AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

French Open 2022: ಜೆರೆವ್​ಗೆ ಇಂಜುರಿ; ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ ತಲುಪಿದ ರಾಫೆಲ್ ನಡಾಲ್!

French Open 2022: ರಾಫೆಲ್ ನಡಾಲ್ ಪ್ರತಿ ಬಾರಿ ಫೈನಲ್ ತಲುಪಿದಾಗಲೂ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈಗ ನಡಾಲ್ ದಾಖಲೆಯ 14 ನೇ ಪ್ರಶಸ್ತಿಗಾಗಿ ಫೈನಲ್​ನಲ್ಲಿ ಸೆಣಸಲಿದ್ದಾರೆ.

French Open 2022: ಜೆರೆವ್​ಗೆ ಇಂಜುರಿ; ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ ತಲುಪಿದ ರಾಫೆಲ್ ನಡಾಲ್!
ರಾಫೆಲ್ ನಡಾಲ್
TV9 Web
| Edited By: |

Updated on:Jun 03, 2022 | 10:35 PM

Share

ಸ್ಪೇನ್‌ನ ದಂತಕಥೆ ಮತ್ತು ಅತ್ಯಂತ ಯಶಸ್ವಿ ಪುರುಷ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ (Rafael Nadal) ಫ್ರೆಂಚ್ ಓಪನ್ 2022 (French Open 202)ರ ಫೈನಲ್ ತಲುಪಿದ್ದಾರೆ. ರಾಫೆಲ್ ನಡಾಲ್ ತಮ್ಮ ಹುಟ್ಟುಹಬ್ಬದ ದಿನದಂದು ದಾಖಲೆಯ 14 ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದರು. ಆದಾಗ್ಯೂ, ಅವರು ಫೈನಲ್ ತಲುಪಿದ ರೀತಿ, ನಡಾಲ್​ಗೆ ತೃಪ್ತಿಕೊಡಲಿಲ್ಲ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಅವರು ಜರ್ಮನಿಯ ಯುವ ತಾರೆ ಅಲೆಕ್ಸಾಂಡರ್ ಜೆರೆವ್ (Alexander Zverev) ಅವರನ್ನು ಎದುರಿಸುತ್ತಿದ್ದರು, ಆದರೆ ಜೆರೆವ್ ಅವರು ಎರಡನೇ ಸೆಟ್‌ನ ಕೊನೆಯ ಲೆಗ್‌ನಲ್ಲಿ ತಮ್ಮ ಕಾಲಿಗೆ ಗಾಯ ಮಾಡಿಕೊಂಡರು. ಇದರಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಡಾಲ್ 7-5, 5-5ರಲ್ಲಿ ಮುನ್ನಡೆಯಲ್ಲಿದ್ದರು. ಹೀಗಾಗಿ ನಡಾಲ್​ ವಿಜಯಿ ಎಂದು ಘೋಷಿಸಲಾಯಿತು.

13 ಬಾರಿಯ ಚಾಂಪಿಯನ್ ನಡಾಲ್ ಮತ್ತು ಜೆರೆವ್ ಶುಕ್ರವಾರ ಜೂನ್ 3 ರಂದು ಪುರುಷರ ಸಿಂಗಲ್ಸ್ ಪ್ರಶಸ್ತಿ ಪಂದ್ಯಕ್ಕಾಗಿ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾದರು. ಈ ಪಂದ್ಯ ಆರಂಭದಿಂದಲೂ ಅತ್ಯಂತ ಕಠಿಣವಾಗಿತ್ತು, ಮೊದಲ ಸೆಟ್ ಗೆಲ್ಲಲು ನಡಾಲ್ ಸಾಕಷ್ಟು ಬೆವರು ಹರಿಸಬೇಕಾಯಿತು. ಎರಡನೇ ಸೆಟ್‌ನಲ್ಲೂ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಮೊದಲೆರಡು ಗೇಮ್‌ಗಳಲ್ಲಿ ಇಬ್ಬರೂ ಸರ್ವೀಸ್‌ ಮುರಿದರು. ಇದಾದ ಬೆನ್ನಲ್ಲೇ ಜೆರೆವ್ 5-3 ಮುನ್ನಡೆ ಪಡೆದರು. ಆದಾಗ್ಯೂ, ನಡಾಲ್ ಪುನರಾಗಮನವನ್ನು ಮಾಡಿ, ಸ್ಕೋರ್ ಅನ್ನು 5-5 ಕ್ಕೆ ತಗ್ಗಿಸಿದರು. ನಂತರ ಇಬ್ಬರೂ ಸ್ಕೋರ್ 6-6 ರಲ್ಲಿ ಸಮಗೊಳಿಸಿದರು, ಆದರೆ ಇಲ್ಲಿಗೆ ಪಂದ್ಯ ನಿಂತಿತು. ಅದಕ್ಕೆ ಕಾರಣ ಜೆರೆವ್ ಅವರ ಇಂಜುರಿ.

