ಲಾಕ್​ಡೌನ್​ ವೇಳೆ 3 ದಿನಗಳಲ್ಲಿ ಕಾಮಗಾರಿ ಪೂರ್ಣ, 5 ಕೋಟಿ ರೂ. ಮಂಜೂರು ​​: ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್​​

|

Updated on: Mar 31, 2023 | 8:18 PM

ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಎಲ್ಲಾ ಕಚೇರಿಗಳು ಬಂದಾಗಿದ್ದವು. ಈ ಸಮಯದಲ್ಲಿ ಇಂಜಿನಿಯರ್​ವೊಬ್ಬರು ಕಾಮಗಾರಿಯೊಂದಕ್ಕೆ 5 ಕೋಟಿ ಮಂಜೂರು ಮಾಡಿದ್ದಾರೆ. ಈ ವಿಚಾರ ಕರ್ನಾಟಕ ಹೈಕೋರ್ಟ್​​ ಮೆಟ್ಟಿಲೇರಿದ್ದು, ನ್ಯಾಯಾಲಯ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ.

ಲಾಕ್​ಡೌನ್​ ವೇಳೆ 3 ದಿನಗಳಲ್ಲಿ ಕಾಮಗಾರಿ ಪೂರ್ಣ, 5 ಕೋಟಿ ರೂ. ಮಂಜೂರು  ​​: ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್​​
ಕರ್ನಾಟಕ ಹೈಕೋರ್ಟ್​​
Follow us on

ಬೆಂಗಳೂರು: ಕೊರೊನಾ ಲಾಕ್​ಡೌನ್​ (Covid Lockdown) ಸಮಯದಲ್ಲಿ ಎಲ್ಲಾ ಕಚೇರಿಗಳು ಬಂದಾಗಿದ್ದವು. ಈ ಸಮಯದಲ್ಲಿ ಇಂಜಿನಿಯರ್​ವೊಬ್ಬರು ಕಾಮಗಾರಿಯೊಂದಕ್ಕೆ 5 ಕೋಟಿ ಮಂಜೂರು ಮಾಡಿದ್ದಾರೆ. ಈ ವಿಚಾರ ಕರ್ನಾಟಕ ಹೈಕೋರ್ಟ್​ (Karnaraka Highcourt)​ ಮೆಟ್ಟಿಲೇರಿದ್ದು, ನ್ಯಾಯಾಲಯ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಮತ್ತು ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪ್ರತಿಕ್ರಿಯೆ ಕೇಳಿದೆ. ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಹಣವನ್ನು ಮಂಜೂರು ಮಾಡಿದ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್​ ಕೆ ಶ್ರೀನಿವಾಸ್​​ ವಿರುದ್ಧ ತನಿಖೆ ನಡೆಸಲು ಅನುಮತಿ ನಿರಾಕರಿಸಿರುವ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.

ಮಂಡ್ಯ ಜಿಲ್ಲೆಯಲ್ಲಿ 2019ರ ಅಕ್ಟೋಬರ್​​ನಲ್ಲಿ ಭಾರೀ ಮಳೆಯಾಗಿ ಪ್ರವಾಹ ಬಂದಿತ್ತು. ಆ ಸಮಯದಲ್ಲಿ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಹರಹಳ್ಳಿ ಮತ್ತು ಹೊಸಹೊಳಲು ಕೆರೆಗಳು ಕೋಡಿ ಬಿದ್ದಿದ್ದವು. ಈ ಕಾರಣಕ್ಕೆ ಕೆರೆಗಳು ಹಾಳಾಗಿವೆ, ಅವುಗಳನ್ನು ಅಭಿವೃದ್ಧಿ ಮಾಡಬೇಕೆಂದು 2020 ಮಾರ್ಚ್​ 27 ರಂದು ಗುತ್ತಿಗೆ ನೀಡಲಾಗಿತ್ತು. ವರ್ಕ್​ ಆಡರ್​ ಪಡೆದ ಗುತ್ತಿಗೆದಾರ ಮಾರ್ಚ್​ 31 ರಂದು ಕಾಮಗಾರಿ ಮುಗಿದಿದೆ ಎಂದು ಬಿಲ್​​ ಕ್ಲೈಮ್​ ಮಾಡಿದ್ದರು. ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ 5 ಕೋಟಿ ರೂ. ಹಣವನ್ನು ಕಾರ್ಯಾನಿರ್ವಾಹಕ ಎಂಜಿನಿಯ್​​ ಕೆ ಶ್ರೀನಿವಾಸ್​ ಹಣ ಮಂಜೂರು ಮಾಡಿದ್ದರು.

ಇದನ್ನೂ ಓದಿ: ಮೋದಿ ರಾಜ್ಯ ದಂಡಯಾತ್ರೆಗೆ 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್: ಬಿಜೆಪಿ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

ಲಾಕ್​ಡೌನ್​ ಸಮಯದಲ್ಲಿ ಎಲ್ಲ ಕಚೇರಿಗಳು ಮುಚ್ಚಿದಾಗಲೂ ಗುತ್ತಿಗೆದಾರನಿಗೆ ಬಿಲ್​ ಮಂಜೂರು ಮಾಡಲು ಹೇಗೆ ಸಾಧ್ಯವೆಂದು ನಾಗೇಗೌಡ ಎಂಬುವರು ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ಖಾಸಗಿ ದೂರು ನೀಡಿದ್ದರು. ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಶ್ರೀನಿವಾಸ್ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲವು ಕಾಮಗಾರಿಗಳನ್ನು ತುರ್ತಾಗಿ ಕಾರ್ಯಗತಗೊಳಿಸಬೇಕಾದಾಗ ಕರ್ನಾಟಕ ಪಾರದರ್ಶಕತೆ ಕಾಯಿದೆಯ ಸೆಕ್ಷನ್ 4(ಜಿ) ಅಡಿಯಲ್ಲಿ ವಿನಾಯಿತಿ ಪಡೆಯುವಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ವಾದಿಸಿದ್ದರು. ಅವರ ವಾದವನ್ನು ಆಲಿಸಿದ್ದ ಲೋಕಾಯುಕ್ತ ಎಂಜಿನಿಯರ್ ಪ್ರಕರಣದಲ್ಲಿ ಯಾವುದೇ ದೋಷಗಳಿಲ್ಲವೆಂದು ಹೇಳಿತ್ತು.

ನಾಗೇಗೌಡರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟುಮಾಡುತ್ತವೆ ಈ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರವು ಕ್ರಮ ಕೈಗೊಳ್ಳದೇ ಇರುವುದು ಮತ್ತಷ್ಟು ಆಘಾತವನ್ನುಂಟುಮಾಡಿದೆ. ಲೋಕಾಯುಕ್ತದಲ್ಲಿಯೂ ಪ್ರಕರಣದ ವಿಚಾರಣೆ ಈಗಾಗಲೇ ಮುಕ್ತಾಯಗೊಂಡಿದೆ ಎಂಬುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Fri, 31 March 23