ಬೆಂಗಳೂರು: ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ಅಡ್ಡದಾರಿ ಹಿಡಿದಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಿಸಿದ್ದ ಮಂಜುನಾಥ ಸೇರಿ ನಾಲ್ವರನ್ನ ರಾಜಾಜಿನಗರ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಮಂಜುನಾಥ, ಶಿವಕುಮಾರ, ಗೋಪಾಲ, ಚಂದ್ರಶೇಖರ ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿದಕ್ಕೆ ನಿರ್ಮಾಪಕನ ಬಂಧನ ಮಾಡಲಾಗಿದೆ. ಸಿನಿಮಾಗೆ ಕೋಟ್ಯಂತರ ರೂ. ಬಂಡವಾಳ ಹೂಡಿದ್ದ ಮಂಜುನಾಥ, ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣದೆ ನಷ್ಟವಾಗಿತ್ತು. ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ಮಂಜುನಾಥ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ.
ಇದನ್ನೂ ಓದಿ: ನೀವು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಮುಂಚೆ ಇದನ್ನು ಒಮ್ಮೆ ಓದಿ
ಜಾಹೀರಾತು ನೀಡಿದ್ದ ಮಂಜುನಾಥನನ್ನು ಪುಷ್ಪಕುಮಾರ್ ಎನ್ನುವವರು ಸಂಪರ್ಕಿಸಿದ್ದಾರೆ. ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಮಂಜುನಾಥ 2 ಲಕ್ಷ ಪಡೆದಿದ್ದ. ಯಾರದ್ದೋ ಸೈಟ್ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದ. ದಾಖಲೆ ಕೇಳಿದಾಗ ಮಂಜುನಾಥನ ವಂಚನೆ ಜಾಲ ಬಯಲಾಗಿತ್ತು. ರಾಜಾಜಿನಗರ ಪೊಲೀಸ್ ಠಾಣೆಗೆ ಪುಷ್ಪಕುಮಾರ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸ್ ಸಿಬ್ಬಂದಿ, ನಿರ್ಮಾಪಕ ಮಂಜುನಾಥ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ಅಂದರ್
ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಘು, ಸಾಯಿ ಕಿರಣ್ ಬಂಧಿತ ಆರೋಪಿಗಳು. ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಂದ ಬಂಧನ ಮಾಡಿದ್ದು, ಖಾಸಗಿ ಕಂಪನಿಯ ಲೋಗೋ ಬಳಸಿ ಆರೋಪಿಗಳು ವಂಚಿಸುತ್ತಿದ್ದರು. ಪ್ರೈವೇಟ್ ಏಜೆನ್ಸಿ ಆಲ್ಕನ್ ಇಂಡಿಯಾ ಕಂಪನಿ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲಿ ಮಾಡಲಾಗಿದ್ದು, 11 ಮೊಬೈಲ್, 2 ಸಿಪಿಯು, ಲ್ಯಾಪ್ಟಾಪ್, 43000 ಹಣ ಜಪ್ತಿ ಮಾಡಲಾಗಿದೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Sat, 4 June 22