ಇದನ್ನೂ ಓದಿ
Image
Rafael Nadal Birthday: 36 ನೇ ವರ್ಷಕ್ಕೆ ಕಾಲಿಟ್ಟ ನಡಾಲ್; ಕಿಂಗ್ ಆಫ್ ಕ್ಲೇ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Image
ಮುಂಬೈ ತಂಡ ಈ ಐಪಿಎಲ್​ನಲ್ಲಿ ಏಕೆ ಅರ್ಜುನ್​ಗೆ ಅವಕಾಶ ನೀಡಲಿಲ್ಲ? ಕೋಚ್ ನೀಡಿದ ಕಾರಣ ಹೀಗಿದೆ
Image
ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ?

ಎರಡನೇ ಸೆಟ್‌ನ 12ನೇ ಗೇಮ್‌ನಲ್ಲಿ ಜೆರೆವ್, ನಡಾಲ್ ಹೊಡೆತವನ್ನು ಹಿಂದಿರುಗಿಸಲು ಯತ್ನಿಸಿದರು. ಆದರೆ ಆಗಲಿಲ್ಲ, ಚೆಂಡು ಅಂಕಣದಲ್ಲಿ ಬಿದ್ದು ನಡಾಲ್ ಪಾಯಿಂಟ್ ಗಳಿಸಿದರೆ, ಜೆರೆವ್ ನೆಲಕ್ಕೆ ಕುಸಿದು ಬಿದ್ದರು. ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತಿರುವಾಗ, ಜೆರೆವ್ ಅವರ ಕಾಲು ಉಳುಕಿದರ ಕಾರಣ ಜೆರೆವ್ ಅಂಗಣದಲ್ಲಿ ಕುಸಿದ್ದುಬಿದ್ದು ನೋವಿನಿಂದ ಜೋರಾಗಿ ಅಳಲು ಪ್ರಾರಂಭಿಸಿದರು. ಅವರ ಕಣ್ಣುಗಳಿಂದ ನೀರು ಬರಲಾರಂಭಿಸಿತು, ನಂತರ ಆಟವನ್ನು ನಿಲ್ಲಿಸಲಾಯಿತು. ನಡಾಲ್ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಹೋದರು, ನಂತರ ಅವರನ್ನು ವೈದ್ಯಕೀಯ ತಂಡದ ಸಹಾಯದಿಂದ ಗಾಲಿಕುರ್ಚಿಯಲ್ಲಿ ಹೊರಗೆ ಕರೆದೊಯ್ಯಲಾಯಿತು.

ಕೆಲವು ನಿಮಿಷಗಳ ನಂತರ, ಜೆರೆವ್ ವೈದ್ಯಕೀಯ ಕೊಠಡಿಯಿಂದ ಹೊರಬಂದರು. ಆದರೆ ಅವರು ನಡೆಯಲು ಊರುಗೋಲನ್ನು ಆಶ್ರಯಿಸಬೇಕಾಯಿತು. ಹೀಗಾಗಿ ಪಂದ್ಯ ಇಲ್ಲಿಗೆ ಕೊನೆಗೊಂಡಿತು ಎಂಬುದು ಸ್ಪಷ್ಟವಾಯಿತು. ಜೆರೆವ್ ಅಂಗಳಕ್ಕೆ ಬಂದು ಕಣ್ಣೀರು ತುಂಬಿದ ಕಣ್ಣುಗಳಿಂದ ಅಭಿಮಾನಿಗಳತ್ತ ನೋಡಿದರು, ಆದರೆ ಕ್ರೀಡಾಂಗಣದಲ್ಲಿದ್ದ ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಕ್ರೀಡಾ ಪ್ರೋತ್ಸಾಹ ಮೆರೆದರು.

ನಡಾಲ್‌ಗೆ 14ನೇ ಪ್ರಶಸ್ತಿ

ಇದರೊಂದಿಗೆ, ನಡಾಲ್ ಫೈನಲ್ ತಲುಪಿದ್ದು, ಅಲ್ಲಿ ಅವರು ತಮ್ಮ 14 ನೇ ಫ್ರೆಂಚ್ ಓಪನ್ ಮತ್ತು ದಾಖಲೆಯ 22 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲ್ಲು ಹೋರಾಡಲಿದ್ದಾರೆ. ಕಳೆದ ವರ್ಷ, ಅವರು ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಎದುರು ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಬಾರಿ ಸ್ಪ್ಯಾನಿಷ್ ದೈತ್ಯ ಜೊಕೊವಿಕ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸುವ ಮೂಲಕ ತಮ್ಮ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ಫೈನಲ್‌ನಲ್ಲಿ ನಡಾಲ್ ಅವರನ್ನು ಯಾರು ಎದುರಿಸುತ್ತಾರೆ ಎಂಬುದನ್ನು ಎರಡನೇ ಸೆಮಿಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಮತ್ತು ಮರಿನ್ ಚಿಲಿಚ್ ಹೋರಾಟದಲ್ಲಿ ನಿರ್ಧರಿಸಲಾಗುತ್ತದೆ.

Published On - 10:08 pm, Fri, 3 June 22

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು