- Kannada News Photo gallery Cricket photos Deepak Chahar tie the knot with his longtime girlfriend Jaya Bhardwaj check Photos
Deepak Chahar Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಕ್ ಚಹರ್: ಮದುವೆಯ ಕ್ಯೂಟ್ ಫೋಟೋ ನೋಡಿ
Deepak chahar Wedding: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ದೀಪಕ್ ಚಹರ್ ಆಗ್ರಾದ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದೀರ್ಘಕಾಲದ ಗೆಳತಿ ಜಯಾ ಭಾರದ್ವಾಜ್ ಅವರನ್ನು ವಿವಾಹವಾಗಿದ್ದಾರೆ.
Updated on:Jun 03, 2022 | 11:28 AM



ವಿವಾಹದಲ್ಲಿ ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿ ಮಿಂಚಿದರೆ, ಕ್ರೀಮ್ ಬಣ್ಣದ ಲೆಹೆಂಗಾ ತೊಟ್ಟು ಹಸೆಮಣೆ ಏರಿದರು. ಮನೀಷ್ ಮಲ್ಹೋತ್ರಾ ಅವರು ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಅವರ ಮದುವೆಯ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ.

"ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗ, ನೀವು ಮತ್ತು ನಾನು ಸರಿ ಎಂದು ನನಗೆ ಅನಿಸಿತು. ನಾವು ನಮ್ಮ ಜೀವನದ ಪ್ರತಿ ಕ್ಷಣವನ್ನು ಒಟ್ಟಿಗೆ ಆನಂದಿಸಿದ್ದೇವೆ ಮತ್ತು ನಾನು ನಿಮ್ಮನ್ನು ಯಾವಾಗಲೂ ಹೀಗೆ ಸಂತೋಷವಾಗಿರಿಸಲು ಭರವಸೆ ನೀಡುತ್ತೇನೆ. ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ದಯವಿಟ್ಟು ಎಲ್ಲರೂ ನಿಮ್ಮ ಆಶೀರ್ವಾದವನ್ನು ನಮಗೆ ನೀಡಿ," ಎಂದು ದೀಪಕ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

ಚಹರ್ ಅವರ ರಾಜಮನೆತನದ ವಿವಾಹಕ್ಕಾಗಿ ರಾಜಮನೆತನದ ಔತಣವನ್ನೂ ಏರ್ಪಡಿಸಲಾಗಿತ್ತು. ಆಗ್ರಾದ ವಿಶೇಷ ಚಾಟ್ ಅಲ್ಲದೆ, ಆಹಾರದಲ್ಲಿ ಹತ್ರಾಸ್ ರಾಬ್ರಿ ಇತ್ಯಾದಿಗಳೂ ಇದ್ದವು. ಇದಲ್ಲದೆ, ಅತಿಥಿಗಳು ಥಾಯ್, ಇಟಾಲಿಯನ್ ಸೇರಿದಂತೆ ಅವಧಿ, ಮುಘಲೈ, ಪಂಜಾಬಿ, ದಕ್ಷಿಣ ಭಾರತೀಯ ತಿನಿಸುಗಳಿದ್ದವು.

ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ದೀಪಕ್ ಚಾಹರ್ ಅವರು ಜಯ ಭಾರದ್ವಾಜ್ ಅವರ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ನವ ದಂಪತಿಗಳ ಜೊತೆ ದೀಪಕ್ ಚಹರ್ ತಮ್ಮ ರಾಹುಲ್ ಚಹರ್ ಫೋಟೋಕ್ಕೆ ಪೋಸ್ ಕೊಟ್ಟ ಕ್ಷಣ.
Published On - 11:43 am, Thu, 2 June 22
