷತೆ ಏನು?