Asia Cup 2022: ಶ್ರೀಲಂಕಾ ಏಷ್ಯಾಕಪ್ ಆತಿಥ್ಯ ವಹಿಸಬೇಕೆಂದರೆ ಈ ಸರಣಿ ಯಶಸ್ವಿಯಾಗಲೇಬೇಕು..!

Asia Cup 2022: ಶಾಶ್ವತ ಪ್ರತಿಸ್ಪರ್ಧಿಗಳಾದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆದು ಸುಮಾರು ವರ್ಷಗಳೇ ಕಳೆದು ಹೋಗಿವೆ. ಕ್ರಿಕೆಟ್ ಅಭಿಮಾನಿಗಳು ಏಷ್ಯಾ ಕಪ್ ಅಥವಾ ಐಸಿಸಿ ಸ್ಪರ್ಧೆಯಲ್ಲಿ ಈ ಎರಡು ದೇಶಗಳ ಮುಖಾಮುಖಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Asia Cup 2022: ಶ್ರೀಲಂಕಾ ಏಷ್ಯಾಕಪ್ ಆತಿಥ್ಯ ವಹಿಸಬೇಕೆಂದರೆ ಈ ಸರಣಿ ಯಶಸ್ವಿಯಾಗಲೇಬೇಕು..!
ಏಷ್ಯನ್ ಕ್ರಿಕೆಟ್ ಕೌನ್ಸಿಲ್
Follow us
| Updated By: ಪೃಥ್ವಿಶಂಕರ

Updated on: Jun 04, 2022 | 7:01 AM

ಬಹಳ ದಿನಗಳ ನಂತರ ಶ್ರೀಲಂಕಾ ಕ್ರಿಕೆಟ್‌, ದೊಡ್ಡ ಸ್ಪರ್ಧೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ. ಆದರೆ ಆರ್ಥಿಕ ಮತ್ತು ರಾಜಕೀಯ ಉದ್ವಿಗ್ನತೆಯಿಂದಾಗಿ ಏಷ್ಯಾಕಪ್ (Asia Cup) ಆತಿಥ್ಯದಲ್ಲಿಯೂ ಸಮಸ್ಯೆಗಳು ಏರ್ಪಟ್ಟಿವೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿ ಶ್ರೀಲಂಕಾ ಮಂಡಳಿಯ ಅಧಿಕಾರಿಗಳು ಭಾರತೀಯ ಮಂಡಳಿಯ (BCCI) ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದರು. ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಾಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆಗಿದ್ದು, ಜಯ್ ಶಾ ಮತ್ತು ಇತರ ಎಸಿಸಿ ಅಧಿಕಾರಿಗಳು ಎಲ್ಲವೂ ಸರಿಯಾಗಿದ್ದರೆ, ಏಷ್ಯಾಕಪ್‌ನಿಂದ ಶ್ರೀಲಂಕಾವನ್ನು ತೆಗೆದುಹಾಕುವುದಿಲ್ಲ ಎಂದು ಶ್ರೀಲಂಕಾ ಮಂಡಳಿಯ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಅದಕ್ಕೂ ಮುನ್ನ ಶ್ರೀಲಂಕಾ ಮಂಡಳಿಗೆ ದೊಡ್ಡ ಪರೀಕ್ಷೆ ಎದುರಾಗಿರುವುದೆನೆಂದರೆ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಪಕ್ಷೀಯ ಸರಣಿ ಆಯೋಜನೆ. ಈ ಸರಣೀಯನ್ನು ಲಂಕಾ ಸರಿಯಾಗಿ ಆಯೋಜಿಸಿದರೆ, ಈ ಸರಣಿಯಿಂದ ಲಂಕಾ ಮಂಡಳಿ ಎಸಿಸಿ ಅಧಿಕಾರಿಗಳ ನಂಬಿಕೆಯನ್ನು ಗೆಲ್ಲಬಹುದು. ಇದಕ್ಕೆ ಪೂರಕವೆಂಬಂತೆ ಶ್ರೀಲಂಕಾ ಪ್ರವಾಸಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಬಿಳಿ ಚೆಂಡಿನ ನಾಯಕ ಆ್ಯರೋನ್ ಫಿಂಚ್, ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಈ ಸರಣಿಯು ‘ಗೆಲುವು’ ತಂದುಕೊಡಲಿದೆ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದಂತಹ ಹೆವಿವೇಟ್ ರಾಷ್ಟ್ರಗಳು ಏಷ್ಯಾಕಪ್‌ನಲ್ಲಿ ಆಡಲಿವೆ. ಶಾಶ್ವತ ಪ್ರತಿಸ್ಪರ್ಧಿಗಳಾದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆದು ಸುಮಾರು ವರ್ಷಗಳೇ ಕಳೆದು ಹೋಗಿವೆ. ಕ್ರಿಕೆಟ್ ಅಭಿಮಾನಿಗಳು ಏಷ್ಯಾ ಕಪ್ ಅಥವಾ ಐಸಿಸಿ ಸ್ಪರ್ಧೆಯಲ್ಲಿ ಈ ಎರಡು ದೇಶಗಳ ಮುಖಾಮುಖಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯದಿಂದ ಸಂಘಟಕರು ಭಾರಿ ಆರ್ಥಿಕ ಲಾಭ ಪಡೆಯುತ್ತಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರ ಅಂದಾಜಿನ ಪ್ರಕಾರ ಏಷ್ಯಾ ಕಪ್ ಆಯೋಜಿಸುವಲ್ಲಿ ಲಂಕಾ ವಿಫಲವಾದರೆ, ಭಾರತೀಯ ಕರೆನ್ಸಿಯಲ್ಲಿ ಸುಮಾರು 500 ಕೋಟಿ ಆದಾಯವನ್ನು ಕಳೆದುಕೊಳ್ಳುತ್ತದೆ ಎಂದು ಅಂದಾಜಿಸಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ, ಈಗ ನಾನು ಆಸ್ಟ್ರೇಲಿಯಾ ಸರಣಿಯನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತೇನೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯಲಿದೆ ಎಂದು ಜೈ ಶಾ ಮತ್ತು ಇತರ ಎಸಿಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:Sourav Ganguly: ಸೌರವ್ ಗಂಗೂಲಿ ಹೊಸ ಯೋಜನೆ ಯಾವುದು?: ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಬಿಸಿಸಿಐ ಅಧ್ಯಕ್ಷ

