Breaking news: ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ನಾಯಕನ ಆಯ್ಕೆ! ಸ್ಟಾರ್ ಆಲ್ರೌಂಡರ್ಗೆ ಕ್ಯಾಪ್ಟನ್ ಪಟ್ಟ ಕಟ್ಟಿದ ಇಸಿಬಿ
Ben Stokes: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ನಾಯಕರನ್ನಾಗಿ ನೇಮಿಸಿದೆ. ಮಂಡಳಿಯು ಗುರುವಾರ ಟ್ವಿಟರ್‌ನಲ್ಲಿ ಹೇಳಿಕೆ ನೀಡುವ ಮೂಲಕ ಈ ಕುರಿತು ಮಾಹಿತಿ ನೀಡಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ECB) ಆಲ್ ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡ (England Test team)ದ ನೂತನ ನಾಯಕರನ್ನಾಗಿ ನೇಮಿಸಿದೆ. ಮಂಡಳಿಯು ಗುರುವಾರ ಟ್ವಿಟರ್‌ನಲ್ಲಿ ಹೇಳಿಕೆ ನೀಡುವ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಆಸ್ಟ್ರೇಲಿಯ ವಿರುದ್ಧದ ಆಶಸ್ ಸರಣಿಯಲ್ಲಿ 4-0 ಅಂತರದಿಂದ ಸೋತಿತ್ತು. ನಂತರ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಹೀನಾಯ ಸೋಲನುಭವಿಸಬೇಕಾಯಿತು. ಹೀಗಾಗಿ ಮಾಜಿ ನಾಯಕ ಜೋ ರೂಟ್ ಈ ತಿಂಗಳ ಆರಂಭದಲ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಸೂಕ್ತ ನಾಯಕನ ಹುಡುಕಾಟ ನಡೆದಿತ್ತು. ಈಗ ಆ ಹುಡುಕಾಟಕ್ಕೆ ಅಂತ್ಯ ಸಿಕ್ಕಿದ್ದು ನೂತನ ಟೆಸ್ಟ್ ನಾಯಕನಾಗಿ ಸ್ಟೋಕ್ಸ್ ಆಯ್ಕೆಯಾಗಿದ್ದಾರೆ. ಪ್ರಸ್ತುತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದೆ. ಇಂಗ್ಲೆಂಡ್ ತನ್ನ ಕೊನೆಯ 17 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಕಳೆದ ಐದು ಸರಣಿಗಳಲ್ಲಿ ಒಂದು ಸರಣಿ ಗೆಲ್ಲಲು ಸಹ ಇಂಗ್ಲೆಂಡ್ಗೆ ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ಅವಕಾಶ ಸಿಕ್ಕಿರುವುದು ನನಗೆ ಗೌರವ ತಂದಿದೆ. ಇದೊಂದು ದೊಡ್ಡ ವಿಚಾರ.
ಧನ್ಯವಾದಗಳು ರೂಟ್ ಮಾಜಿ ನಾಯಕ ಜೋ ರೂಟ್‌ಗೆ ಸ್ಟೋಕ್ಸ್ ಧನ್ಯವಾದ ಹೇಳಿದ್ದು, ಇಂಗ್ಲೆಂಡ್ ಕ್ರಿಕೆಟ್‌ಗಾಗಿ ಜೋ ರೂಟ್ ಶ್ರಮಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ರೂಟ್ ಪ್ರಪಂಚದಾದ್ಯಂತ ಕ್ರೀಡಾ ರಾಯಭಾರಿಯಾಗಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನನ್ನನ್ನು ನಾಯಕನಾಗಿ ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.
ರೂಟ್ 64 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ನ ನಾಯಕತ್ವ ವಹಿಸಿದ್ದರು, ಇದರಲ್ಲಿ 27 ಪಂದ್ಯಗಳನ್ನು ಗೆದ್ದಿದ್ದರೆ, 26 ಪಂದ್ಯಗಳಲ್ಲಿ ತಂಡ ಸೋಲನುಭವಿಸಿದೆ. ಈ ಅಂಕಿಅಂಶಗಳು ಇಂಗ್ಲೆಂಡ್ ಮಾಜಿ ನಾಯಕನ ದಾಖಲೆಗಳಾಗಿವೆ. ರೂಟ್ ಗೆಲುವಿನ ಶೇಕಡಾವಾರು 42.18 ಆಗಿದೆ. 50 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದವರಲ್ಲಿ ಮೈಕೆಲ್ ವಾನ್ ಎರಡನೇ ಸ್ಥಾನದಲ್ಲಿದ್ದಾರೆ.
Congratulations to our new Men’s Test captain, @benstokes38! ????????
— England Cricket (@englandcricket) April 28, 2022
ಕ್ರಿಕೆಟ್‌ನಿಂದ ದೂರ ಉಳಿದಿದ್ದ ಸ್ಟೋಕ್ಸ್ ಈಗಿನ ಕಾಲದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಸ್ಟೋಕ್ಸ್ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ. ಡಿಸೆಂಬರ್ 2013 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಸ್ಟೋಕ್ಸ್ ಇದುವರೆಗೆ 79 ಪಂದ್ಯಗಳನ್ನು ಆಡಿದ್ದಾರೆ. ರೂಟ್ ಅನುಪಸ್ಥಿತಿಯಲ್ಲಿ ಅವರು ಒಂದು ಪಂದ್ಯದಲ್ಲಿ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ರೂಟ್ ಪಿತೃತ್ವ ರಜೆಯಲ್ಲಿದ್ದಾಗ ಸ್ಟೋಕ್ಸ್ ವೆಸ್ಟ್ ಇಂಡೀಸ್ ವಿರುದ್ಧ ತಂಡದ ನಾಯಕರಾಗಿದ್ದರು. ಮಾನಸಿಕ ಸಮಸ್ಯೆಯಿಂದಾಗಿ ಕಳೆದ ವರ್ಷ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಂಡಿದ್ದರು. ಸ್ಟೋಕ್ಸ್ 35.89 ರ ಸರಾಸರಿಯಲ್ಲಿ 5,061 ಟೆಸ್ಟ್ ರನ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ ಬೌಲಿಂಗ್ನಲ್ಲಿ 174 ವಿಕೆಟ್‌ಗಳನ್ನು ಪಡೆಯುವುದರ ಮೂಲಕ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇದನ್ನೂ ಓದಿ:IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಐವರು ವಿದೇಶಿ ಕ್ರಿಕೆಟಿಗರಿವರು..!
Published On - 3:54 pm, Thu, 28 April 22