AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RR Final: ಕೊಹ್ಲಿ ದಾಖಲೆ ಮುರಿಯಲ್ಲಾಗಲಿಲ್ಲ! ಈ ಐಪಿಎಲ್​ನಲ್ಲಿ ಬಟ್ಲರ್ ಸೃಷ್ಟಿಸಿದ ಪ್ರಮುಖ ದಾಖಲೆಗಳಿವು

Jos Buttler: ಬಟ್ಲರ್ ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೊತೆಗೆ 4 ಶತಕಗಳನ್ನು ಗಳಿಸಿದರು. ಈ ಮೂಲಕ 2016ರ ಋತುವಿನಲ್ಲಿ 4 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

GT vs RR Final: ಕೊಹ್ಲಿ ದಾಖಲೆ ಮುರಿಯಲ್ಲಾಗಲಿಲ್ಲ! ಈ ಐಪಿಎಲ್​ನಲ್ಲಿ ಬಟ್ಲರ್ ಸೃಷ್ಟಿಸಿದ ಪ್ರಮುಖ ದಾಖಲೆಗಳಿವು
ಜೋಸ್ ಬಟ್ಲರ್
TV9 Web
| Edited By: |

Updated on: May 30, 2022 | 4:29 PM

Share

ಐಪಿಎಲ್ 2022 (IPL 2022)ರಲ್ಲಿ, ಯಾವುದೇ ಒಬ್ಬ ಆಟಗಾರ ಹೆಚ್ಚಿನ ಜನರ ತುಟಿಗಳಲ್ಲಿ ಉಳಿದಿದ್ದರೆ, ಅದು ಜೋಸ್ ಬಟ್ಲರ್(Jos Buttler). ಇಂಗ್ಲೆಂಡ್‌ನ ಈ ಬಲಿಷ್ಠ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲೀಗ್‌ನ 15 ನೇ ಋತುವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡರು. ರಾಜಸ್ಥಾನ್ ರಾಯಲ್ಸ್‌ನ ಈ ಆರಂಭಿಕ ಆಟಗಾರ ಸೀಸನ್​ ಆರಂಭದಿಂದಲೂ ಬಹಳಷ್ಟು ರನ್‌ಗಳನ್ನು ಮಾಡಿ, ಪ್ರತಿ ಇನ್ನಿಂಗ್ಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಹಾಗೂ ಹಳೆಯ ದಾಖಲೆಗಳನ್ನು ಸರಿಗಟ್ಟಿದ. ಗುಜರಾತ್ ಟೈಟಾನ್ಸ್ (GT vs RR Final) ವಿರುದ್ಧದ ಫೈನಲ್‌ನಲ್ಲಿ ಬಟ್ಲರ್​ಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ, ಆದರೆ ಸೀಸನ್​ನ ಕೊನೆಯ ಪಂದ್ಯದಲ್ಲೂ ಬಟ್ಲರ್ ತಮ್ಮ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸುವುದನ್ನು ಮರೆಯಲಿಲ್ಲ.

ಮೇ 29 ರ ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನಲ್ಲಿ ಜೋಸ್ ಬಟ್ಲರ್ ಕೂಡ ಉತ್ತಮವಾಗಿ ಪ್ರಾರಂಭಿಸಿದ್ದರು. ಆದರೆ ಈ ಬಾರಿ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 35 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 39 ರನ್‌ಗಳು ಬಂದವು. ಆದಾಗ್ಯೂ, ಈ ಸಣ್ಣ ಇನ್ನಿಂಗ್ಸ್‌ನಲ್ಲೂ, ಬಟ್ಲರ್ ತನ್ನ ಹೆಸರಿನಲ್ಲಿ ಕೆಲವು ವಿಶೇಷ ದಾಖಲೆಗಳನ್ನು ಮಾಡಿದರು.

ಇದನ್ನೂ ಓದಿ:GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!

ಇದನ್ನೂ ಓದಿ
Image
GT vs RR Final: ಹಾರ್ದಿಕ್ ಸುಳ್ಳು ಹೇಳುತ್ತಿದ್ದಾನೆ ಎಂದ ನೆಹ್ರಾ! ಪ್ರಶಸ್ತಿ ಬಳಿಕ ಪಾಂಡ್ಯ- ನೆಹ್ರಾ ಮನದಾಳದ ಮಾತು ಹೀಗಿತ್ತು
Image
Chetan Sakariya: ಫೈನಲ್ ಪಂದ್ಯ ನೋಡಲು ರಾಜಸ್ಥಾನ್ ಜೆರ್ಸಿಯಲ್ಲಿ ಬಂದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯರ್
Image
GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!
  1. ಜೋಸ್ ಬಟ್ಲರ್ 17 ಇನ್ನಿಂಗ್ಸ್‌ಗಳಲ್ಲಿ 863 ರನ್‌ಗಳೊಂದಿಗೆ ಸೀಸನ್ ಕೊನೆಗೊಳಿಸಿದರು. ಈ ರೀತಿಯಾಗಿ, ಅವರು ಒಂದು ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಬಟ್ಲರ್ ಆಸ್ಟ್ರೇಲಿಯನ್ ಸ್ಟಾರ್ ಡೇವಿಡ್ ವಾರ್ನರ್ (848) ಅವರನ್ನು ಹಿಂದಿಕ್ಕಿದರು. ಆದರೆ, ವಿರಾಟ್ ಕೊಹ್ಲಿ (973) ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.
  2. ಇದರೊಂದಿಗೆ, ಬಟ್ಲರ್ ಐಪಿಎಲ್ 2022 ರಲ್ಲಿ 83 ಬೌಂಡರಿ ಮತ್ತು 45 ಸಿಕ್ಸರ್‌ಗಳನ್ನು ಹೊಡೆದರು. ಈ ಸಂದರ್ಭದಲ್ಲಿಯೂ ಅವರು ಪ್ರಸ್ತುತ ಋತುವಿನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತ ಮುಂದಿದ್ದರು. ಅವರು ಒಟ್ಟು 128 ಬೌಂಡರಿಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ 45 ಬೌಂಡರಿ ಮತ್ತು 30 ಸಿಕ್ಸರ್‌ಗಳನ್ನು ಒಳಗೊಂಡ 75 ಬೌಂಡರಿಗಳನ್ನು ಬಾರಿಸಿ ಎರಡನೇ ಸ್ಥಾನ ಪಡೆದಿದ್ದಾರೆ.
  3. ಈ 39 ರನ್‌ಗಳ ಇನ್ನಿಂಗ್ಸ್‌ನೊಂದಿಗೆ, ಬಟ್ಲರ್ ಐಪಿಎಲ್ ಋತುವಿನ ಪ್ಲೇಆಫ್ ಹಂತದಲ್ಲಿ 200 ರನ್ ಗಳಿಸಿದ ಅದ್ಭುತ ದಾಖಲೆ ಮಾಡಿದರು. ಬಟ್ಲರ್ 3 ಇನ್ನಿಂಗ್ಸ್‌ಗಳಲ್ಲಿ 234 ರನ್ ಗಳಿಸಿದರು. ಇವರನ್ನು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಅವರಿಗಿಂತ ಮೊದಲು, 2016 ರಲ್ಲಿ 190 ರನ್ ಗಳಿಸಿದ ಡೇವಿಡ್ ವಾರ್ನರ್ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದರು.
  4. ಬಟ್ಲರ್ ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೊತೆಗೆ 4 ಶತಕಗಳನ್ನು ಗಳಿಸಿದರು. ಈ ಮೂಲಕ 2016ರ ಋತುವಿನಲ್ಲಿ 4 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
  5. ಇಷ್ಟೇ ಅಲ್ಲ ಬಟ್ಲರ್ ಈ ಸೀಸನ್​ನಲ್ಲಿ ಬೌಲರ್​ಗಳನ್ನು ಹೇಗೆ ದಂಡಿಸಿದ್ದಾರೆ ಎಂಬುದು ಅವರ ಈ ಅಂಕಿ ಅಂಶಗಳಿಂದ ಗೊತ್ತಾಗಿದೆ. ಈ ಋತುವಿನಲ್ಲಿ, ಅವರು ವೇಗದ ಬೌಲರ್‌ಗಳ ವಿರುದ್ಧ 620 ರನ್ ಗಳಿಸಿದರು. ಇದು ಐಪಿಎಲ್‌ನ ಹೊಸ ದಾಖಲೆಯಾಗಿದೆ. ಅದೇ ಸಮಯದಲ್ಲಿ, ಸ್ಪಿನ್ನರ್‌ಗಳ ವಿರುದ್ಧ ಅವರ ಸರಾಸರಿ 243 ಆಗಿತ್ತು.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