IPL 2022: RCB ಪರ ಒಂದೇ ಒಂದು ಪಂದ್ಯವಾಡದ ಆಟಗಾರರು ಇವರೇ..!
IPL 2022: ಐಪಿಎಲ್ ಸೀಸನ್ 15 ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್.
Updated on:May 31, 2022 | 9:24 PM

ಈ ಬಾರಿಯ ಐಪಿಎಲ್ನಲ್ಲಿ RCB ತಂಡವು ಒಟ್ಟು 16 ಪಂದ್ಯಗಳನ್ನು ಆಡಿದೆ. ಆದರೆ ಕೆಲ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಅಂದರೆ ಈ ಸಲ ಆರ್ಸಿಬಿ ತಂಡದಲ್ಲಿ ಒಟ್ಟು 22 ಆಟಗಾರರಿದ್ದರು. ಅವರಲ್ಲಿ 17 ಆಟಗಾರರು ಮಾತ್ರ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದರು.

ಅದರಂತೆ ತಂಡದಲ್ಲಿ ಐವರು ಆಟಗಾರರು ಒಂದೇ ಒಂದು ಮ್ಯಾಚ್ ಆಡಿಲ್ಲ. ಇನ್ನು ಸಿದ್ದಾರ್ಥ್ ಕೌಲ್ಗೆ ಒಂದು ಮ್ಯಾಚ್ನಲ್ಲಿ ಮಾತ್ರ ಚಾನ್ಸ್ ಲಭಿಸಿತ್ತು. ಹಾಗಿದ್ರೆ ಆರ್ಸಿಬಿ ಪರ ಚಾನ್ಸ್ ಸಿಗದ ಐದು ಆಟಗಾರರು ಯಾರೆಂದು ನೋಡೋಣ...

ಚಮಾ ಮಿಲಿಂದ್: ಯುವ ವೇಗಿ ಚಮಾ ಮಿಲಿಂದ್ಗೆ ಈ ಸಲ ಚಾನ್ಸ್ ಸಿಕ್ಕಿಲ್ಲ.

ಜೇಸನ್ ಬೆಹ್ರಂಡ್ರೋಫ್: ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರಂಡ್ರೋಫ್ಗೂ ಅವಕಾಶ ಸಿಕ್ಕಿಲ್ಲ.

ಫಿನ್ ಅಲೆನ್: ನ್ಯೂಜಿಲೆಂಡ್ನ ಸ್ಪೋಟಕ ಆರಂಭಿಕ ಆಟಗಾರ ಫಿನ್ ಅಲೆನ್ಗೂ ಒಂದು ಮ್ಯಾಚ್ನಲ್ಲೂ ಚಾನ್ಸ್ ನೀಡಿಲ್ಲ.

ಕರ್ಣ್ ಶರ್ಮಾ: ಅನುಭವಿ ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಇಡೀ ಸೀಸನ್ನಲ್ಲಿ ಬೆಂಚ್ ಕಾದಿದ್ದರು.

ಅನೀಶ್ವರ್ ಗೌತಮ್: ಆರ್ಸಿಬಿ ತಂಡದಲ್ಲಿದ್ದ ಏಕೈಕ ಕನ್ನಡಿಗ ಅನೀಶ್ವರ್ ಗೌತಮ್ಗೂ ಒಂದೇ ಒಂದು ಮ್ಯಾಚ್ನಲ್ಲಿ ಚಾನ್ಸ್ ನೀಡಿಲ್ಲ.

ಐಪಿಎಲ್ ಸೀಸನ್ 15 ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರಂಡ್ರೋಫ್, ಸುಯಶ್ ಪ್ರಭುದೇಸಾಯ್, ಚಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್
Published On - 6:32 pm, Tue, 31 May 22



















