ಮುಂಬೈ ತಂಡ ಈ ಐಪಿಎಲ್​ನಲ್ಲಿ ಏಕೆ ಅರ್ಜುನ್​ಗೆ ಅವಕಾಶ ನೀಡಲಿಲ್ಲ? ಕೋಚ್ ನೀಡಿದ ಕಾರಣ ಹೀಗಿದೆ

Arjun Tendulkar: ಅರ್ಜುನ್‌ಗೆ ಇನ್ನೂ ಸಾಕಷ್ಟು ಶ್ರಮ ಮತ್ತು ಸುಧಾರಣೆ ಬೇಕು. ಅರ್ಜುನ್ ಈ ತಂಡದಲ್ಲಿ ಆಡಬೇಕೆಂದರೆ ಈ ತಂಡದ ಸಾಮಥ್ರ್ಯಕ್ಕೆ ತಕ್ಕಂತೆ ಆಡಬೇಕು ಎಂದು ಶೇನ್ ಬಾಂಡ್ ಹೇಳಿದರು.

ಮುಂಬೈ ತಂಡ ಈ ಐಪಿಎಲ್​ನಲ್ಲಿ ಏಕೆ ಅರ್ಜುನ್​ಗೆ ಅವಕಾಶ ನೀಡಲಿಲ್ಲ? ಕೋಚ್ ನೀಡಿದ ಕಾರಣ ಹೀಗಿದೆ
ಅರ್ಜುನ್ ತೆಂಡೂಲ್ಕರ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 03, 2022 | 5:27 PM

ಮುಂಬೈ ಇಂಡಿಯನ್ಸ್ (Mumbai Indians) ತಂಡವು ಐಪಿಎಲ್ 2022 (IPL 2022)ರ ಸೀಸನ್​ನಲ್ಲಿ ಕಳಪೆ ಪ್ರದರ್ಶನದ ಕಾರಣದಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಹಲವು ಹೊಸ ಆಟಗಾರರಿಗೆ ಅವಕಾಶ ನೀಡಿದೆ. ಆದರೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್​ (Arjun Tendulkar)ಗೆ ಅವಕಾಶ ನೀಡಲಿಲ್ಲ. ಒಂದು ಪಂದ್ಯದಲ್ಲಾದರೂ ಅರ್ಜುನ್ ಆಟವನ್ನು ನೋಡುವ ಅವಕಾಶ ಸಿಗುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸಿದ್ದರು. ಆದರೆ ಅರ್ಜುನ್ ತೆಂಡೂಲ್ಕರ್​ಗೆ ಕೊನೆಯವರೆಗೂ ಅವಕಾಶ ಸಿಗಲಿಲ್ಲ. ಮುಂಬೈ ಇಂಡಿಯನ್ಸ್ 30 ಲಕ್ಷಕ್ಕೆ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿತ್ತು. ಮುಂಬೈ ಇಂಡಿಯನ್ಸ್ ಸೀಸನ್​ನ 14 ಪಂದ್ಯಗಳಲ್ಲಿ ರಮಣದೀಪ್ ಸಿಂಗ್, ಸಂಜಯ್ ಯಾದವ್ ಮತ್ತು ಕುಮಾರ್ ಕಾರ್ತಿಕೇಯನ್ ಅವರನ್ನು ಆಡಿಸಿತು. ಜೊತೆಗೆ ವಿದೇಶಿ ಆಟಗಾರರಾದ ಡೇವಿಡ್ ಬ್ರಾವಿಸ್, ಟ್ರಿಸ್ಟಾನ್ ಸ್ಟಬ್ಸ್ ಕೂಡ ಅವಕಾಶ ಪಡೆದರು. ಏಳೆಂಟು ಪಂದ್ಯಗಳ ನಂತರ ಅರ್ಜುನ್ ತೆಂಡೂಲ್ಕರ್ ಅವರ ಹೆಸರಿನ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಆದರೆ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್‌ಮೆಂಟ್ ಅವರಿಗೆ ಅವಕಾಶ ನೀಡಲಿಲ್ಲ.

22 ವರ್ಷದ ಅರ್ಜುನ್ ಸ್ಥಳೀಯ ತಂಡ ಮುಂಬೈ ಪರ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ. ಅರ್ಜುನ್ ಟಿ20 ಮುಂಬೈ ಲೀಗ್‌ನಲ್ಲೂ ಆಡಿದ್ದರು. ತುಲನಾತ್ಮಕವಾಗಿ ಅರ್ಜುನ್‌ಗೆ ಅನುಭವದ ಕೊರತೆಯಿದೆ. ವಾಂಖೆಡೆಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿತ್ತು. ಆಗ ಅರ್ಜುನ್​ಗೆ ಅವಕಾಶ ಸಿಗುತ್ತದೆ ಎಂದು ಹಲವರು ಅಂದುಕೊಂಡಿದ್ದರು.

ಇದನ್ನೂ ಓದಿ:IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು

ಇದನ್ನೂ ಓದಿ
Image
T20 Blast 2022: 5 ಸಿಕ್ಸರ್, 5 ಬೌಂಡರಿ, 5 ವಿಕೆಟ್! ಟಿ20 ಬ್ಲಾಸ್ಟ್​ನಲ್ಲಿ ಅಬ್ಬರಿಸಿದ ಮಾಜಿ ಸಿಎಸ್​ಕೆ ಆಲ್​ರೌಂಡರ್
Image
ಬರೋಬ್ಬರಿ 31 ಸಿಕ್ಸರ್; ಐಪಿಎಲ್​ನಲ್ಲಿ ದುಬಾರಿಯಾಗಿದ್ದ ಸಿರಾಜ್​ಗೆ ಟೆಸ್ಟ್ ತಂಡದಲ್ಲಿ ಆಡುವ ಬಯಕೆ; ಸಿಗುತ್ತಾ ಅವಕಾಶ?

ಶೇನ್ ಬಾಂಡ್ ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ತಂಡದ ಕೋಚ್ ಶೇನ್ ಬಾಂಡ್, ಅರ್ಜುನ್ 11ರ ಆಟದಲ್ಲಿ ಏಕೆ ಅವಕಾಶ ಪಡೆಯಲಿಲ್ಲ ಎಂಬುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ಶೇನ್ ಬಾಂಡ್ ಪ್ರಕಾರ, ಅರ್ಜುನ್ ತನ್ನ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅನ್ನು ಇನ್ನೂ ಸುಧಾರಿಸಬೇಕಾಗಿದೆ. ಅರ್ಜುನ್ ತಮ್ಮ ಆಟವನ್ನು ಸುಧಾರಿಸಿಕೊಳ್ಳಬೇಕು ಮತ್ತು ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಬಾಂಡ್ ನಂಬಿದ್ದಾರೆ.

ಮುಂಬೈಯಂತಹ ತಂಡದಲ್ಲಿ ಆಡುವಾಗ ಮುಂಬೈ ತಂಡಕ್ಕೆ ಸೇರುವುದು ಒಂದು ವಿಷಯ ಮತ್ತು ಆಡುವ 11 ರಲ್ಲಿ ಸ್ಥಾನ ಪಡೆಯುವುದು ಇನ್ನೊಂದು ವಿಷಯ. ಅರ್ಜುನ್‌ಗೆ ಇನ್ನೂ ಸಾಕಷ್ಟು ಶ್ರಮ ಮತ್ತು ಸುಧಾರಣೆ ಬೇಕು. ಅರ್ಜುನ್ ಈ ತಂಡದಲ್ಲಿ ಆಡಬೇಕೆಂದರೆ ಈ ತಂಡದ ಸಾಮಥ್ರ್ಯಕ್ಕೆ ತಕ್ಕಂತೆ ಆಡಬೇಕು ಎಂದು ಶೇನ್ ಬಾಂಡ್ ಹೇಳಿದರು. ಅಂತಿಮ 11ರ ಘಟ್ಟಕ್ಕೆ ತಲುಪುವ ಮುನ್ನ ಅರ್ಜುನ್ ತಮ್ಮ ಫೀಲ್ಡಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಎಂದು ಬಾಂಡ್ ಹೇಳಿದ್ದಾರೆ.

Published On - 5:27 pm, Fri, 3 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್