IPL 2022: ಈ ಐಪಿಎಲ್ ನನಗೆ ಸಾಕಷ್ಟು ವಿಶಿಷ್ಟವಾಗಿದ್ದರೂ ಅದೊಂದು ನಿರಾಸೆ ನನ್ನನ್ನು ಕಾಡುತ್ತಿದೆ; ಜೋಸ್ ಬಟ್ಲರ್
Jos Buttler: ನಾನು ವೈಯಕ್ತಿಕವಾಗಿ ವಿಶೇಷವಾಗಿ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವರ್ಷ ನಾವು ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇವೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15 ನೇ ಸೀಸನ್ ಭಾನುವಾರ ಕೊನೆಗೊಂಡಿತು. ಗುಜರಾತ್ ಟೈಟಾನ್ಸ್ (Gujarat Titans) ತನ್ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಎರಡನೇ ಪ್ರಶಸ್ತಿ ಗೆಲ್ಲುವ ರಾಜಸ್ಥಾನಕ್ಕೆ ಬಾರಿ ನಿರಾಸೆ ಎದುರಾಯಿತು. ಆದಾಗ್ಯೂ, ಈ ತಂಡವು ತನ್ನ 14 ವರ್ಷಗಳ ಬರವನ್ನು ಕೊನೆಗೊಳಿಸಿ ಫೈನಲ್‌ಗೆ ಪ್ರವೇಶಿಸಿದ ಕಾರಣ ಈ ಋತುವು ರಾಜಸ್ಥಾನಕ್ಕೆ ಮೊದಲಿಗಿಂತ ಉತ್ತಮವಾಗಿದೆ. ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಅಂದರೆ 2008ರಲ್ಲಿ ಮೊದಲ ಬಾರಿಗೆ ರಾಜಸ್ಥಾನ ಫೈನಲ್‌ಗೆ ಕಾಲಿಟ್ಟು ಗೆದ್ದಿತ್ತು, ಆದರೆ ನಂತರ ತಂಡವು ಫೈನಲ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಈ ವರ್ಷ, ಆದಾಗ್ಯೂ, ಅದರ ಬರ ಕೊನೆಗೊಂಡು, ರಾಜಸ್ಥಾನ ಫೈನಲ್‌ಗೆ ಪ್ರವೇಶಿಸಿತು. ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ (Jos Buttler) ರಾಜಸ್ಥಾನವನ್ನು ಈ ಹಂತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಟ್ಲರ್ ಈ ಸೀಸನ್‌ನಲ್ಲಿ ಪ್ರಬಲ ಆಟ ಪ್ರದರ್ಶಿಸಿ ಹೆಚ್ಚಿನ ರನ್ ಗಳಿಸಿದರು. ಜೊತೆಗೆ ಆರೆಂಜ್ ಕ್ಯಾಪ್ ಕೂಡ ಗೆದ್ದರು. ಬಟ್ಲರ್ ಐಪಿಎಲ್-2022ರಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 863 ರನ್ ಗಳಿಸಿದ್ದರು. ಈ ಮೂಲಕ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಅವರು ವಿರಾಟ್ ಕೊಹ್ಲಿಯೊಂದಿಗೆ ಜಂಟಿಯಾಗಿ ನಂ.1 ಸ್ಥಾನದಲ್ಲಿದ್ದಾರೆ. ಇದೀಗ ಬಟ್ಲರ್ ತಮ್ಮ ಐಪಿಎಲ್ ಪಯಣವನ್ನು ನೆನಪಿಸಿಕೊಂಡಿದ್ದು, ಬಟ್ಲರ್ಗೆ ಈ ಪ್ರಯಾಣ ಕೊಂಚ ಸಂತೋಷ ತಂದಿದ್ದರೆ, ಸ್ವಲ್ಪ ಮಟ್ಟಿಗೆ ನಿರಾಶೆಯನ್ನೂ ತಂದಿದೆಯಂತೆ.
ಇದನ್ನೂ ಓದಿ:GT vs RR Final: ಕೊಹ್ಲಿ ದಾಖಲೆ ಮುರಿಯಲ್ಲಾಗಲಿಲ್ಲ! ಈ ಐಪಿಎಲ್‌ನಲ್ಲಿ ಬಟ್ಲರ್ ಸೃಷ್ಟಿಸಿದ ಪ್ರಮುಖ ದಾಖಲೆಗಳಿವು
ಇದರಿಂದ ನಿರಾಸೆ
ಬಟ್ಲರ್ ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ತಮ್ಮ IPL-2022 ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ. ನನಗೆ ಇಡೀ ಐಪಿಎಲ್ ಸೀಸನ್ನನ್ನು ಅರ್ಥಮಾಡಿಕೊಳ್ಳಲು ಕೆಲವು ದಿನಗಳನ್ನು ತೆಗೆದುಕೊಂಡಿತು. ನಾವು ಫೈನಲ್ ಅನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ನಾನು ನಿರಾಶೆಗೊಂಡಿದ್ದೇನೆ ಆದರೆ ನಾನು ನನ್ನ ತಂಡದ ಎಲ್ಲಾ ಸಿಬ್ಬಂದಿಗೆ, ರಾಜಸ್ಥಾನ ತಂಡದಲ್ಲಿ ತೊಡಗಿಸಿಕೊಂಡಿರುವ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
Had a few days to reflect on the IPL season. Whilst very disappointed not to go all the way I want to say a huge thank you to everyone involved with the @rajasthanroyals from teammates, support staff and especially all fans! pic.twitter.com/W4d6eIUI2R
— Jos Buttler (@josbuttler) June 3, 2022
ಇದು ನನಗೆ ಸ್ಮರಣೀಯ ಋತುವಾಗಿತ್ತು. ಈ ಸೀಸನ್ನನ್ನು ಉತ್ತಮ ಉತ್ಸಾಹದಿಂದ ಆಡಲಾಯಿತು. ಜೊತೆಗೆ ಇದು ತುಂಬಾ ವಿನೋದಮಯವಾಗಿತ್ತು. ನಾನು ವೈಯಕ್ತಿಕವಾಗಿ ವಿಶೇಷವಾಗಿ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವರ್ಷ ನಾವು ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇವೆ. ಈ ಅದ್ಭುತ ಐಪಿಎಲ್‌ನಲ್ಲಿ ಭಾಗವಹಿಸಿದವರಿಗೆ ಧನ್ಯವಾದಗಳು ಮತ್ತು ಗುಜರಾತ್ ಟೈಟಾನ್ಸ್‌ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
Published On - 6:19 pm, Fri, 3 June 22