GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!
GT vs RR Final: ಆದರೆ ಅಂತಿಮ ಪಂದ್ಯದಲ್ಲಿ ಬಟ್ಲರ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೇವಲ 35 ಎಸೆತಗಳಲ್ಲಿ 39 ರನ್ ಗಳಿಸಲಷ್ಟೇ ಶಕ್ತರಾದರು. ಅವರ ವೈಫಲ್ಯದ ಪರಿಣಾಮ ರಾಜಸ್ಥಾನದ ಇನ್ನಿಂಗ್ಸ್‌ನ ಮೇಲೂ ಕಾಣಿಸಿಕೊಂಡಿದ್ದು, ತಂಡ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ್ ರಾಯಲ್ಸ್ (Rajasthan Royals)ಗೆ ಐಪಿಎಲ್ 2022 (IPL 2022)ರ ಸೀಸನ್ ಅವಿಸ್ಮರಣೀಯವಾಗಿದೆ. ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ಈ ತಂಡ 14 ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡರೂ ತಂಡ ಎಲ್ಲರನ್ನೂ ಆಕರ್ಷಿಸಿತು. ಈ ತಂಡದ ಯಶಸ್ಸಿಗೆ ಅನೇಕ ಆಟಗಾರರು ಕೊಡುಗೆ ನೀಡಿದರು, ಆದರೆ ತಂಡದ ಸ್ಫೋಟಕ ಆರಂಭಿಕ ಜೋಸ್ ಬಟ್ಲರ್ (Jos Buttler) ಮುಂಚೂಣಿಯಲ್ಲಿದ್ದರು. ಇಂಗ್ಲೆಂಡಿನ ಈ ಭರ್ಜರಿ ಬ್ಯಾಟ್ಸ್‌ಮನ್‌ಗೆ ಈ ಐಪಿಎಲ್ ಸೀಸನ್ ಪವಾಡದಂತಿತ್ತು. ಋತುವಿನ ಆರಂಭದಿಂದಲೂ ಬಟ್ಲರ್ ಉತ್ತಮ ಪ್ರದರ್ಶನ ತೋರಿಸಿದರು, ಇದು ಋತುವಿನ ಅಂತ್ಯದವರೆಗೂ ಮುಂದುವರೆಯಿತು. ಇದರೊಂದಿಗೆ ಅನೇಕ ದಾಖಲೆಗಳನ್ನು ಮಾಡಿದಲ್ಲದೆ, ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಕೂಡ ಗೆದ್ದರು. ಇದರೊಂದಿಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ 2021 ರ ನಂತರ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಹೊರತುಪಡಿಸಿ ಜೋಸ್ ಬಟ್ಲರ್ ಅವರನ್ನು ಸಹ ಉಳಿಸಿಕೊಂಡಿದೆ. ಇದಕ್ಕೆ ಉತ್ತರಿಸಿದ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿ ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದರು. ಈ ದಾಖಲೆಯ ಸೀಸನ್ನಲ್ಲಿ ಬಟ್ಲರ್ 863 ರನ್ ಗಳಿಸಿದರು. ಇದು ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ನಂತರ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಅವರು ಈ ಋತುವಿನಲ್ಲಿ 45 ಸಿಕ್ಸರ್ ಜೊತೆಗೆ 4 ಶತಕಗಳನ್ನು ಬಾರಿಸಿದರು. ಈ ಮೂಲಕ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ:IPL 2022 Final: ಐಪಿಎಲ್ ಫೈನಲ್‌ಗೆ ಸಜ್ಜಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ವಿಶೇಷತೆಗಳೇನು?
ಬಟ್ಲರ್ಗೆ ಅತಿ ಹೆಚ್ಚು ಅಂಕ
ಬಟ್ಲರ್ ಅವರ ಈ ಸ್ಮರಣೀಯ ಪ್ರದರ್ಶನವು ಅವರನ್ನು IPL 2022 ರ MVP (Most Valuable Player) ಯನ್ನಾಗಿ ಮಾಡಿತು. IPL ಅಂಕಿಅಂಶಗಳ ಪ್ರಕಾರ, ಜೋಸ್ ಬಟ್ಲರ್ ಈ ಸೀಸನ್ನಲ್ಲಿ ಅತ್ಯಧಿಕ 387.5 ಅಂಕಗಳನ್ನು ಗಳಿಸಿದರು. ಈ ವೇಳೆ ಅವರು 83 ಬೌಂಡರಿ ಹಾಗೂ 45 ಸಿಕ್ಸರ್ ಜೊತೆಗೆ 9 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಇದರ ಆಧಾರದ ಮೇಲೆ ಅವರು ಇತರ ಆಟಗಾರರಿಗಿಂತ ಹೆಚ್ಚು ಅಂಕಗಳನ್ನು ಪಡೆದರು. ಅವರ ಪ್ರದರ್ಶನಕ್ಕಾಗಿ, ಬಟ್ಲರ್ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಕೂಡ ಪಡೆದರು. ಈ ಪ್ರಶಸ್ತಿ ಜೊತೆಗೆ ಬಟ್ಲರ್ಗೆ ರೂ 10 ಲಕ್ಷ ಬಹುಮಾನವನ್ನು ಸಹ ನೀಡಲಾಯಿತು. ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಫೈನಲ್‌ನಲ್ಲಿ ತಮ್ಮ ಪ್ರಬಲ ಪ್ರದರ್ಶನದ ಆಧಾರದ ಮೇಲೆ 284.5 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು.
ಬಟ್ಲರ್ ಫೈನಲ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ ಆದರೆ ಅಂತಿಮ ಪಂದ್ಯದಲ್ಲಿ ಬಟ್ಲರ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಕೇವಲ 35 ಎಸೆತಗಳಲ್ಲಿ 39 ರನ್ ಗಳಿಸಲಷ್ಟೇ ಶಕ್ತರಾದರು. ಅವರ ವೈಫಲ್ಯದ ಪರಿಣಾಮ ರಾಜಸ್ಥಾನದ ಇನ್ನಿಂಗ್ಸ್‌ನ ಮೇಲೂ ಕಾಣಿಸಿಕೊಂಡಿದ್ದು, ತಂಡ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ 19ನೇ ಓವರ್ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಪ್ರಶಸ್ತಿ ಗೆದ್ದುಕೊಂಡಿತು. ಬಟ್ಲರ್ ಪ್ರಶಸ್ತಿಯಿಂದ ವಂಚಿತರಾಗಿರಬಹುದು, ಆದರೆ ಅವರು ತಮ್ಮ ಕಡೆಯಿಂದ ಕೊನೆಯವರೆಗೂ ಸಂಪೂರ್ಣ ಎಫರ್ಟ್ ಹಾಕಿದರು. ಬಹುತೇಕ ಪ್ರತಿ ಬ್ಯಾಟಿಂಗ್ ಫಿಗರ್‌ನಲ್ಲಿ ಪ್ರಾಬಲ್ಯ ಸಾಧಿಸಿದರು, ಆದರೆ ಕೊನೆಯಲ್ಲಿ ಟ್ರೋಫಿ ಅವರ ಭಾಗವಾಗಲು ಸಾಧ್ಯವಾಗಲಿಲ್ಲ.
Published On - 2:56 pm, Mon, 30 May 22