Asia Cup Hockey 2022: ಸೋಲದಿದ್ದರೂ ಫೈನಲ್​ಗೆ ಪ್ರವೇಶಿಸದ ಭಾರತ..!

Asia Cup Hockey 2022: ಸೂಪರ್-4ರ ಮೊದಲ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತ್ತು. ಹಾಗೆಯೇ ಮಲೇಷ್ಯಾ ವಿರುದ್ಧ 3-3 ಡ್ರಾ ಸಾಧಿಸಿತ್ತು.

Asia Cup Hockey 2022: ಸೋಲದಿದ್ದರೂ ಫೈನಲ್​ಗೆ ಪ್ರವೇಶಿಸದ ಭಾರತ..!
Indian hockey team
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 31, 2022 | 7:32 PM

Asia Cup Hockey 2022: ಏಷ್ಯಾ ಕಪ್​ನ ಸೂಪರ್-4 ರ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ದ ಡ್ರಾ ಮಾಡಿಕೊಳ್ಳುವ ಮೂಲಕ ಭಾರತ ಹಾಕಿ ತಂಡ (Indian Hockey Team) ಫೈನಲ್​ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಭಾರತ ತಂಡದ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ 4-4 ಅಂತರದಿಂದ ದಕ್ಷಿಣ ಕೊರಿಯಾ ಸಮಬಲ ಸಾಧಿಸಿತು. ಈ ಮೂಲಕ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಉತ್ತಮ ಗೋಲು ಸರಾಸರಿಯಿಂದಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಮೊದಲ ಗೋಲು ಗಳಿಸಿ ಮುನ್ನಡೆ ಸಾಧಿಸಿತು.

ಪಂದ್ಯದ 9ನೇ ನಿಮಿಷದಲ್ಲಿ ನೀಲಂ ಸಂಜೀಪ್ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದರ ನಂತರ ಕೊರಿಯಾ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. 13ನೇ ನಿಮಿಷದಲ್ಲಿ ಝೆಂಗ್ ಮತ್ತು 18ನೇ ನಿಮಿಷದಲ್ಲಿ ವು ಚೆನ್ ಗೋಲು ಬಾರಿಸಿ ದಕ್ಷಿಣ ಕೊರಿಯಾಗೆ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ ಭಾರತ 21ನೇ ನಿಮಿಷದಲ್ಲಿ ಮಣಿಂದರ್ ಸಿಂಗ್ ಬಾರಿಸಿದ ಗೋಲಿನೊಂದಿಗೆ 2-2 ಸಮಬಲ ಸಾಧಿಸುವಲ್ಲಿ ಸಫಲವಾಗಿತ್ತು.

ಅಷ್ಟೇ ಅಲ್ಲದೆ 22ನೇ ನಿಮಿಷದಲ್ಲಿ ಮಹಿಷ್ ಬಾರಿಸಿದ ಚೆಂಡು ಗೋಲು ಪೋಸ್ಟ್​ ಒಳಗೆ ತಲುಪುತ್ತಿದ್ದಂತೆ ಭಾರತ ತಂಡ 3-2 ಮುನ್ನಡೆ ಪಡೆಯಿತು. ಆದರೆ 28ನೇ ನಿಮಿಷದಲ್ಲಿ ಕೊರಿಯಾದ ಕಿಮ್ ಜಂಗ್ ಹೂ ಗೋಲು ಬಾರಿಸಿ ಮತ್ತೆ ಪಂದ್ಯವನ್ನು 3-3 ರಿಂದ ಸಮಬಲಕ್ಕೆ ತಂದರು. ಉಭಯ ತಂಡಗಳ ಭರ್ಜರಿ ಪೈಪೋಟಿಯೊಂದಿಗೆ ಮೂರನೇ ಕ್ವಾರ್ಟರ್​ ಮತ್ತಷ್ಟು ರೋಚಕತೆ ಪಡೆಯಿತು.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಉತ್ತಮ ಅಟ್ಯಾಕಿಂಗ್ ಪಾಸ್​ಗಳ ಮೂಲಕ ಗಮನ ಸೆಳೆದ ಭಾರತದ ಪರ ಶೇಷ್ ಗೌಡ 37ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆದರೆ 44ನೇ ನಿಮಿಷದಲ್ಲಿ ಜಂಗ್ ಮಂಜೆ ಮತ್ತೊಮ್ಮೆ ಗೋಲು ಬಾರಿಸಿ 4-4 ರಲ್ಲಿ ಸಮಬಲ ಸಾಧಿಸಿದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತ ತಂಡವು ಫೈನಲ್​ಗೇರುವ ಕನಸು ಕೂಡ ಕಮರಿತು. ಈ ಪಂದ್ಯದಲ್ಲಿ ಭಾರತ ತಂಡ ಗೆದ್ದಿದ್ದರೆ ನೇರವಾಗಿ ಫೈನಲ್​ಗೆ ಪ್ರವೇಶಿಸುವ ಅವಕಾಶವಿತ್ತು.

ಆದರೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಪರಿಣಾಮ ಗೋಲುಗಳ ಸರಾಸರಿಯಲ್ಲಿ ಮಲೇಷ್ಯಾ ತಂಡವು ಫೈನಲ್​ಗೆ ಪ್ರವೇಶಿಸಿದೆ. ಸೂಪರ್-4 ಪಂದ್ಯಗಳಲ್ಲಿ ಭಾರತ-ಮಲೇಷ್ಯಾ ಸಮ ಪಾಯಿಂಟ್ಸ್​ ಹೊಂದಿದ್ದರೂ, ಭಾರತಕ್ಕಿಂತ ಮಲೇಷ್ಯಾ ಹೆಚ್ಚಿನ ಗೋಲು ದಾಖಲಿಸಿರುವ ಪರಿಣಾಮ ಫೈನಲ್​ಗೆ ಅವಕಾಶ ಗಿಟ್ಟಿಸಿಕೊಂಡಿದೆ.

ಇದಕ್ಕೂ ಮುನ್ನ ಸೂಪರ್-4ರ ಮೊದಲ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತ್ತು. ಮಲೇಷ್ಯಾ ವಿರುದ್ಧ 3-3 ಡ್ರಾ ಸಾಧಿಸಿತ್ತು. ಇನ್ನು ಭಾರತ ತಂಡವು ಕಂಚಿನ ಪದಕ್ಕಾಗಿ ಜಪಾನ್ ವಿರುದ್ದ ಆಡಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 pm, Tue, 31 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್