IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು

IPL 2022: ಐಪಿಎಲ್ 2022 ರಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಲ್ಪಟ್ಟ ಅನೇಕ ಆಟಗಾರರ ಪ್ರದರ್ಶನವು ಅವರಿಗೆ ಖರ್ಚು ಮಾಡಿದ ಮೊತ್ತಕ್ಕೆ ಸರಿಯಾಗಿಲ್ಲ ಎಂಬುದು ಸಾಬೀತಾಯಿತು. ಆದರೆ ಈ ನಾಲ್ಕು ಆಟಗಾರರು ಕಡಿಮೆ ಹಣಕ್ಕೆ ಹರಾಜಾಗಿದ್ದರು, ಉತ್ತಮ ಪ್ರದರ್ಶನದಿಂದ ಮುಂದಿನ ಸೀಸನ್​ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು.

IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು
ಜಿತೇಶ್ ಶರ್ಮಾ, ಮೊಹ್ಸಿನ್ ಖಾನ್, ತಿಲಕ್ ವರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on: Jun 01, 2022 | 2:50 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಸೀಸನ್ ಮುಗಿದಿದೆ. ಈಗ ಇಡೀ ಸೀಸನ್ ಅನ್ನು ಮೆಲುಕು ಹಾಕಲಾಗುತ್ತಿದೆ. ಈ ಸೀಸನ್​ನ ಅತ್ಯುತ್ತಮ ಅಥವಾ ಕೆಟ್ಟ ಪ್ರದರ್ಶನದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಅಲ್ಲದೆ, ಪ್ರತಿ ಸೀಸನ್‌ನಂತೆ, ಕೆಲವು ಆಟಗಾರರು ಕೂಡ ಚರ್ಚೆಯಾಗುತ್ತಿದ್ದಾರೆ. ಅವರ್ಯಾರೆಂದರೆ, ಯಾರು ಈ ಸೀಸನ್​ನಿಂದ ಮೊದಲ ಬಾರಿಗೆ ಈ ಲೀಗ್‌ಗೆ ಕಾಲಿಟ್ಟು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರೊ ಅವರ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ಈ ಸೀಸನ್​ನಲ್ಲಿ ಅಂತಹ ಅನೇಕ ಆಟಗಾರರು ಆಡಿದ್ದು ಕಂಡುಬಂದಿದೆ. ಆದರೆ ಇಂತಹ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಫ್ರಾಂಚೈಸಿಗಳು ನೀಡಿದ್ದು ಕೇವಲ ಅತ್ಯಲ್ಪ ಮೊತ್ತವನ್ನು. ಆದರೆ ಕಡಿಮೆ ಹಣ ಪಡೆದರೂ ಈ ಆಟಗಾರರು ಯಾವ ಚಾಂಪಿಯನ್ ಆಟಗಾರನಿಗೂ ಕಡಿಮೆ ಇಲ್ಲದ ಪ್ರದರ್ಶನ ನೀಡಿದರು. ಅವರುಗಳಲ್ಲಿ ಕೆಲವರ ವಿವರ ಇಲ್ಲಿದೆ.

