IPL 2022 Final: ಫೈನಲ್ ಪಂದ್ಯದಲ್ಲಿ ಆಟಗಾರರ ಮುಂದಿದೆ ಹಲವು ಮೈಲುಗಲ್ಲು

IPL 2022 Final: ಫೈನಲ್ ಪಂದ್ಯದಲ್ಲಿ ಆಟಗಾರರ ಮುಂದಿದೆ ಹಲವು ಮೈಲುಗಲ್ಲು
IPL 2022, Final GT vs RR

IPL 2022, Final GT vs RR: ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಮಿಂಚಿದ್ದು, ಹೀಗಾಗಿ ಅಂತಿಮ ಹಣಾಹಣಿಯಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

TV9kannada Web Team

| Edited By: Zahir PY

May 29, 2022 | 5:43 PM

IPL 2022: 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಪಂದ್ಯಗಳ ನಂತರ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್​ಗೆ ವೇದಿಕೆ ಸಜ್ಜಾಗಿದೆ. ಅಂತಿಮ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಸೆಣಸಲಿದೆ. ಉಭಯ ತಂಡಗಳೂ ಬಲಿಷ್ಠವಾಗಿರುವ ಕಾರಣ ಫೈನಲ್ ಕದನದಲ್ಲಿ ಭರ್ಜರಿ ಕಾದಾಟವನ್ನು ಎದುರು ನೋಡಬಹುದು. ಏಕೆಂದರೆ ಗುಜರಾತ್ ಟೈಟಾನ್ಸ್​ ಪರ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಇಬ್ಬರೂ ಕ್ರಮವಾಗಿ 453 ಮತ್ತು 449 ರನ್‌ ಗಳಿಸಿದ್ದಾರೆ. ಇನ್ನು ಮೊಹಮ್ಮದ್ ಶಮಿ 19 ವಿಕೆಟ್ ಉರುಳಿಸಿದ್ದರೆ, ರಶೀದ್ ಖಾನ್ ಇದುವರೆಗೆ 18 ವಿಕೆಟ್ ಪಡೆದಿದ್ದಾರೆ.

ಅತ್ತ ರಾಜಸ್ಥಾನ್ ರಾಯಲ್ಸ್​ ಪರ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ನಾಲ್ಕು ಶತಕಗಳು ಮತ್ತು 4 ಅರ್ಧ ಶತಕಗಳೊಂದಿಗೆ 824 ರನ್‌ಗಳಿಸಿದ್ದಾರೆ. ಹಾಗೆಯೇ ಯುಜ್ವೇಂದ್ರ ಚಾಹಲ್ 26 ವಿಕೆಟ್ ಪಡೆಯುವ ಅತೀ ಹೆಚ್ಚು ವಿಕೆಟ್​ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಂದರೆ ಇಲ್ಲಿ ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಮಿಂಚಿದ್ದು, ಹೀಗಾಗಿ ಅಂತಿಮ ಹಣಾಹಣಿಯಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೆ ಹಲವು ದಾಖಲೆ ಬರೆಯುವ ಅವಕಾಶ ಕೂಡ ಇದೆ. ಆಗಿದ್ರೆ ಫೈನಲ್ ಪಂದ್ಯದಲ್ಲಿ ಮೂಡಿಬರಲಿರುವ ಮೈಲುಗಲ್ಲುಗಳೇನು ನೋಡೋಣ…

