Death During Sleep: ನಿದ್ರೆ ವೇಳೆ ಸಾವು ಸಂಭವಿಸುವುದನ್ನು ತಡೆಯಬಹುದೇ?
ಸಾವಿಗೆ ಶ್ರೀಮಂತ, ಬಡವ ಎಂಬ ಬೇಧ ಭಾವವಿಲ್ಲ, ಎಲ್ಲರಿಗೂ ಒಂದೇ. ಪ್ರಪಂಚದಲ್ಲಿ ಹಸಿದ ಹೊಟ್ಟೆ ಇದ್ದರೂ ನೆಮ್ಮದಿಯಾಗಿ ನಿದ್ರೆ ಮಾಡುವವರಿಗಿಂತ ಸುಖವಾದ ವ್ಯಕ್ತಿ ಬೇರೆ ಯಾರೂ ಇರಲು ಸಾಧ್ಯವಿಲ್ಲ.
ಸಾವಿಗೆ ಶ್ರೀಮಂತ, ಬಡವ ಎಂಬ ಬೇಧ ಭಾವವಿಲ್ಲ, ಎಲ್ಲರಿಗೂ ಒಂದೇ. ಪ್ರಪಂಚದಲ್ಲಿ ಹಸಿದ ಹೊಟ್ಟೆ ಇದ್ದರೂ ನೆಮ್ಮದಿಯಾಗಿ ನಿದ್ರೆ ಮಾಡುವವರಿಗಿಂತ ಸುಖವಾದ ವ್ಯಕ್ತಿ ಬೇರೆ ಯಾರೂ ಇರಲು ಸಾಧ್ಯವಿಲ್ಲ. ಕೋಟಿಗಟ್ಟಲೆ ಆಸ್ತಿ ಇದ್ದರೂ ಕೈಗೆ – ಕಾಲಿಗೆ ಆಳು ಕಾಳು ಇದ್ದರೂ, ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುವವರಾದರೂ ಮೆತ್ತಗಿನ ಹಾಸಿಗೆಯ ಮೇಲೆ ಅರ್ಧ ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗದೇ ಹೋದರೆ, ಏನೂ ಪ್ರಯೋಜನವಿಲ್ಲ.
ಕೆಲವರು ನಿದ್ರೆಯ ಸಮಯದಲ್ಲೇ ಹೃದಯಾಘಾತ, ಹೃದಯ ಸ್ತಂಭನದಿಂದ ಮೃತಪಡುತ್ತಿದ್ದಾರೆ. ಅರಿವಿಲ್ಲದಂತೆಯೇ ಸಾವು ಸಂಭವಿಸುತ್ತಿದೆ.
ನಿದ್ರೆಯ ಸಮಯದಲ್ಲಿ ಸಾವು ಸಂಭವಿಸುವುದನ್ನು ತಡೆಯಬಹುದು
ನಿದ್ರೆಯಲ್ಲಿ ಉಸಿರುಕಟ್ಟುವ ಸಮಸ್ಯೆ ನಿದ್ರೆಯಲ್ಲಿ ಉಸಿರುಕಟ್ಟುವ ಸಮಸ್ಯೆಯನ್ನು ಸಾಧಾರಣವೆಂದು ತಳ್ಳಿಹಾಕಬೇಡಿ. ಇದು ಹೃದಯಸ್ತಂಭನ ಇಲ್ಲವೇ ಹೃದಯ ಸಂಬಂಧಿ ಕಾಯಿಲೆಗಳನ್ನು ಉತ್ತೇಜಿಸಬಹುದು. ಹೃದಯರಕ್ತನಾಳದ ಕಾಯಿಲೆ ಇರುವ 40% ದಿಂದ 80% ರಷ್ಟು ಜನರಲ್ಲಿ ನಿದ್ರೆಯಲ್ಲಿ ಉಸಿರುಕಟ್ಟುವ ಕಾಯಿಲೆ (OSA) ಕಂಡುಬರಬಹುದು ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ. ಈ ಕಾಯಿಲೆಯನ್ನು ಕಡಿಮೆ ಗುರುತಿಸಲಾಗಿದೆ ಮತ್ತು ಚಿಕಿತ್ಸೆಯ ಮಟ್ಟವೂ ಏರಿಕೆಯಾಗಿಲ್ಲ.
ಗಂಟಲಿನಲ್ಲಿ ಉಸಿರಾಟ ನಾಳದ ಮೇಲ್ಭಾಗದಲ್ಲಿ ಯಾವುದೇ ಮೂಳೆಗಳಿರುವುದಿಲ್ಲ. ಇದರಿಂದ ನಾಳವು ನಿದ್ದೆಯ ಸಮಯದಲ್ಲಿ ಮುಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಇರುವವರಲ್ಲಿ ಉಸಿರಾಟದ ನಾಳ ಚಿಕ್ಕದಾಗಿರುವುದರಿಂದ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾಳದ ಸುತ್ತ ಕೊಬ್ಬು ಸೇರಿಕೊಳ್ಳುವುದರಿಂದ ಈ ರೀತಿಯಾಗುತ್ತದೆ.
ಉಸಿರುಕಟ್ಟುವಿಕೆಯು ರೋಗಿಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಸಾವಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಸಮಸ್ಯೆ ಇರುವ ರೋಗಿಗಳು ಸೂಕ್ತ ವೈದ್ಯಕೀಯ ನೆರವನ್ನು ಪಡೆಯಬೇಕು ಮತ್ತು ಇಂತಹ ಕಾಯಿಲೆಗಳ ಕುರಿತು ಪ್ರತಿಯೊಬ್ಬರೂ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು.
ಎದೆನೋವನ್ನು ನಿರ್ಲಕ್ಷಿಸಬೇಡಿ: ಒಂದೊಮ್ಮೆ ನಿದ್ರೆಯ ಸಮಯದಲ್ಲಿ ಎದೆನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಎದೆ ನೋವು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯಿರಿ.
ನಿದ್ರಾಹೀನತೆ: ಸರಿಯಾಗಿ ನಿದ್ರೆ ಬಾರದಿದ್ದರೂ ಕೂಡ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮಧುಮೇಹ, ಒಬೆಸಿಟಿ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.
ಅಪಾಯಗಳೇನು?: ಓಎಸ್‌ಎ ಇರುವ ರೋಗಿಗಳನ್ನು ಕಾಡುವ ಅಪಾಯಗಳೆಂದರೆ ಹೃದಯ ಸ್ತಂಭನ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಇತ್ಯಾದಿಗಳಾಗಿವೆ. ಬೊಜ್ಜು, ಕುತ್ತಿಗೆಯ ಹೆಚ್ಚಿನ ಸುತ್ತಳತೆ, ಧೂಮಪಾನ, ಕೌಟುಂಬಿಕ ಇತಿಹಾಸ ಇತ್ಯಾದಿಯಾಗಿದೆ. ಅಧಿಕ ರಕ್ತದೊತ್ತಡ ಇರುವ ಹೆಚ್ಚಿನವರಲ್ಲಿ ಓಎಸ್‌ಎ ಹೆಚ್ಚು ಕಂಡುಬಂದಿದೆ. ಹೃತ್ಕರ್ಣದ ಕಂಪನ ಮತ್ತು ಹಠಾತ್ ಹೃದಯ ಸಾವಿನಂತಹ ಹೃದಯದ ಕಾಯಿಲೆಗಳು ಪಕ್ಕವಾದ, ಹೃದಯಾಘಾತ, ಹೃದಯಸ್ತಂಭನ ಸಮಸ್ಯೆಗಳು ಇತ್ಯಾದಿ ಕಾಯಿಲೆಗಳನ್ನು ಈ ರೋಗಿಗಳು ಅನುಭವಿಸ ಬೇಕಾಗಬಹುದು.
ರೆಗ್ಯುಲರ್ ಹಾರ್ಟ್ ಚೆಕ್ಅಪ್ ಇರಲಿ
ಪದೇ ಪದೇ ಹೃದಯ ಪರೀಕ್ಷೆ ಮಾಡಿಸುತ್ತಿರಿ, ಒಂದೊಮ್ಮೆ ಅಧಿಕ ರಕ್ತದೊತ್ತಡ ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ವೈದ್ಯರ ಗಮನಕ್ಕೆ ಬರುತ್ತದೆ.
ನಿದ್ರಾಹೀನತೆ
ಇದು ನಾವು ಪ್ರತಿ ದಿನ ನಮ್ಮ ಕಣ್ಣೆದುರಿಗೆ ಕಾಣುವ ವಿವಿಧ ಬಗೆಯ ಜನರ ಮಧ್ಯೆ ಇರುವ ವ್ಯತ್ಯಾಸ. ಮಧ್ಯಾಹ್ನದ ಸಮಯದಲ್ಲಿ ನಿದ್ರೆ ಮಾಡುವ ವಿಚಾರಕ್ಕೆ ಹೋಲಿಸಿದರೆ ಪುರುಷರಿಗಿಂತ ಹೆಚ್ಚು ಮಹಿಳೆಯರು ಈ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುತ್ತಾರೆ.
ಆದರೆ ಇನ್ನು ಮುಂದೆ ಇಂತಹ ನಿಮ್ಮ ಮಧ್ಯಾಹ್ನದ ಪಾರ್ಟ್ ಟೈಮ್ ನಿದ್ರೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಿ ರಾತ್ರಿಯ ಸಮಯದಲ್ಲಿ ಫುಲ್ ಟೈಮ್ ನಿದ್ರೆಗೆ ದೇವರಿಗೆ ಅಪ್ಲಿಕೇಶನ್ ಹಾಕುವ ಸಂದರ್ಭ ಬಂದಿದೆ ಎಂದೇ ಹೇಳಬಹುದು. ಕೇಳಲು ಆಶ್ಚರ್ಯವಾಗುತ್ತಿದೆ ಅಲ್ಲವೇ.
ನಿದ್ರೆಯ ಅಭ್ಯಾಸ ಹೀಗಿರಬೇಕು
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದು ಆಲೋಚನೆ ಇರುತ್ತದೆ. ಏನಂದರೆ ರಾತ್ರಿಯ ಸಮಯದಲ್ಲಿ ವೈದ್ಯರು ಹೇಳುವ ಪ್ರಕಾರ ಸುಮಾರು 8 ಗಂಟೆಗಳ ನಿದ್ರೆ ಮಾಡಲು ಸಾಧ್ಯ ಆಗದೇ ಹೋದರೆ ಹಾನಿಯಾದ ನಿದ್ರಾ ಸಮಯವನ್ನು ಬೆಳಗಿನ ಸಮಯದಲ್ಲಿ ಉಪಯೋಗಿಸಿಕೊಂಡು ಸರಿ ಹೊಂದಿಸಿಕೊಳ್ಳಬಹುದು.
ಇದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಬಹು ಕಾಲದಿಂದ ನಂಬಿಕೊಂಡು ಬಂದ ಇಂತಹ ಒಂದು ವಿಚಾರವನ್ನು ಇತ್ತೀಚಿನ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಂಬಂಧ ಪಟ್ಟ ಸಂಶೋಧನೆ ತಲೆ ಕೆಳಗಾಗುವಂತೆ ಮಾಡಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