AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಸಂಕಷ್ಟದಲ್ಲಿರುವ ಲಂಕಾ ನೆರವಿಗೆ ದಾವಿಸಿದ ಟೀಂ ಇಂಡಿಯಾ; ಟಿ20 ಸರಣಿ ಆಯೋಜನೆಗೆ ಸಿದ್ಧತೆ

IND vs SL: ಶ್ರೀಲಂಕಾದ ಪತ್ರಿಕೆ ದಿ ಸಂಡೇ ಟೈಮ್ಸ್ ವರದಿಯ ಪ್ರಕಾರ, ಭಾರತವು ಶ್ರೀಲಂಕಾದೊಂದಿಗೆ ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ.

IND vs SL: ಸಂಕಷ್ಟದಲ್ಲಿರುವ ಲಂಕಾ ನೆರವಿಗೆ ದಾವಿಸಿದ ಟೀಂ ಇಂಡಿಯಾ; ಟಿ20 ಸರಣಿ ಆಯೋಜನೆಗೆ ಸಿದ್ಧತೆ
IND vs SL
TV9 Web
| Edited By: |

Updated on: May 29, 2022 | 6:59 PM

Share

ಭಾರತೀಯ ಆಟಗಾರರು ಸದ್ಯ ಐಪಿಎಲ್‌ (IPL)ನಲ್ಲಿ ಬ್ಯುಸಿಯಾಗಿದ್ದು, ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನೊಂದಿಗಿನ ಭಾರತದ ಸರಣಿಯು ನಿಶ್ಚಿತವಾಗಿದೆ. ಆದರೆ ಈಗ ಅದಕ್ಕೆ ಹೊಸ ಸರಣಿಯೊಂದು ಸೇರ್ಪಡೆಗೊಳ್ಳಲಿದೆ. ಇದು ಶ್ರೀಲಂಕಾ ವಿರುದ್ಧದ ಸರಣಿ ಆಗಿರಲಿದೆ. ಶ್ರೀಲಂಕಾದ ಪತ್ರಿಕೆ ದಿ ಸಂಡೇ ಟೈಮ್ಸ್ ವರದಿಯ ಪ್ರಕಾರ, ಭಾರತವು ಶ್ರೀಲಂಕಾದೊಂದಿಗೆ (India vs Sri lanka) ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಸಮಯ ನಿಗದಿಯಾಗಿಲ್ಲ, ಆದರೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಮೊದಲು ಅಥವಾ ನಂತರ ಈ ಸರಣಿಯನ್ನು ಆಯೋಜಿಸಬಹುದು. ಪತ್ರಿಕೆ ತನ್ನ ವರದಿಯಲ್ಲಿ, “ಏಷ್ಯಾ ಕಪ್‌ಗೆ ಮೊದಲು ಅಥವಾ ನಂತರ ಶ್ರೀಲಂಕಾದೊಂದಿಗೆ ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲು ಭಾರತ ಒಪ್ಪಿಕೊಂಡಿದೆ, ಇದರಿಂದಾಗಿ ಕುಸಿತ ಕಂಡಿರುವ ಶ್ರೀಲಂಕಾ ಆರ್ಥಿಕವಾಗಿ ಲಾಭ ಪಡೆಯುತ್ತದೆ ಎಂದು ಬರೆದುಕೊಂಡಿದೆ.”

ಏಷ್ಯಾ ಕಪ್ ಯುಎಇಯಲ್ಲಿ ನಡೆಯಲಿದೆ

ಶ್ರೀಲಂಕಾ ಏಷ್ಯಾ ಕಪ್ ಅನ್ನು ಆಯೋಜಿಸಲಿದೆ, ಆದರೆ ಈ ದೇಶವು ಪ್ರಸ್ತುತ ಅಂತರ್ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಹೀಗಿರುವಾಗ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯುವ ನಿರೀಕ್ಷೆ ಗರಿಗೆದರಿದೆ. ಪತ್ರಿಕೆಯ ವರದಿಯಲ್ಲಿ ಮೂಲಗಳು ನೀಡಿರುವ ಮಾಹಿತಿಯನ್ನು ಪರಿಗಣಿಸಿದರೆ, ಏಷ್ಯಾಕಪ್ ಅನ್ನು ಯುಎಇಯಲ್ಲೂ ಆಯೋಜಿಸಬಹುದು. ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಈ ಏಷ್ಯಾಕಪ್ ಅನ್ನು ಶ್ರೀಲಂಕಾ ಆಯೋಜಿಸಿತ್ತು. ಈ ಏಷ್ಯಾಕಪ್ 2020 ರಲ್ಲಿ ನಡೆಯಬೇಕಿತ್ತು ಆದರೆ ಕೋವಿಡ್‌ನಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ. ಆದರೆ ಶ್ರೀಲಂಕಾದ ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಇದು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ
Image
IPL 2022 Final: ಐಪಿಎಲ್​ ಫೈನಲ್​ಗೆ ಸಜ್ಜಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ವಿಶೇಷತೆಗಳೇನು?
Image
IPL 2022: ಈ ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ; ಅಭಿಮಾನಿಗಳಿಗಾಗಿ ಭಾವನಾತ್ಮಕ ಟ್ವೀಟ್ ಮಾಡಿದ ಕೊಹ್ಲಿ

ಇದನ್ನೂ ಓದಿ:IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

ಕಳೆದ ಬಾರಿಯೂ ಪ್ರವಾಸ

ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸರಣಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ಜುಲೈನಲ್ಲಿಯೂ ಸರಣಿ ನಡೆದಿತ್ತು. ಭಾರತವು ತನ್ನ ಎರಡನೇ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿತ್ತು ಏಕೆಂದರೆ ಆ ಸಮಯದಲ್ಲಿ ಪ್ರಮುಖ ಆಟಗಾರರನ್ನು ಒಳಗೊಂಡ ತಂಡವು ಇಂಗ್ಲೆಂಡ್‌ನಲ್ಲಿತ್ತು. ಕೋವಿಡ್‌ನ ಆ ಕಷ್ಟದ ಅವಧಿಯಲ್ಲಿ ಭಾರತ ಶ್ರೀಲಂಕಾದೊಂದಿಗೆ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿತ್ತು. ಮೊದಲು ಏಕದಿನ ಸರಣಿ ನಡೆಯಬೇಕಿತ್ತು ಆದರೆ ನಂತರ ಎರಡೂ ದೇಶಗಳು ಟಿ20 ಸರಣಿಗೂ ಒಪ್ಪಿಕೊಂಡಿದ್ದವು.