ಇದನ್ನೂ ಓದಿ
Image
ENG Vs NZ: ಕಿವೀಸ್ ಎದುರು ಮಂಕಾದ ಆಂಗ್ಲರು; 141 ರನ್​ಗಳಿಗೆ ಇಂಗ್ಲೆಂಡ್ ಆಲ್ ​ಔಟ್
Image
ಕೇವಲ ಸ್ಪೀಡ್ ಇದ್ದರೆ ಸಾಲದು! ಉಮ್ರಾನ್ ಮಲಿಕ್​ ಕಂಡರೆ ಪಾಕ್ ವೇಗಿಗ್ಯಾಕೆ ಇಷ್ಟೊಂದು ಹೊಟ್ಟೆಕಿಚ್ಚು
Image
IPL 2022: ಈ ಐಪಿಎಲ್​ ನನಗೆ ಸಾಕಷ್ಟು ವಿಶಿಷ್ಟವಾಗಿದ್ದರೂ ಅದೊಂದು ನಿರಾಸೆ ನನ್ನನ್ನು ಕಾಡುತ್ತಿದೆ; ಜೋಸ್ ಬಟ್ಲರ್

ಏಷ್ಯಾ ಕಪ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಆಗಸ್ಟ್ 20 ರಿಂದ ಮುಖ್ಯ ಸ್ಪರ್ಧೆಯ ಪ್ರಾರಂಭಕ್ಕೂ ಮೊದಲು ಅರ್ಹತಾ ಪಂದ್ಯಗಳು ನಡೆಯಲಿವೆ. ಐಸಿಸಿಯ ಐದು ಪೂರ್ಣ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಮತ್ತೊಂದು ತಂಡ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದೆ.

ನಾವು ಏಷ್ಯಾಕಪ್ ಅನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶ್ಲೇ ಡಿ ಸಿಲ್ವಾ ಹೇಳಿದ್ದಾರೆ. ನಾನು ಇತರ ದೇಶಗಳಿಗೆ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇನೆ. ಹಣಕಾಸಿನ ಅಂಶವು ನಮಗೆ ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ ಹಣದ ಜೊತೆಗೆ ನಮಗೆ ಎಲ್ಲವೂ ಬಹಳ ಮುಖ್ಯ. ನಾವು ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದೇವೆ. ನಾನು ಏಷ್ಯಾ ಕಪ್ ಆಯೋಜಿಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದೇನೆ ಎಂದಿದ್ದಾರೆ. ಆಸೀಸ್ ಕ್ರಿಕೆಟ್ ತಂಡ ಈಗಾಗಲೇ ಶ್ರೀಲಂಕಾ ತಲುಪಿದ್ದು, ಮೂರು ಟಿ20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಈ ಸರಣಿಯು ಜೂನ್ 6 ರಂದು ಆರಂಭವಾಗಲಿದ್ದು, ಇದು ಜುಲೈ 12 ರವರೆಗೆ ನಡೆಯಲಿದೆ.

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು