Virat Kohli: ಕೊಹ್ಲಿ ಬಗ್ಗೆ ಬಹುದೊಡ್ಡ ಹೇಳಿಕೆ ನೀಡಿದ ಮೊಹಮ್ಮದ್ ಅಜರುದ್ದೀನ್: ಏನಂದ್ರು ನೋಡಿ
Mohammad Azharuddin: ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ಕಾಲ ಶತಕ ರಹಿತ ಆಟವಾಡುತ್ತಿದ್ದಾರೆ ವಿರಾಟ್ ಕೊಹ್ಲಿ. ಕ್ರಿಕೆಟ್ ಪಂಡಿತರು ವಿರಾಟ್ ಫಾರ್ಮ್ ಬಗ್ಗೆ ಸದಾ ಒಂದಲ್ಲ ಒಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಹೀಗಿರುವಾಗ ಮೊಹಮ್ಮದ್ ಅಜರುದ್ದೀನ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಸದ್ಯ ಸದಾ ಚರ್ಚೆಯಲ್ಲಿರುವ ವಿಷಯವೆಂದರೆ ವಿರಾಟ್ ಕೊಹ್ಲಿ (Virat Kohli) ಫಾರ್ಮ್ ಬಗ್ಗೆ. ತಮ್ಮ 14 ವರ್ಷಗಳ ಕ್ರಿಕೆಟ್ ಜೆರ್ನಿಯಲ್ಲಿ ಬಹುತೇಕ ಎಲ್ಲ ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿರುವ ಕಿಂಗ್ ಕೊಹ್ಲಿ ಇನ್ನೇನೂ ಕ್ರಿಕೆಟ್ ದೇವರ 100 ಸೆಂಚುರಿ ದಾಖಲೆಯನ್ನ ಅಳಿಸಿ ಹಾಕುತ್ತಾರೆ ರನ್ನುವಷ್ಟರಲ್ಲಿ ಬ್ಯಾಡ್ಫಾರ್ಮ್ ವಕ್ಕರಿಸಿತು. 2019 ನವೆಂಬರ್ 22ರ ಬಳಿಕ ಶುರುವಾದ ಸೆಂಚುರಿ ಪರದಾಟ ಇದೀಗ 2022 ಬಂದರೂ ಆಗಿಲ್ಲ. ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ಕಾಲ ಶತಕ ರಹಿತ ಆಟವಾಡುತ್ತಿದ್ದಾರೆ ಕೊಹ್ಲಿ. ಕ್ರಿಕೆಟ್ ಪಂಡಿತರು ವಿರಾಟ್ ಫಾರ್ಮ್ (Kohli Form) ಬಗ್ಗೆ ಸದಾ ಒಂದಲ್ಲ ಒಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಹೀಗಿರುವಾಗ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (Mohammad Azharuddin) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಸುದೀರ್ಘ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಅಜರುದ್ದೀನ್ ಅವರು ವ್ಯಕ್ತಪಡಿಸಿದ್ದಾರೆ. “ಕೊಹ್ಲಿ ಬ್ಯಾಟಿಂಗ್ ತಂತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕ್ರಿಕೆಟಿಗರು ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆ ಅನುಭವಿಸುವ ಒಂದು ಕೆಟ್ಟ ಅವಧಿಯನ್ನು ಇದೀಗ ಟೀಮ್ ಇಂಡಿಯಾ ಮಾಜಿ ನಾಯಕ ಇದೀಗ ಅನುಭವಿಸುತ್ತಿದ್ದಾರಷ್ಟೆ. ಕೊಹ್ಲಿ 50 ರನ್ ಗಳಿಸಿದರೂ ಕೂಡ ಅವರು ವಿಫಲರಾದಂತೆ ಕಾಣುತ್ತಾರೆ,” ಎಂದು ಹೇಳಿದ್ದಾರೆ.
World Test Championship: ಕ್ರಿಕೆಟ್ ಕಾಶಿ ಲಾರ್ಡ್ನಲ್ಲಿ 2023ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
“ಕ್ರಿಕಟಿಗರೆಂದ ಮೇಲೆ ಪ್ರತಿಯೊಬ್ಬರಿಗೂ ಒಂದು ಕೆಟ್ಟ ಅವಧಿ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಹಾಗಾಗಿ ಅವರು ಇದೀಗ ಸ್ವಲ್ಪ ಹಿನ್ನಡೆ ಅನುಭವಿಸಿದ್ದಾರೆ. ಆದರೆ, ಮುಂದಿನ ಪಂದ್ಯಗಳಲ್ಲಿ ಅವರು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಕೆಲವೊಮ್ಮೆ ನಿಮಗೆ ಸ್ವಲ್ಪವಾದರೂ ಅದೃಷ್ಟ ಬೇಕಾಗುತ್ತದೆ. ಒಂದೇ ಒಂದು ಬಾರಿ ಅವರಿಂದ ದೊಡ್ಡ ಮೊತ್ತ ಅಥವಾ ಒಂದು ದೊಡ್ಡ ಶತಕ ಮೂಡಿ ಬರಬೇಕಾದ ಅಗತ್ಯವಿದೆ. ಆ ಮೂಲಕ ಅವರು ವಿಶ್ವಾಸದೊಂದಿಗೆ ಫಾರ್ಮ್‌ಗೆ ಮರಳಲಿದ್ದಾರೆ,” ಎಂಬುದು ಅಜರುದ್ದೀನ್ ಮಾತು.
ಇನ್ನು ಐಪಿಎಲ್ ಚಾಂಪಿಯನ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರು ಕೂಡ ಉತ್ತಮ ಲಯವನ್ನು ಕಂಡುಕೊಂಡಿದ್ದು ಅವರು ಮುಂಬರುವ ಚುಟುಕು ವಿಶ್ವಕಪ್‍ನಲ್ಲಿ ಭಾರತ ತಂಡದ ಪರ ಉತ್ತಮ ಪಾತ್ರ ವಹಿಸಲಿದ್ದಾರೆ ಎಂದು ಮೊಹಮ್ಮದ್ ಅಜರುದ್ದೀನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶೋಯೆಬ್ ಅಖ್ತರ್ ಹೇಳಿಕೆ:
ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಕುರಿತಾಗಿ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ಶೋಯೆಬ್ ಅಖ್ತರ್ ಮಾಜಿ ಕ್ರಿಕೆಟಿಗರಿಗೆ ಆಗ್ರಹಿಸಿದ್ದಾರೆ. ”ನಾವು ಅಭಿಪ್ರಾಯಗಳನ್ನು ಹೇಳುವ ಮುನ್ನ ಚಿಕ್ಕ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಎಲ್ಲಾ ಐಕಾನಿಕ್ ಆಟಗಾರರು ಅರಿತುಕೊಳ್ಳಬೇಕು. ವಿರಾಟ್ ಕೊಹ್ಲಿಗೆ ಕನಿಷ್ಠ ಗೌರವವನ್ನು ನೀಡಿ. ಒಬ್ಬ ಪಾಕಿಸ್ತಾನಿಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 110 ಶತಕಗಳನ್ನು ಗಳಿಸಬೇಕೆಂದು ನಾನು ಬಯಸುತ್ತೇನೆ. ಅವನು 45 ವರ್ಷ ವಯಸ್ಸಿನವರೆಗೂ ಆಡಬೇಕೆಂದು ನಾನು ಬಯಸುತ್ತೇನೆ,” ಎಂದು ಅಖ್ತರ್ ಹೇಳಿದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.