ENG Vs NZ: ಕಿವೀಸ್ ಎದುರು ಮಂಕಾದ ಆಂಗ್ಲರು; 141 ರನ್‌ಗಳಿಗೆ ಇಂಗ್ಲೆಂಡ್ ಆಲ್ ಔಟ್
ENG Vs NZ: ಇಂಗ್ಲೆಂಡ್ ಆರಂಭಿಕರಾದ ಜಾಕ್ ಕ್ರಾಲಿ 43 ರನ್ ಗಳಿಸಿದರು. ಇತರ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ ಕೇವಲ 25 ರನ್ ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಜೋ ರೂಟ್ ಮಾತ್ರ ಎರಡಂಕಿ ದಾಟಲು ಸಾಧ್ಯವಾಯಿತು.
ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ (ENG vs NZ) ಎರಡನೇ ದಿನದಂದು, ನ್ಯೂಜಿಲೆಂಡ್ ಕ್ರಿಕೆಟ್ ಉತ್ತಮ ಪುನರಾಗಮನವನ್ನು ಮಾಡಿ ಇಂಗ್ಲೆಂಡ್ ತಂಡವನ್ನು ಕೇವಲ 141 ರನ್‌ಗಳಿಗೆ ಆಲೌಟ್ ಮಾಡಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಸಮಯದಲ್ಲಿ, ಇಂಗ್ಲೆಂಡ್ ತಂಡವು ಪಂದ್ಯದಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ದೀರ್ಘ ಮುನ್ನಡೆ ಪಡೆಯುತ್ತದೆ ಎಂದು ತೋರುತ್ತಿತ್ತು. ಆದರೆ ನ್ಯೂಜಿಲೆಂಡ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ತಮ್ಮ ತಂಡವನ್ನು ಪಂದ್ಯದಲ್ಲಿ ಜೀವಂತವಾಗಿರಿಸಿಕೊಂಡಿತು.
ಟಿಮ್ ಸೌಥಿಗೆ 4 ವಿಕೆಟ್
ಟಿಮ್ ಸೌಥಿ ನ್ಯೂಜಿಲೆಂಡ್ ಪರ ಮಾರಕ ಬೌಲಿಂಗ್ ಮಾಡಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಮುನ್ನಡೆ ಸಾಧಿಸುವ ಅವಕಾಶ ನೀಡಲಿಲ್ಲ. ಟಿಮ್ ಸೌಥಿ 14 ಓವರ್‌ಗಳಲ್ಲಿ 55 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದರಲ್ಲಿ 3 ಮೇಡನ್ ಓವರ್ ಕೂಡ ಸೇರಿದೆ. ಇದಲ್ಲದೆ, ಟ್ರೆಂಟ್ ಬೋಲ್ಟ್ ಕೂಡ ಅದ್ಭುತ ಬೌಲಿಂಗ್ ಮಾಡಿ ಟಿಮ್ ಸೌಥಿಗೆ ಉತ್ತಮ ಬೆಂಬಲ ನೀಡಿದರು. ಟ್ರೆಂಟ್ ಬೌಲ್ಟ್ 13.5 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 3 ವಿಕೆಟ್ ಪಡೆದರು. ಡಿಗ್ರಾಂಡ್‌ಹೋಮ್ 2 ವಿಕೆಟ್ ಹಾಗೂ ಜೇಮ್ಸ್ 1 ವಿಕೆಟ್ ಪಡೆದರು. ಹೀಗಾಗಿ ಇಡೀ ಇಂಗ್ಲೆಂಡ್ ತಂಡ 42.5 ಓವರ್‌ಗಳಲ್ಲಿ 141 ರನ್ ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ: Breaking news: ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ನಾಯಕನ ಆಯ್ಕೆ! ಸ್ಟಾರ್ ಆಲ್ರೌಂಡರ್ಗೆ ಕ್ಯಾಪ್ಟನ್ ಪಟ್ಟ ಕಟ್ಟಿದ ಇಸಿಬಿ
ಜಾಕ್ ಕ್ರೌಲಿ ಉತ್ತಮ ಆಟ
ಇಂಗ್ಲೆಂಡ್ ಆರಂಭಿಕರಾದ ಜಾಕ್ ಕ್ರಾಲಿ 43 ರನ್ ಗಳಿಸಿದರು. ಇತರ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ ಕೇವಲ 25 ರನ್ ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಜೋ ರೂಟ್ ಮಾತ್ರ ಎರಡಂಕಿ ದಾಟಲು ಸಾಧ್ಯವಾಯಿತು. ಅವರು 11 ರನ್ ಗಳಿಸಿದರು. ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್ ಗಳಿಸಿ ಟ್ರೆಂಟ್ ಬೋಲ್ಟ್ ಎಸೆತದಲ್ಲಿ ಔಟಾದರು.
ನ್ಯೂಜಿಲೆಂಡ್ 132 ರನ್‌ಗಳಿಗೆ ಆಲೌಟ್ ಆಯಿತು
ಇದಕ್ಕೂ ಮುನ್ನ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ವಿಶೇಷತೆ ತೋರಲು ಸಾಧ್ಯವಾಗಲಿಲ್ಲ. ಆರಂಭಿಕರಾದ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಇಬ್ಬರೂ ತಲಾ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಡಿ ಗ್ರ್ಯಾಂಡ್‌ಹೋಮ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪರ ಅಜೇಯ 42 ರನ್ ಗಳಿಸಿದರು. ಇಂಗ್ಲೆಂಡ್ ಪರ್ ಜೇಮ್ಸ್ ಆಂಡರ್ಸನ್ ಮತ್ತು ಮ್ಯಾಟಿ ಪಾಟ್ಸ್ ತಲಾ 4 ವಿಕೆಟ್‌ಗಳನ್ನು ಪಡೆದರು. ಅದೇ ಸಮಯದಲ್ಲಿ, ಬ್ರಾಡ್ ಮತ್ತು ಸ್ಟೋಕ್ಸ್ ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆದರು.