ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು! 3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ

ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ.

ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು! 3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ
3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯವನ್ನು ಸೇರ್ಪಡೆ ಮಾಡಲಾಗಿದೆ
Follow us
TV9 Web
| Updated By: sandhya thejappa

Updated on:Jun 04, 2022 | 12:03 PM

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ (Rohith Chakrathirtha) ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ಮತ್ತೊಂದು ಎಡವಟ್ಟು ನಡೆದಿದೆ. 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ (Books) ಒಂದೇ ಪದ್ಯವನ್ನು ಸೇರ್ಪಡೆಗೊಳಿಸಿದ್ದು, ದಿನಕ್ಕೊಂದು ಯಡವಟ್ಟು ಬಹಿರಂಗವಾಗುತ್ತಿವೆ. ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿದೆ.

ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ. ಅಲ್ಲದೆ 4ನೇ ತರಗತಿಯ ಸವಿ ಕನ್ನಡ ಪುಸ್ತಕದಲ್ಲಿಯೂ ಇದೇ ಪದ್ಯ ಸೇರಿಸಲಾಗಿದ್ದು, ಪಾಠ ಮಾಡುವ ಶಿಕ್ಷಕರಿಗೂ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shadow Killings: ಪಾಕಿಸ್ತಾನದ ಜನರ ದಾರಿ ತಪ್ಪಿಸಲು ಕಾಶ್ಮೀರದಲ್ಲಿ ಹಿಂದೂಗಳ ಕೊಲೆ; ಗುಪ್ತಚರ ವರದಿಯಲ್ಲಿ ಮಾಹಿತಿ

ಇದನ್ನೂ ಓದಿ
Image
Death During Sleep: ನಿದ್ರೆ ವೇಳೆ ಸಾವು ಸಂಭವಿಸುವುದನ್ನು ತಡೆಯಬಹುದೇ?
Image
Shadow Killings: ಪಾಕಿಸ್ತಾನದ ಜನರ ದಾರಿ ತಪ್ಪಿಸಲು ಕಾಶ್ಮೀರದಲ್ಲಿ ಹಿಂದೂಗಳ ಕೊಲೆ; ಗುಪ್ತಚರ ವರದಿಯಲ್ಲಿ ಮಾಹಿತಿ
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ
Image
Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಚಕ್ರತೀರ್ಥ, ನಮ್ಮ ಪಠ್ಯಪುಸ್ತಕದಲ್ಲಿ ಈ ರೀತಿ ಯಾವುದೇ ತಪ್ಪು ಮಾಡಿಲ್ಲ. 3 ಮತ್ತು 4ನೇ ತರಗತಿ ಪುಸ್ತಕದಲ್ಲಿ ಒಂದೇ ಪದ್ಯ ಇದೆ. ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನ ನಾವು ಸೇರಿಸಿಲ್ಲ. ನಲಿ-ಕಲಿ ಅಂತ ಬೇರೆ ಪಠ್ಯಪುಸ್ತಕಗಳು ಇವೆ. ನಲಿ- ಕಲಿ ಪಠ್ಯಪುಸ್ತಕ ನಾವು ಪರಿಷ್ಕರಣೆ ಮಾಡಿಲ್ಲ. ಪ್ರಥಮ, ದ್ವಿತೀಯ, ತೃತೀಯ ಭಾಷಾ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. 4ನೇ ತರಗತಿಯ ಸವಿ ಕನ್ನಡವನ್ನ ಮಾತ್ರ ಪರಿಷ್ಕರಣೆ ಮಾಡಿದ್ದೇವೆ. 3ನೇ ತರಗತಿಯ ಪಠ್ಯವನ್ನ ರೋಹಿತ್ ಸಮಿತಿ ಪರಿಷ್ಕರಣೆ ಮಾಡಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಹೀಗೆ ಸುದ್ದಿ ಮಾಡ್ತಾ ಇದ್ದಾರೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:17 am, Sat, 4 June 22