 1. ಐಪಿಎಲ್​ನಲ್ಲಿ 50 ಸಿಕ್ಸ್​ ಬಾರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲು ಶುಭಮನ್ ಗಿಲ್ (46) ಗೆ ನಾಲ್ಕು ಸಿಕ್ಸ್​ಗಳ ಅವಶ್ಯಕತೆಯಿದೆ.
 2. ಐಪಿಎಲ್​ ಸೀಸನ್​ವೊಂದರಲ್ಲಿ ಅತೀ ಹೆಚ್ಚು ರನ್​ ಬಾರಿಸಿದ 2ನೇ ಆಟಗಾರ ಡೇವಿಡ್ ವಾರ್ನರ್ (848) ಅವರ ದಾಖಲೆ ಮುರಿಯಲು ಜೋಸ್ ಬಟ್ಲರ್ (824)ಗೆ 25 ರನ್‌ಗಳ ಅಗತ್ಯವಿದೆ.
 3. ಡೇವಿಡ್ ಮಿಲ್ಲರ್ (2423) ಐಪಿಎಲ್‌ನಲ್ಲಿ 2500 ರನ್ ಪೂರೈಸಲು 77 ರನ್‌ಗಳ ಅಗತ್ಯವಿದೆ.
 4. ಐಪಿಎಲ್​ನಲ್ಲಿ 2500 ರನ್‌ಗಳನ್ನು ತಲುಪಲು ವೃದ್ಧಿಮಾನ್ ಸಹಾ (2422)ಗೆ 78 ರನ್‌ಗಳ ಅವಶ್ಯಕತೆಯಿದೆ.
 5. ಐಪಿಎಲ್ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ದಾಖಲೆ ಬರೆಯಲು ಯುಜ್ವೇಂದ್ರ ಚಹಾಲ್​ಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ.
 6. ಹಾರ್ದಿಕ್ ಪಾಂಡ್ಯ (1929) ಐಪಿಎಲ್​ ಲೀಗ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಲು 71 ರನ್‌ಗಳ ಅಗತ್ಯವಿದೆ.
 7. ಐಪಿಎಲ್​ನಲ್ಲಿ 100 ವಿಕೆಟ್‌ಗಳನ್ನು ಪೂರೈಸಲು ಮೊಹಮ್ಮದ್ ಶಮಿಗೆ 2 ವಿಕೆಟ್ ಅಗತ್ಯವಿದೆ.
 8. ಐಪಿಎಲ್​ನಲ್ಲಿ 150 ಬೌಂಡರಿಗಳನ್ನು ತಲುಪಲು ಹಾರ್ದಿಕ್ ಪಾಂಡ್ಯಗೆ ಏಳು ಬೌಂಡರಿಗಳ ಅವಶ್ಯಕತೆಯಿದೆ.
 9. ಪ್ರಸಿದ್ಧ್ ಕೃಷ್ಣ (48) ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಎರಡು ವಿಕೆಟ್‌ಗಳ ಅಗತ್ಯವಿದೆ.
 10. ಟಿ20 ಕ್ರಿಕೆಟ್‌ನಲ್ಲಿ 4000 ರನ್ ಗಳಿಸಲು ವೃದ್ಧಿಮಾನ್ ಸಹಾ (3962)ಗೆ 38 ರನ್‌ಗಳ ಅಗತ್ಯವಿದೆ.
 11. T20 ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಅಲ್ಜಾರಿ ಜೋಸೆಫ್ (48) ಗೆ ಎರಡು ವಿಕೆಟ್‌ಗಳ ಅಗತ್ಯವಿದೆ.
 12. ಐಪಿಎಲ್‌ನಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲು ಆರ್ ಅಶ್ವಿನ್ (157) ಅವರಿಗೆ ಕೇವಲ ಒಂದು ವಿಕೆಟ್​ನ ಅಗತ್ಯವಿದೆ.
 13. ಟಿ20 ಕ್ರಿಕೆಟ್‌ನಲ್ಲಿ 300 ಬೌಂಡರಿಗಳನ್ನು ಪೂರೈಸಲು ಮ್ಯಾಥ್ಯೂ ವೇಡ್ (295)ಗೆ ಐದು ಬೌಂಡರಿಗಳ ಅಗತ್ಯವಿದೆ.
 14. T20 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್​ ಪರ 250 ಬೌಂಡರಿಗಳನ್ನು ಪೂರೈಸಲು ಸಂಜು ಸ್ಯಾಮ್ಸನ್ (247) ಗೆ ಮೂರು ಬೌಂಡರಿಗಳ ಅಗತ್ಯವಿದೆ.
 15. ಐಪಿಎಲ್​ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲು ಯುಜುವೇಂದ್ರ ಚಹಾಲ್​ಗೆ 2 ವಿಕೆಟ್​ಗಳ ಅವಶ್ಯಕತೆಯಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada