- Kannada News Photo gallery Cricket photos Glenn Maxwell-Vini Raman's wedding event photos goes viral
MaxiVini PHOTOS: RCB ಕ್ಯಾಂಪ್ನಲ್ಲಿ ಮ್ಯಾಕ್ಸಿ-ವಿನಿ ಮದುವೆ ಸಂಭ್ರಮ
RCB: ಆರ್‌ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 30 ರಂದು ಆಡಲಿದ್ದು, ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
Updated on:Apr 28, 2022 | 5:53 PM

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕಳೆದ ತಿಂಗಳಷ್ಟೇ ಭಾರತೀಯ ಮೂಲದ ವಿನಿ ರಾಮನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದ ಈ ಜೋಡಿ ಆ ಬಳಿಕ ಮಾರ್ಚ್ 27 ರಂದು ಚೆನ್ನೈನಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಶಾಸ್ತ್ರ ಮುಗಿಸಿದ್ದರು. ಇದೇ ಕಾರಣದಿಂದಾಗಿ ಆರ್‌ಸಿಬಿ ತಂಡದ ಆರಂಭಿಕ ಪಂದ್ಯಗಳಿಗೆ ಮ್ಯಾಕ್ಸ್ವೆಲ್ ಅಲಭ್ಯರಾಗಿದ್ದರು.

ಇದೀಗ ಆರ್‌ಸಿಬಿ ಬಳಗದಲ್ಲಿರುವ ನವ ಜೋಡಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಶೇಷ ಆತಿಥ್ಯವನ್ನು ನೀಡಿದ್ದಾರೆ. ನವದಂಪತಿಗಳಿಗೆ ಔತಣಕೂಟವನ್ನ ಏರ್ಪಡಿಸಿ ಆರ್‌ಸಿಬಿ ಆಟಗಾರರು ಸಂಭ್ರಮಿಸಿದರು. ಇದೀಗ ಮ್ಯಾಕ್ಸಿ-ವಿನಿ ಔತಣಕೂಟದ ಸಂಭ್ರಮದ ಫೋಟೋಗಳು ವೈರಲ್ ಆಗಿದೆ.

ಅಲ್ಲದೆ ಈ ಸಂಭ್ರಮದಲ್ಲಿ ಆರ್‌ಸಿಬಿ ಆಟಗಾರರು ಕುಣಿದು ಕುಪ್ಪಳಿಸಿರುವ ವಿಡಿಯೋಗಳು ವೈರಲ್ ಆಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಶಹಬಾಜ್ ಅಹ್ಮದ್ ಅವರ ಭರ್ಜರಿ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ಎಲ್ಲಾ ಆಟಗಾರರು ವಿವಿಧ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಹಾಗೆಯೇ ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಕುರ್ತಾದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಆಗಮಿಸಿದ್ದರು.

ಹಾಗೆಯೇ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದಂಪತಿ ಪಕ್ಕಾ ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ಮಿಂಚಿದ್ದರು.

ಗ್ಲೆನ್ ಮ್ಯಾಕ್ಸ್ವೆಲ್-ವಿನಿ ರಾಮನ್

ಆರ್‌ಸಿಬಿ ಆಟಗಾರರ ಸಂಭ್ರಮ

ವಿನಿ-ಮ್ಯಾಕ್ಸಿ

ಆರ್‌ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 30 ರಂದು ಆಡಲಿದ್ದು, ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
Published On - 5:49 pm, Thu, 28 April 22
























