IPL 2022 Award Winners: ಐಪಿಎಲ್ 2022 ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಯಾರು?; ಇಲ್ಲಿದೆ ಎಲ್ಲ ಪ್ರಶಸ್ತಿಯ ಸಂಪೂರ್ಣ ಮಾಹಿತಿ

Jos Buttler: ಐಪಿಎಲ್ 2022 ಪ್ರಶಸ್ತಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ 20 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ರನ್ನರ್ ಅಪ್ ಆದ ರಾಜಸ್ಥಾನ್ ತಂಡಕ್ಕೆ 12.5 ಕೋಟಿ ರೂ. ನೀಡಲಾಯಿತು. ಫೈನಲ್ ಪಂದ್ಯ ಮುಕ್ತಾಯವಾದ ನಂತರ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಆಟಗಾರರಿಗೆ ನೀಡಲಾಯಿತು. ಈ ಬಗ್ಗೆ ಮಾಹಿತಿ ಇಲ್ಲಿದೆ.

IPL 2022 Award Winners: ಐಪಿಎಲ್ 2022 ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಯಾರು?; ಇಲ್ಲಿದೆ ಎಲ್ಲ ಪ್ರಶಸ್ತಿಯ ಸಂಪೂರ್ಣ ಮಾಹಿತಿ
IPL 2022 Awards
Follow us
| Updated By: Vinay Bhat

Updated on: May 30, 2022 | 11:40 AM

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2022ರ (IPL 2022) ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (GT vs RR) ತಂಡ ಗೆದ್ದು ಬೀಗಿದ್ದು ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿಗೆ ಮುತ್ತಿಕ್ಕಿದ ಸಾಧನೆ ಮಾಡಿದೆ. ಹೆಸರಿಗೆ ತಕ್ಕಂತೆ ಆಲ್ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ (Hardik Pandya) ತಂಡದ ಜಯದಲ್ಲಿ ಮುಖ್ಯ ಪಾತ್ರವಹಿಸಿದರು. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಕಾದಾಟ ಅಂದುಕೊಂಡಷ್ಟರ ಮಟ್ಟಿಗೆ ರೋಚಕತೆ ಪಡೆಯಲಿಲ್ಲ ಎಂಬುದು ನಿಜ. ಟೈಟಾನ್ಸ್ ತಂಡದ ಟೈಟ್ ಬೌಲಿಂಗ್​ಗೆ ರಾಜಸ್ಥಾನ್ ಸುಸ್ತಾಯಿತು. ಈ ಜಯದ ಮೂಲಕ 20 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ರನ್ನರ್ ಅಪ್ ಆದ ರಾಜಸ್ಥಾನ್ ತಂಡಕ್ಕೆ 12.5 ಕೋಟಿ ರೂ. ನೀಡಲಾಯಿತು. ಫೈನಲ್ ಪಂದ್ಯ ಮುಕ್ತಾಯವಾದ ನಂತರ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಆಟಗಾರರಿಗೆ ನೀಡಲಾಯಿತು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಈ ಬಾರಿಯ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಆರ್ ತಂಡದ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಆಡಿದ 17 ಪಂದ್ಯಗಳಿಂದ 57.53ರ ಸರಾಸರಿ ಹಾಗೂ 149.05ರ ಸ್ಟ್ರೈಕ್ ರೇಟ್​ನೊಂದಿಗೆ 863 ರನೆಎಗಳಿಸಿ ಮಿಂಚಿದರು. ಇವರ ಈ ಪ್ರದರ್ಶನದಲ್ಲಿ 4 ಶತಕ ಹಾಗೂ 4 ಅರ್ಧಶತಕ ಒಳಗೊಂಡಿದೆ. ಇನ್ನು ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು. ಇಡೀ ಸೀಸನ್​ನಲ್ಲಿ ಇವರು 17 ಪಂದ್ಯಗಳಲ್ಲಿ 19.51ರ ಸರಾಸರಿ ಮತ್ತು 7.75ರ ಎಕಾನಮಿಯೊಂದಿಗೆ 27 ವಿಕೆಟ್ ಪಡೆದು ಮಿಂಚಿದ್ದಾರೆ. ಇವರಿಬ್ಬರೂ 10 ಲಕ್ಷ ರೂ. ಬಾಜಿಕೊಂಡರು.

Hardik Pandya: ಇದು ಪ್ರಪಂಚಕ್ಕೆ ಒಂದು ಸಂದೇಶ: ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಹೀಗೆ ಹೇಳಿದ್ದೇಕೆ?

ಇದನ್ನೂ ಓದಿ
Image
GT vs RR, IPL 2022 Final: ಫೈನಲ್​ನಲ್ಲಿ ಗೆದ್ದ ತಕ್ಷಣ ಗುಜರಾತ್ ಟೈಟಾನ್ಸ್ ಆಟಗಾರರು ಮಾಡಿದ್ದೇನು ನೋಡಿ
Image
IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ
Image
IPL 2022 Closing Ceremony: ವಿಶ್ವ ದಾಖಲೆ ನಿರ್ಮಿಸಿದ ಬಿಸಿಸಿಐ
Image
IPL 2022 Final GT vs RR: ಫೈನಲ್ ಪ್ಲೇಯಿಂಗ್ ಇಲೆವೆನ್

ಇನ್ನು ತಮ್ಮ ಮಾರಕ ಬೌಲಿಂಗ್​ನಿಂದ ಗಮನ ಸೆಳೆದ ಉಮ್ರಾನ್ ಮಲ್ಲಿಕ್, 2022ರ ಐಪಿಎಲ್ ಟೂರ್ನಿಯ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ಪಡೆದಿದ್ದಾರೆ. ಸನ್ರೈಸರ್ಸ್ ಹೈದರಬಾದ್ ತಂಡದ ವೇಗದ ಬೌಲಿಂಗ್ ಅಸ್ತ್ರವಾಗಿದ್ದ ಮಲ್ಲಿಕ್, 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದು, 20.18ರ ಬೌಲಿಂಗ್ ಸರಾಸರಿ ಹೊಂದಿ 10 ಲಕ್ಷ ರೂ. ತಮ್ಮದಾಗಿಸಿದರು. ಅಂತೆಯೆ ಆರ್​ಸಿಬಿ ತಂಡದ ದಿನೇಶ್ ಕಾರ್ತಿಕ್ ಈ ಸೀಸನ್​ನ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಪಡೆದರು. ಇವರು ಟಾಟಾ ಪಂಚ್ ಕಾರ್ ಪಡೆದುಕೊಂಡರು. 2022ರ ಐಪಿಎಲ್​ನಲ್ಲಿ ಹಲವು ಅದ್ಭುತ ಕ್ಯಾಚ್​ಗಳನ್ನು ನಾವು ನೋಡಿದ್ದೇವೆ. ಇದರಲ್ಲಿ ಕೆಕೆಆರ್-ಎಲ್‌ಎಸ್​​ಜಿಸಿ ನಡುವಿನ ಪಂದ್ಯದಲ್ಲಿ ಎವಿನ್ ಲೆವಿಸ್ ಹಿಡಿದ ಅದ್ಭುತ ಕ್ಯಾಚ್, 15ನೇ ಆವೃತ್ತಿಯ ಕ್ಯಾಚ್ ಆಫ್ ದಿ ಸೀಸನ್ ಎನಿಸಿತು. ಇವರಿಗೆ ಕೂಡ 10 ಲಕ್ಷ ಸಿಕ್ಕಿತು. ಸೀಸನ್ ಉದ್ದಕ್ಕೂ ಸ್ಪರ್ಧಾತ್ಮಕವಾಗಿ ಕ್ರೀಡಾ ಸ್ಪೂರ್ತಿ ಮೆರೆದ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು 2022ರ ಐಪಿಎಲ್​ನ ಫೇರ್-ಪ್ಲೇ ಪ್ರಶಸ್ತಿ ಹಂಚಿಕೊಂಡವು.

ಐಪಿಎಲ್ 2022ರ ಉದಯೋನ್ಮುಖ ಆಟಗಾರ – ಉಮ್ರಾನ್ ಮಲಿಕ್ – 10 ಲಕ್ಷ.

ಅನ್ ಅಕಾಡೆಮಿ ಲೆಟ್ಸ್ ಕ್ರ್ಯಾಕ್ ಇಟ್ ಸಿಕ್ಸ್ ಅವಾರ್ಡ್ ಆಫ್ ದಿ ಸೀಸನ್ – ಜೋಸ್ ಬಟ್ಲರ್ – 10 ಲಕ್ಷ.

ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್ – ಜೋಸ್ ಬಟ್ಲರ್ – 10 ಲಕ್ಷ.

ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್ – ಜೋಸ್ ಬಟ್ಲರ್ – 10 ಲಕ್ಷ.

ಫಾಸ್ಟೆಸ್ಟ್ ಡಿಲವರಿ ಆಫ್ ದ ಸೀಸನ್ – ಲಾಕಿ ಫರ್ಗುಸನ್ (157.3 KMPH) – 10 ಲಕ್ಷ.

ರುಪೇ ಆನ್ ದಿ ಗೋ 4s ಆಫ್ ದಿ ಸೀಸನ್ – ಜೋಸ್ ಬಟ್ಲರ್ – 10 ಲಕ್ಷ.

ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀಸನ್ – ಜೋಸ್ ಬಟ್ಲರ್ – 10 ಲಕ್ಷ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು