AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂದಿನ ಪಂದ್ಯಗಳಲ್ಲಿ RCB ಗೆ ಗೆಲುವು ಸುಲಭವಲ್ಲ..!

IPL 2022: 10 ಪಾಯಿಂಟ್ಸ್​ಗಳೊಂದಿಗೆ 4 ತಂಡಗಳಿರುವ ಕಾರಣ ಈ ತಂಡಗಳ ನಡುವೆ 3ನೇ ಮತ್ತು 4ನೇ ಸ್ಥಾನಕ್ಕೆ ಪೈಪೋಟಿ ಕಂಡು ಬರಲಿದೆ. ಒಂದು ವೇಳೆ ಪಾಯಿಂಟ್ಸ್ ಟೇಬಲ್​ನಲ್ಲಿ ಈ ತಂಡಗಳು 16 ಅಂಕ ಪಡೆದರೆ ಇಲ್ಲಿ ನೆಟ್​ ರನ್​ರೇಟ್ ಮುಖ್ಯವಾಗುತ್ತದೆ.

IPL 2022: ಮುಂದಿನ ಪಂದ್ಯಗಳಲ್ಲಿ RCB ಗೆ ಗೆಲುವು ಸುಲಭವಲ್ಲ..!
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 28, 2022 | 5:11 PM

IPL 2022: ಐಪಿಎಲ್ ಸೀಸನ್​ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಆರ್​ಸಿಬಿ (RCB) ತಂಡವು ಇದೀಗ ಮಂಕಾಗಿದೆ. ಮೊದಲ 7 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದ ಫಾಫ್ ಪಡೆ, ಆ ಬಳಿಕ  ಬ್ಯಾಕ್ ಟು ಬ್ಯಾಕ್ ಸೋಲುವ ಮೂಲಕ ಸೋಲಿನ ಸಂಖ್ಯೆಯನ್ನು 4 ಕ್ಕೇರಿಸಿದೆ. ಅಂದರೆ 9 ಪಂದ್ಯಗಳಲ್ಲಿ ಕೇವಲ 5 ಗೆಲುವು ದಾಖಲಿಸಿ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿಯೇ ಪಾಯಿಂಟ್ ಟೇಬಲ್​ನ ಟಾಪ್​ 4 ನಲ್ಲಿ ಕಾಣಿಸಿಕೊಳ್ಳಲು ಆರ್​ಸಿಬಿಗೆ ಮುಂದಿನ ಪಂದ್ಯಗಳು ನಿರ್ಣಾಯಕ. ಏಕೆಂದರೆ ಆರ್​ಸಿಬಿಗೆ ಇನ್ನು 5 ಪಂದ್ಯಗಳು ಉಳಿದಿದ್ದು, ಇದರಲ್ಲಿ 4 ರಲ್ಲಿ ಜಯ ಸಾಧಿಸಿದ್ರೆ ಮಾತ್ರ ನೇರವಾಗಿ ಪ್ಲೇಆಫ್​ ಪ್ರವೇಶಿಸಬಹುದು. ಒಂದು ವೇಳೆ 3 ಗೆಲುವು ದಾಖಲಿಸಿದರೆ, ಉಳಿದ ತಂಡಗಳ ಫಲಿತಾಂಶವನ್ನು ಕೂಡ ಎದುರು ನೋಡಬೇಕಾಗುತ್ತದೆ.

ಏಕೆಂದರೆ ಈಗಾಗಲೇ 3 ತಂಡಗಳು 10 ಪಾಯಿಂಟ್ ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ 8 ಪಂದ್ಯಗಳಿಂದ 10 ಪಾಯಿಂಟ್ ಪಡೆದ 4ನೇ ತಂಡ ಎನಿಸಿಕೊಳ್ಳಲಿದೆ. ಅಂದರೆ ಸದ್ಯ ಪಾಯಿಂಟ್ ಟೇಬಲ್​ನಲ್ಲಿ 14 ಪಾಯಿಂಟ್ಸ್​ ಪಡೆದಿರುವ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದ್ದರೆ, 12 ಪಾಯಿಂಟ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ 2ನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಪ್ಲೇಆಫ್​ ಪ್ರವೇಶಿಸುವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಈ ಎರಡು ತಂಡಗಳು ಮುಂದಿನ 6 ಪಂದ್ಯಗಳಲ್ಲಿ 2 ಜಯ ಸಾಧಿಸಿದರೆ ಪ್ಲೇಆಫ್ ಖಚಿತವಾಗಲಿದೆ.

ಇನ್ನೊಂದೆಡೆ 10 ಪಾಯಿಂಟ್ಸ್​ಗಳೊಂದಿಗೆ 4 ತಂಡಗಳಿರುವ ಕಾರಣ ಈ ತಂಡಗಳ ನಡುವೆ 3ನೇ ಮತ್ತು 4ನೇ ಸ್ಥಾನಕ್ಕೆ ಪೈಪೋಟಿ ಕಂಡು ಬರಲಿದೆ. ಒಂದು ವೇಳೆ ಪಾಯಿಂಟ್ಸ್ ಟೇಬಲ್​ನಲ್ಲಿ ಈ ತಂಡಗಳು 16 ಅಂಕ ಪಡೆದರೆ ಇಲ್ಲಿ ನೆಟ್​ ರನ್​ರೇಟ್ ಮುಖ್ಯವಾಗುತ್ತದೆ. ಹೀಗಾಗಿ ಆರ್​ಸಿಬಿ ಮುಂದಿನ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ನೇರವಾಗಿ ಪ್ಲೇಆಫ್ ಪ್ರವೇಸಿಸುವುದು ಉತ್ತಮ. ಆದರೆ ಆರ್​ಸಿಬಿ ಮುಂದಿರುವುದು ಸಣ್ಣ ಸವಾಲುಗಳಲ್ಲ ಎಂಬುದು ಇಲ್ಲಿ ವಿಶೇಷ.

ಏಕೆಂದರೆ ಮುಂದಿನ ಪಂದ್ಯದಲ್ಲಿ (ಏಪ್ರಿಲ್ 30) ಆರ್​ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಆಡಬೇಕಿದೆ. ಈ ಬಾರಿಯ ಐಪಿಎಲ್​ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಪಡೆ ಆರ್​ಸಿಬಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಇದಾದ ಬಳಿಕ ಆರ್​ಸಿಬಿ ಮೇ 4 ರಂದು ಸಿಎಸ್​ಕೆ ವಿರುದ್ದ ಆಡಬೇಕಿದೆ. ಈ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ಕಳಪೆ ಪ್ರದರ್ಶನ ನೀಡಿದರೂ ಆರ್​ಸಿಬಿ ವಿರುದ್ದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ಈ ಪಂದ್ಯ ಕೂಡ ಆರ್​ಸಿಬಿಗೆ ಸವಾಲಾಗಲಿದೆ.

ಮೇ 8 ರಂದು ನಡೆಯುವ ಮತ್ತೊಂದು ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್. ಅಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಎಸ್​ಆರ್​ಹೆಚ್ ತಂಡವು ಆರ್​ಸಿಬಿಯನ್ನು ಮೊದಲ ಪಂದ್ಯದಲ್ಲಿ ಕೇವಲ 68 ರನ್​ಗಳಿಗೆ ಆಲೌಟ್ ಮಾಡಿತ್ತು. ಹೀಗಾಗಿ ಆರ್​ಸಿಬಿ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಕುತೂಹಲ. ಈ ಪಂದ್ಯದ ಬಳಿಕ ಆರ್​ಸಿಬಿ ಎದುರಾಳಿ ಪಂಜಾಬ್ ಕಿಂಗ್ಸ್​. ಮೇ 13 ರಂದು ನಡೆಯಲಿರುವ ಈ ಪಂದ್ಯವು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಆರ್​ಸಿಬಿ ಈ ಬಾರಿ ಪಂಜಾಬ್ ಕಿಂಗ್ಸ್​ ವಿರುದ್ದ ಸೋಲಿನೊಂದಿಗೆ ಅಭಿಯಾನ ಆರಂಭಿಸಿತ್ತು.

ಇನ್ನು ಮೇ 19 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಆಡಬೇಕಿರುವುದು ಗುಜರಾತ್ ಟೈಟನ್ಸ್ ವಿರುದ್ದ. ಅಂದರೆ ಈ ಬಾರಿಯ ಐಪಿಎಲ್​ನ ಬಲಿಷ್ಠ ತಂಡದ ವಿರುದ್ದ ಎಂಬುದು ವಿಶೇಷ. ಅಂದರೆ ಮೊದಲ ಸುತ್ತಿನಲ್ಲಿ ಸೋತಿದ್ದ 3 ತಂಡಗಳ ವಿರುದ್ದವೇ ಆರ್​ಸಿಬಿ ನಿರ್ಣಾಯಕ ಪಂದ್ಯಗಳನ್ನು ಆಡಬೇಕಿದೆ. ಇನ್ನುಳಿದ 2 ಪಂದ್ಯಗಳು ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ವಿರುದ್ದ ಆಡಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡುತ್ತಿದೆ. ಇತ್ತ ಆರ್​ಸಿಬಿ ಮುಂದಿನ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿದರೆ ಮಾತ್ರ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಒಂದು ವೇಳೆ 3 ಜಯ ಸಾಧಿಸಿದ್ರೆ ನೆಟ್​ ರನ್​ ರೇಟ್ ಮೊರೆ ಹೋಗಬೇಕಾಗುತ್ತದೆ. ಇತ್ತ ಈಗಾಗಲೇ ಆರ್​ಸಿಬಿ ವಿರುದ್ದ ಗೆದ್ದು ಬೀಗಿರುವ ತಂಡಗಳು ಫಾಫ್ ಡುಪ್ಲೆಸಿಸ್​ ಪಡೆಗೆ ಹೊಸ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್