  1. ತಿಲಕ್ ವರ್ಮಾ: ಹೈದರಾಬಾದ್‌ನ ಈ 19 ವರ್ಷದ ಯುವ ಬ್ಯಾಟ್ಸ್‌ಮನ್ ಈ ಸೀಸನ್​ನಲ್ಲಿ ಪಾದಾರ್ಪಣೆ ಮಾಡಿದರು ಮತ್ತು ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸಿದರು. ಈ ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ನಂತರ ಎಡಗೈ ಬ್ಯಾಟ್ಸ್‌ಮನ್ ತಿಲಕ್ ಮುಂಬೈನ ಅತ್ಯಂತ ಉತ್ತಮ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಂಡರು. ಮುಂಬೈ ಅವರನ್ನು ಕೇವಲ 1.70 ಕೋಟಿ ರೂಪಾಯಿಗೆ ಖರೀದಿಸಿತು. ತಿಲಕ್ ತನ್ನ ಚೊಚ್ಚಲ ಋತುವಿನಲ್ಲಿ ಮುಂಬೈ ಪರ ಎಲ್ಲಾ 14 ಪಂದ್ಯಗಳನ್ನು ಆಡಿ, 397 ರನ್ ಗಳಿಸಿದರು. ಈ ಅವಧಿಯಲ್ಲಿ ಅವರು ಎರಡು ಅರ್ಧಶತಕಗಳನ್ನು ಗಳಿಸಿದರು. ತಿಲಕ್ ವೇಗವಾಗಿ ಆಡುವುದರ ಜೊತೆಗೆ ಇನ್ನಿಂಗ್ಸ್ ಅನ್ನು ನಿಭಾಯಿಸಬಲ್ಲರು ಎಂದು ತೋರಿಸಿದರು. ಮುಂದಿನ ಋತುವಿನಲ್ಲಿ ಅವರು ಮುಂಬೈನ ಬ್ಯಾಟಿಂಗ್‌ಗೆ ಆಧಾರವಾಗಲಿದ್ದಾರೆ.
  2. ಜಿತೇಶ್ ಶರ್ಮಾ: ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುವುದಾದರೆ, ಪಂಜಾಬ್ ಕಿಂಗ್ಸ್‌ನ ಈ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ವಿದರ್ಭದ ಜಿತೇಶ್ ಶರ್ಮಾ ಮೂರನೇ ಪಂದ್ಯದಲ್ಲಿ ಪಂಜಾಬ್‌ ಪರ ಆಡುವ XI ನಲ್ಲಿ ಕಾಣಿಸಿಕೊಂಡರು. ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ, ಜಿತೇಶ್ ಬ್ಯಾಟ್‌ನಲ್ಲೂ ಅದ್ಭುತಗಳನ್ನು ಮಾಡಿದರು ಮತ್ತು 163.63 ರ ಪ್ರಚಂಡ ಸ್ಟ್ರೈಕ್ ರೇಟ್‌ನಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 234 ರನ್ ಗಳಿಸಿದರು. ಪಂಜಾಬ್ ಅವರನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿತು.
  3. ಮೊಹ್ಸಿನ್ ಖಾನ್: ಮೊಹ್ಸಿನ್ ಖಾನ್ ಹೊಸ ಭಾರತೀಯ ಬೌಲರ್‌ಗಳ ನಡುವೆ ಸಾಕಷ್ಟು ಸುದ್ದಿ ಮಾಡಿದರು. ಲಕ್ನೋ ಸೂಪರ್ ಜೈಂಟ್ಸ್‌ಗೆ ಪಾದಾರ್ಪಣೆ ಮಾಡಿದ ಎಡಗೈ ವೇಗಿ ಮೊಹ್ಸಿನ್, ಅವರ ವೇಗದ ಜೊತೆಗೆ, ನಿಖರವಾದ ಲೈನ್, ಎಕನಾಮಿಕಲ್ ಬೌಲಿಂಗ್‌ನಿಂದ ಎಲ್ಲರನ್ನು ಅಚ್ಚರಿಗೊಳಿಸಿದರು. ರನ್‌ಗಳನ್ನು ನಿಯಂತ್ರಿಸಿದ್ದಲ್ಲದೆ ವಿಕೆಟ್‌ಗಳನ್ನು ಕಬಳಿಸಿದರು. ಮೊಹ್ಸಿನ್ 20 ಲಕ್ಷಗಳ ಮೂಲ ಬೆಲೆಗೆ ಲಕ್ನೋ ಸೇರಿ, 5.93 ರ ಎಕನಾಮಿಯೊಂದಿಗೆ 9 ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಪಡೆದರು.
  4. ಮುಖೇಶ್ ಚೌಧರಿ: ಇನ್ನೊಬ್ಬ ಎಡಗೈ ವೇಗದ ಬೌಲರ್, ಮುಂದಿನ ಸೀಸನ್​ಗಳಲ್ಲಿ ಅದ್ಭುತಗಳನ್ನು ಮಾಡುವುದನ್ನು ಕಾಣಬಹುದು. ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಿರುವ ಮಹಾರಾಷ್ಟ್ರದ ವೇಗಿ ಕಳಪೆ ಆರಂಭದ ನಂತರ ಸುಧಾರಿಸಿಕೊಂಡರು ಮತ್ತು ಪವರ್‌ಪ್ಲೇಗಳಲ್ಲಿ ತಂಡದ ವಿಶ್ವಾಸಾರ್ಹ ಬೌಲರ್ ಎನಿಸಿಕೊಂಡರು. ಮುಖೇಶ್ ಅವರು ಸ್ವಿಂಗಿಂಗ್ ಎಸೆತಗಳ ಆಧಾರದ ಮೇಲೆ ದೀಪಕ್ ಚಹಾರ್ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಪೂರೈಸಲು ಸಾಧ್ಯವಾಯಿತು. CSK ಅವರನ್ನು ಕೇವಲ 20 ಲಕ್ಷಕ್ಕೆ ಖರೀದಿಸಿತು, ಮುಖೇಶ್ 13 ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಚೆನ್ನೈ ಈ ಬಾರಿ ಪ್ಲೇ ಆಫ್ ಹಂತಕ್ಕೂ ಬರಲಾಗದೆ, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿತ್ತು.
  5. ಇದನ್ನೂ ಓದಿ
    Image
    IPL 2022: ಡಿಕೆ,ಆರ್​ಕೆಗೂ ಇಲ್ಲ ಸ್ಥಾನ, ಪೀಟರ್ಸನ್​ರ ಅಚ್ಚರಿಯ ಐಪಿಎಲ್ ಪ್ಲೇಯಿಂಗ್ 11
    Image
    Dinesh Karthik Birthday Special: ಸಿಂಪಲ್ಲಾಗಿ ಒಂದು DKಯ ಸಿರೀಯಸ್ ಲವ್​ ಸ್ಟೋರಿ..!
    Image
    Asia Cup Hockey 2022: ಸೋಲದಿದ್ದರೂ ಫೈನಲ್​ಗೆ ಪ್ರವೇಶಿಸದ ಭಾರತ..!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