AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಈ ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ; ಅಭಿಮಾನಿಗಳಿಗಾಗಿ ಭಾವನಾತ್ಮಕ ಟ್ವೀಟ್ ಮಾಡಿದ ಕೊಹ್ಲಿ

IPL 2022: ಕೆಲವೊಮ್ಮೆ ನಾವು ಯಶಸ್ವಿಯಾಗುತ್ತೇವೆ. ಕೆಲವೊಮ್ಮೆ ನಾವು ಯಶಸ್ವಿಯಾಗುವುದಿಲ್ಲ. ಆದರೆ ಅಭಿಮಾನಿಗಳು ಯಾವಾಗಲೂ ನಮಗೆ ಬೆಂಬಲ ನೀಡುತ್ತಿದ್ದಾರೆ.

IPL 2022: ಈ ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ; ಅಭಿಮಾನಿಗಳಿಗಾಗಿ ಭಾವನಾತ್ಮಕ ಟ್ವೀಟ್ ಮಾಡಿದ ಕೊಹ್ಲಿ
ವಿರಾಟ್ ಕೊಹ್ಲಿImage Credit source: RCB/ Twitter
TV9 Web
| Updated By: ಪೃಥ್ವಿಶಂಕರ|

Updated on: May 29, 2022 | 5:15 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್-15 ಸೀಸನ್‌ನಲ್ಲಿ ಕಪ್ ಗೆಲ್ಲುವ ಕನಸಿನೊಂದಿಗೆ ಅಖಾಡಕ್ಕಿಳಿದಿತ್ತು. ಆದರೆ ಶುಕ್ರವಾರ ಅಹಮದಾಬಾದ್‌ನಲ್ಲಿ ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಫಾಫ್ ಸೇನೆ ಸೋಲನುಭವಿಸಿತು. ಇದರಿಂದಾಗಿ 2022ರಲ್ಲಿ RCB ಪಯಣ ಅಂತ್ಯಗೊಂಡಿತು. ಹೇಗಾದರೂ ಪ್ರಶಸ್ತಿ ಗೆಲ್ಲುತ್ತೇವೆ ಎಂದುಕೊಂಡಿದ್ದ RCB ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಈ ಸಂದರ್ಭದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. “ಕೆಲವೊಮ್ಮೆ ನಾವು ಯಶಸ್ವಿಯಾಗುತ್ತೇವೆ. ಕೆಲವೊಮ್ಮೆ ನಾವು ಯಶಸ್ವಿಯಾಗುವುದಿಲ್ಲ. ಆದರೆ ಅಭಿಮಾನಿಗಳು ಯಾವಾಗಲೂ ನಮಗೆ ಬೆಂಬಲ ನೀಡುತ್ತಿದ್ದಾರೆ. ಈ ಅದ್ಭುತ ಫ್ರಾಂಚೈಸ್‌ನಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಮ್ಯಾನೇಜ್‌ಮೆಂಟ್, ಬೆಂಬಲ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. ಮುಂದಿನ ಸೀಸನ್​ನಲ್ಲಿ ನಿಮ್ಮನ್ನು ಭೇಟಿಯಾಉಗುತ್ತೇನೆ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ, ಕಳೆದ 15 ವರ್ಷಗಳಲ್ಲಿ ಆರ್‌ಸಿಬಿ ಐಪಿಎಲ್‌ ಪ್ರಶಸ್ತಿ ಗೆದ್ದಿಲ್ಲ. ಇದರೊಂದಿಗೆ ಕೊಹ್ಲಿ ನಿರೀಕ್ಷೆ ಸರಿಯಾಗಿತ್ತು. ಐಪಿಎಲ್ ಟ್ರೋಫಿ ಗೆಲ್ಲಬೇಕೆಂಬ ಕೊಹ್ಲಿ ಆಸೆ ಇನ್ನೂ ಜೀವಂತವಾಗಿದೆ. ಬೆಂಗಳೂರು ಮುಂದಿನ ವರ್ಷ ಮತ್ತೊಮ್ಮೆ ಕಪ್‌ಗಾಗಿ ಪ್ರಯತ್ನಿಸಲಿದೆ. ಆದಾಗ್ಯೂ, ಆರ್‌ಸಿಬಿ ಸತತ ಮೂರನೇ ವರ್ಷ ಪ್ಲೇ-ಆಫ್‌ಗೆ ತಲುಪಿದೆ. ಅದೃಷ್ಟವು ಪ್ಲೇ ಆಫ್ ತಲುಪುವಲ್ಲಿ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ವಿರಾಟ್ ಕೊಹ್ಲಿಯ ದುರದೃಷ್ಟವು ತಂಡದ ಭವಿಷ್ಯವನ್ನು ನಿರ್ದೇಶಿಸಿದಂತಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಕೇವಲ ಎರಡೇ ಅಡಿ ಅಂತರದಲ್ಲಿ ಪ್ರಶಸ್ತಿ ಕಳೆದುಕೊಂಡಿತು.

ಇದನ್ನೂ ಓದಿ
Image
IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!
Image
ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ಕಲಾ ಪ್ರದರ್ಶನ; ಫೈನಲ್​ಗೆ ಮೆರಗು ತರಲಿರುವ ಮಂಡ್ಯ ಕಲಾವಿದರು

ಈ ಐಪಿಎಲ್​ನಲ್ಲಿ ಆರ್​ಸಿಬಿಗೆ ಸಿಕ್ಕ ಹಣ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಈ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಡೆಯಿಂದ ಮೂರನೇ ರನ್ನರ್ ಅಪ್ ಆರ್​ಸಿಬಿಗೆ 7 ಕೋಟಿ ರೂಪಾಯಿ ನೀಡಲಾಗುತ್ತದೆ. ಅಂತೆಯೆ ಆರ್​ಸಿಬಿ ವಿರುದ್ಧ ಎಲಿಮಿನೇಟರ್​ ಪಂದ್ಯದಲ್ಲಿ ಸೋತ ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ 6.50 ಕೋಟಿ ರೂಪಾಯಿ ನೀಡಲಾಗುತ್ತಿದೆ.

ಇದನ್ನೂ ಓದಿ:IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

ಬಿಸಿಸಿಐ 2018 ವರ್ಷದಿಂದ, ತಂಡಗಳಿಗೆ ನೀಡಲಾದ ಮೊತ್ತವು ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಆದರೀಗ ಕೊರೊನಾ ಆಗಮನದ ನಂತರ ಬಹುಮಾನದ ಹಣವನ್ನು ಕಡಿತಗೊಳಿಸಲಾಗಿದೆ. ಐಪಿಎಲ್ 2020 ರ ವಿಜೇತ ಮತ್ತು ರನ್ನರ್ ಅಪ್ ತಂಡದ ಬಹುಮಾನದ ಮೊತ್ತವನ್ನು 50 ಪ್ರತಿಶತದಷ್ಟು ಕಡಿತಗೊಳಿಸಿತ್ತು. ಅಂದು ವಿಜೇತ ಮುಂಬೈ ಇಂಡಿಯನ್ಸ್‌ಗೆ 10 ಕೋಟಿ ರೂ., ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ 6.25 ಕೋಡ್ ನೀಡಲಾಗಿತ್ತು. ಪ್ಲೇಆಫ್‌ನಲ್ಲಿ ಆಡುವ ತಂಡಗಳಿಗೆ 4.375 ಕೋಟಿ ಹಂಚಿತ್ತು.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