Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್‌ಗೆ ಪೊಲೀಸ್ ಇಲಾಖೆಗೆ ನೇರವಾಗಿ ಯಾವುದೇ ಸಂಬಂಧ ಇಲ್ಲಾ: ಎಡಿಜಿಪಿ ಅಲೋಕ್ ಕುಮಾರ್

ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ನಾವು ಕ್ರಮ ಜರಗಿಸುತ್ತೇವೆ‌. ಪ್ರಚೋದನಕಾರಿ ಹೇಳಿಕೆ ನೀಡಿತ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡುತ್ತಿದ್ದೇವೆ. ಯಾರು ಹೇಳಿಕೆ ಕೊಡುತ್ತಿದ್ದಾರೆ ಅದನ್ನ ರೆಕಾರ್ಡ್ ಮಾಡ್ತಾ ಇದ್ದೇವೆ.

ಹಿಜಾಬ್‌ಗೆ ಪೊಲೀಸ್ ಇಲಾಖೆಗೆ ನೇರವಾಗಿ ಯಾವುದೇ ಸಂಬಂಧ ಇಲ್ಲಾ: ಎಡಿಜಿಪಿ ಅಲೋಕ್ ಕುಮಾರ್
ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 04, 2022 | 12:20 PM

ಬೆಳಗಾವಿ: ಹಿಜಾಬ್‌ಗೆ ಪೊಲೀಸ್ ಇಲಾಖೆಗೆ ನೇರವಾಗಿ ಯಾವುದೇ ಸಂಬಂಧ ಇಲ್ಲಾ. ಹಿಜಾಬ್ ವಿಚಾರ ಸ್ಕೂಲ್ ಮ್ಯಾನೆಜ್‌ಮೆಂಟ್‌‌ಗೆ ಇದೆ ಎಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ‌ ನೀಡಿದ್ದಾರೆ. ಶಿಕ್ಷಣ ಇಲಾಖೆಗೆ, ಡಿಸಿ ಅವರಿಗೆ ಸಂಬಂಧ ಇದೆ. ಪೊಲೀಸ್‌ಗೆ ನೇರವಾಗಿ ಯಾವುದೇ ಸಂಬಂಧ ಇಲ್ಲ‌. ಕಾನೂನು ಸುವ್ಯವಸ್ಥೆ ಭಂಗ ಮಾಡಲು ಪ್ರಯತ್ನ ಪಟ್ಟರೆ, ಅವರ ಮೇಲೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳತ್ತೇವೆ. ಆ ಸಮಯದಲ್ಲಿ ಅವರ ಮುಖ ಕೂಡ ನಾವು ನೋಡುವುದಿಲ್ಲ. ತಾಂಬೂಲ ಪ್ರಶ್ನೆಯಂತಹ ಸುದ್ದಿಗಳನ್ನ ಹೆಚ್ಚಾಗಿ ತೋರಿಸಬೇಡಿ. ನಿಮಗೂ ಕೂಡ ಜವಾಬ್ದಾರಿ ಇದೆ ಅಂತಾ ಮಾಧ್ಯಮಗಳಿಗೆ ಅಲೋಕ್ ಕುಮಾರ್ ಹೇಳಿದರು. ಕೆಲವು ಜನ ಪ್ರಚಾರ ಬಯಸಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಅವರ ಕವರೇಜ್ ಬಂದ್ ಮಾಡಿದರೆ ಮಾರನೇ ದಿನ ಮಾತನಾಡುವುದನ್ನ ಬಂದ್ ಮಾಡುತ್ತಾರೆ. ಎಷ್ಟು ಕವರೇಜ್ ಮಾಡಬೇಕು ಅಷ್ಟು ಕವರ್ ಮಾಡುವಂತೆ ಮಾಧ್ಯಮಗಳಿಗೆ ಅಲೋಕ್ ಕುಮಾರ್ ಆಗ್ರಹಿಸಿದರು.

ಇದನ್ನೂ ಓದಿ: Virat Kohli: ಕೊಹ್ಲಿ ಬಗ್ಗೆ ಬಹುದೊಡ್ಡ ಹೇಳಿಕೆ ನೀಡಿದ ಮೊಹಮ್ಮದ್ ಅಜರುದ್ದೀನ್: ಏನಂದ್ರು ನೋಡಿ

ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ನಾವು ಕ್ರಮ ಜರಗಿಸುತ್ತೇವೆ‌. ಪ್ರಚೋದನಕಾರಿ ಹೇಳಿಕೆ ನೀಡಿತ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡುತ್ತಿದ್ದೇವೆ. ಯಾರು ಹೇಳಿಕೆ ಕೊಡುತ್ತಿದ್ದಾರೆ ಅದನ್ನ ರೆಕಾರ್ಡ್ ಮಾಡ್ತಾ ಇದ್ದೇವೆ. ಪರೋಕ್ಷವಾಗಿ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಅಲೋಕ್ ಕುಮಾರ್‌ ಹೇಳಿದರು. ಯಾವ ಒಂದು ವರ್ಗಕ್ಕೆ ಮಾತ್ರ ಅಲ್ಲಾ ಎಲ್ಲಾ ಸಮುದಾಯದಯಕ್ಕೂ ಒಂದೇ ಕಾನೂನು ಇದೆ. ಯಾವ ರೀತಿ ಮಾಡ್ತಾರೆ ರೆಕಾರ್ಡ್ ಬಿಲ್ಡಪ್ ಮಾಡಿಕೊಂಡು ಕ್ರಮ ಜರಗಿಸುತ್ತೇವೆ‌‌. ಕೆಲವು ಕಡೆ ಪ್ರಮೋದ್ ಮುತಾಲಿಕ್ ಹೋಗಬಾರದು ಅಲ್ಲಿ 144ಸೆಕ್ಷನ್ ಹಾಕಿಸಿದ್ದೇವೆ. ಇಂದು ಬೀದರ್ ಹೋಗುತ್ತಿದ್ದರು ಅಲ್ಲಿ ಎಂಟ್ರಿಯಾಗಬಾರದು, ಅನುಭವ ಮಂಟಪ ವಿಚಾರಕ್ಕೆ ಕಾಲಿಡಬಾರದು. ಎಲ್ಲೇಲ್ಲಿ ಎನೂ ಕ್ರಮ ಜರುಗಿಸಬೇಕು ನಾವು ಮಾಡ್ತಿದ್ದೇವೆ. ಪೊಲೀಸ್ ಇಲಾಖೆ ಎನೂ ಕೆಲಸ ಮಾಡಬೇಕು ಅದನ್ನ ಮಾಡ್ತಿದೆ. ಮುಂದೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಸಂಘಟನೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಆ ಸಂಘಟನೆಗಳ ವಿರುದ್ಧ ರೆಕಾರ್ಡ್ ಬಿಲ್ಡ್ ಮಾಡ್ತಿದ್ದೇವೆ. ಸಮಯ ಬಂದಾಗ ಬಹಿರಂಗ ಎನೂ ಮಾಡೋದಿದೆ ಅದನ್ನ ಮಾಡ್ತೇವಿ. ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಮೇಲೆಯೂ ಪರೋಕ್ಷವಾಗಿ ಕಣ್ಣೀಟ್ಟಿರುವುದಾಗಿ ಅಲೋಕ್ ಕುಮಾರ್ ಹೇಳಿಕೆ ನೀಡಿದರು.

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಕುರಿತು ಮಾತನಾಡಿದ್ದು, ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. PSI ಪರೀಕ್ಷಾ ಅಕ್ರಮದ ತನಿಖೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಮುಂದೆ ಈ ರೀತಿ ಅಕ್ರಮ ಆಗದಂತೆ ನೋಡಿಕೊಳ್ಳುವುದು. ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿ ಒಂದು ಗ್ಯಾಂಗ್ ಇದೆ. ಎಸ್‌ಪಿ ಅವರಿಗೆ ಹೇಳಿ ಡೇಟಾ ಬೇಸ್ ರೆಡಿ ಮಾಡಬೇಕು‌. ವಿಜಯಪುರ, ಬಾಗಲಕೋಟೆಯಲ್ಲೂ ಕೆಲವು ಜನರಿದ್ದಾರೆ. ಬೆಳಗಾವಿ ವಲಯದಲ್ಲಿ ಇರುವವರನ್ನು ಗುರುತಿಸಬೇಕು. ಅವರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು. ಆರೋಪಿಗಳ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್