ಭಾರತದಲ್ಲಿ ಜನಿಸಿ, ನ್ಯೂಜಿಲೆಂಡ್ ಪರ ದೇಶೀಯ ಕ್ರಿಕೆಟ್ ಆಡಿ, ಮೂರನೇ ದೇಶದ ಪರ ಪದಾರ್ಪಣೆ ಮಾಡಿದ ಭಾರತೀಯ..!

Teja Nidamanuru: ಆಮ್‌ಸ್ಟೆಲ್‌ವೀನ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೆದರ್ಲೆಂಡ್ಸ್ ಪರ ತೇಜ ಪಾದರ್ಪಣೆ ಮಾಡಿದ್ದಾರೆ.

Jun 01, 2022 | 1:56 PM
TV9kannada Web Team

| Edited By: Zahir PY

Jun 01, 2022 | 1:56 PM

ಭಾರತ ದೇಶದಲ್ಲಿ ಜನಿಸಿ, ಬೇರೊಂದ ದೇಶದ ಪರ ಕ್ರಿಕೆಟ್ ಆಡಿದ ಅನೇಕ ಆಟಗಾರರನ್ನು ನೀವು ನೋಡಿರುತ್ತೀರಿ. ಆದರೆ ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶದ ಪರ ದೇಶೀಯ ಕ್ರಿಕೆಟ್ ಆಡಿ, ಇನ್ನೊಂದು ದೇಶದ ಪರ ಪದಾರ್ಪಣೆ ಮಾಡಿದ ಕ್ರಿಕೆಟಿಗನೊಬ್ಬ ಇದೀಗ ಸಖತ್ ಸುದ್ದಿಯಾಗಿದ್ದಾರೆ. ಈ ಆಟಗಾರನ ಹೆಸರು ತೇಜ ನಿಡಮನೂರು. ಮೂಲತಃ ಆಂಧ್ರಪದೇಶದವರು.

1 / 5
ಇದೀಗ ಆಮ್‌ಸ್ಟೆಲ್‌ವೀನ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೆದರ್ಲೆಂಡ್ಸ್ ಪರ ತೇಜ ಪಾದರ್ಪಣೆ ಮಾಡಿದ್ದಾರೆ. ಮಳೆ ಬಾಧಿತ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಮೊದಲು ಬ್ಯಾಟ್ ಮಾಡಿ 45 ಓವರ್‌ಗಳಲ್ಲಿ 7 ವಿಕೆಟ್‌ಗೆ 240 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ 43.1 ಓವರ್‌ಗಳಲ್ಲಿ ಗುರಿ ಸಾಧಿಸಿದೆ. ವೆಸ್ಟ್ ಇಂಡೀಸ್‌ ಪರ ವಿಕೆಟ್‌ಕೀಪರ್ ಬ್ಯಾಟ್ಸ್​ಮನ್ ಶೇಯ್ ಹೋಪ್ ಅಜೇಯ 119 ರನ್ ಗಳಿಸಿ ಮಿಂಚಿದ್ದರು.

2 / 5
ಇದಾಗ್ಯೂ ಈ ಪಂದ್ಯದ ಬಳಿಕ ಹೆಚ್ಚು ಸುದ್ದಿಯಾಗಿದ್ದು ನೆದರ್ಲೆಂಡ್ಸ್​ ಆಲ್​ರೌಂಡರ್ ತೇಜ ನಿಡಮನೂರು. ಏಕೆಂದರೆ ಚೊಚ್ಚಲ ಪಂದ್ಯದಲ್ಲೇ ಅಜೇಯ 58 ರನ್ ಗಳಿಸಿ ಮಿಂಚಿದ್ದರು. ವೆಸ್ಟ್ ಇಂಡೀಸ್ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ತೇಜ 51 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಸಿಡಿಸಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ಪರ ಅತೀ ಹೆಚ್ಚು ಬಾರಿಸಿದ್ದು ಕೂಡ ಚೊಚ್ಚಲ ಪಂದ್ಯವಾಡಿದ ತೇಜ ನಿಡಮನೂರು.

3 / 5
ತೇಜ ಭಾರತೀಯ ಮೂಲದ ಆಟಗಾರ.  ಆಂಧ್ರದ ವಿಜಯವಾಡದಲ್ಲಿ ಜನಿಸಿದ ಇವರು ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ನ್ಯೂಜಿಲೆಂಡ್​ನಲ್ಲಿ ಎಂಬುದು ವಿಶೇಷ. ನ್ಯೂಜಿಲೆಂಡ್​ನ ಆಕ್ಲೆಂಡ್‌ ಪರ ದೇಶೀಯ ಕ್ರಿಕೆಟ್‌ ಆಡಿದ್ದ ತೇಜ, ಪದಾರ್ಪಣೆ ಮಾಡಿದ್ದು ಮಾತ್ರ ನೆದರ್​ಲೆಂಡ್ಸ್​ ಪರ ಎಂಬುದು ಮತ್ತೊಂದು ವಿಶೇಷ. ಈ ಮೂಲಕ ಚೊಚ್ಚಲ ಪಂದ್ಯದಲ್ಲಿ ನೆದರ್​ಲೆಂಡ್ಸ್​ ಪರ ಅರ್ಧಶತಕ ಬಾರಿಸಿ ಇದೀಗ ಸಖತ್ ಸುದ್ದಿಯಾಗಿದ್ದಾರೆ.

4 / 5
27ರ ಹರೆಯದ ತೇಜ ನಿಡಮನೂರು ಇದುವರೆಗೆ 2 ಲಿಸ್ಟ್ ಎ ಮತ್ತು 5 ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇದಾಗ್ಯೂ ಪ್ರಸಿದ್ಧ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರೊಂದಿಗೆ ನಾರ್ದರ್ನ್ ಯೂನಿವರ್ಸಿಟಿ ಲೀಗ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಹಲವು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನವನ್ನು ಆರಂಭಿಸಿರುವ ತೇಜ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada